ಕಲ್ಪಾಳಿ ಸ್ಮಶಾನ
ಬೆಂಗಳೂರಿನ ಹಳೆಯ ಸಮಾಧಿಗಳಲ್ಲಿ ಒಂದಾದ ಕಲ್ಪಾಳಿ ಸ್ಮಶಾನವು ಸಹ ಭಯಾನಕವಾದ ವಿಶಿಷ್ಟತೆಯನ್ನು ಹೊಂದಿದೆ,ಬಿಳಿ ಬಣ್ಣದ ಬಟ್ಟೆ ಧರಿಸಿರುವ ವ್ಯಕ್ತಿಯನ್ನು ಅಲ್ಲಿ ಬಹಳ ಜನ ಕಂಡಿದ್ದಾರೆ.

ಯಾರಾದರು ಅವನನ್ನು ಸಮೀಪಿಸಲು ಪ್ರಯತ್ನಿಸಿದಾಗ ಕಣ್ಮರೆಯಾಗುತ್ತಾನೆ,ಸ್ಮಶಾನದಲ್ಲಿ ಕೆಲವು ಸ್ಥಳಗಳಲ್ಲಿ ಉಸಿರುಗಟ್ಟಿರುವ ಭಾವನೆಗಳೂ ಕೂಡಾ ವರದಿಯಾಗಿವೆ.ಕಾವಲುಗಾರರು ಸಹ ಸಮಾಧಿಗಳಿಂದ ಕೆಲವೊಂದು ವಿಚಿತ್ರತೆಗಳು ಸ್ಪಷ್ಟವಾಗಿ ಗೋಚರಿಸುತ್ತಾರೆ ಎಂದು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ:
ಸಿಟಿ ಮಾರ್ಕೆಟ್ ಬಳಿ ಇರುವ ಈ ಹಳೆಯ ಆಸ್ಪತ್ರೆಯು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಆಸ್ಪತ್ರೆ ಸಂಯುಕ್ತದಲ್ಲಿರುವ ಮರಗಳ ಮೇಲೆ ಬಿಳಿಯ ವಿಚಿತ್ರವಾದ ಚಿತ್ರಣವನ್ನು ನೋಡಿರುವುದಾಗಿ ಜನರು ವರದಿ ಮಾಡಿದ್ದಾರೆ.

ಆದರೆ ಇದು ಜನರನ್ನು ಹೆದರಿಸಲು ಮಾಡಿರುವ ಸಂಚು ಎಂದು ಹಲವರ ಅಭಿಪ್ರಾಯ,ಈ ಪ್ರೇತವು ಮೋಜಿನ ರೀತಿಯದ್ದಾಗಿದೆ.ಆಹಾರದ ಪ್ಯಾಕೆಟ್ಗಳು ಕಾಣೆಯಾಗಿವೆ ಮತ್ತು ಅದನ್ನು ದೆವ್ವಗಳು ತೆಗೆದುಕೊಳ್ಳುತ್ತಿವೆಯೆಂದು ಹೇಳಲಾಗುತ್ತದೆ.ಯಾವುದಕ್ಕು ನೀವು ಇಲ್ಲಿ ವಾಸ ಮಾಡಲು ನಿರ್ಧರಿಸಿದರೆ ನಿಮ್ಮ ಆಹಾರವನ್ನು ಸುರಕ್ಷಿತವಾಗಿರಿಸಿಕೊಳ್ಳಿ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ:
ವಿಮಾನ ನಿಲ್ದಾಣವು ಬೆಂಗಳೂರಿನ ಭಯಾನಕ ಸ್ಥಳಗಳಿಗೆ ಇತ್ತೀಚಿಗೆ ಸೇರ್ಪಡೆಯಾಗಿದೆ. ಬಿಳಿ ಬಣ್ಣದ ಬಟ್ಟೆಯಲ್ಲಿ ನಡೆದಾಡಿದ ಮಹಿಳೆ ಉಪಸ್ಥಿತಿಯನ್ನು ಪೈಲಟ್ಗಳು ವರದಿ ಮಾಡಿದ್ದಾರೆ.

ಸಿಬ್ಬಂದಿಗಳು ಕೂಡ ಬಿಯಾಲ್ನ ಕಾರ್ಗೋ ವಿಭಾಗದಲ್ಲಿ ಅವಳನ್ನು ನೋಡಿದ್ದಾರೆ.ಯಾರಾದರೂ ಸಹಾಯ ಮಾಡಲು ಅಥವಾ ಏನನ್ನಾದರೂ ಕೇಳಲು ಹತ್ತಿರವಾದರೆ,ಅವಳು ಕಣ್ಮರೆಯಾಗುತ್ತಾಳಂತೆ.BIAL ನ ಎಸ್ಕಲೇಟರ್ಗಳಿಗೆ ಸಮೀಪದಲ್ಲಿ ಪ್ರೇತದ ಬಗ್ಗೆ ವದಂತಿಗಳಿವೆ.

ಟೆರ್ರಾ ವೆರಾ,ಸೇಂಟ್ ಮಾರ್ಕ್ಸ್ ರಸ್ತೆ
ಸೇಂಟ್ ಮಾರ್ಕ್ಸ್ ರಸ್ತೆಯ ಮನೆ ಬೆಂಗಳೂರಿಗೆ ಕಿರಿಚುವ ಮತ್ತು ವಿವರಿಸಲಾಗದ ಘಟನೆಗಳಿಗೆ ಪ್ರಸಿದ್ಧವಾಗಿದೆ.ಸೇಂಟ್ ಮಾರ್ಕ್ಸ್ನಲ್ಲಿನ ಈ ವಸಾಹತು ಮನೆ ಇಬ್ಬರು ಸಹೋದರಿಯರಿಗೆ ಸೇರಿದ್ದು,ಡೊಲ್ಸ್ ಮತ್ತು ವೆರಾವಾಜ್.

2002 ರಲ್ಲಿ ಮನೆ ಭೀಕರ ಕೊಲೆಯೊಂದನ್ನು ಕಂಡಿತು.ಅಲ್ಲಿ ಇಬ್ಬರು ಸಹೋದರಿಯರಲ್ಲಿ ಒಬ್ಬರಾದ ಡೋಲ್ಸ್ ವಾಝ್ ಅಪರಿಚಿತ ಆಕ್ರಮಣಕಾರರಿಂದ ಕೊಲ್ಲಲ್ಪಟ್ಟರು.ಮತ್ತೊಬ್ಬರು ಆಸ್ತಿ ಸಮಸ್ಯೆಗಳ ಕಾರಣದಿಂದ ಹೊರಬಂದರು.ಆದರೆ ಮನೆ ಇದೀಗ ತಲೆಕೆಳಗಾದ ಶಿಲುಬೆಗಳಿಂದ ಕಿರಿಚುವಂತೆ ಹಾಗು ತಂಪಾದ ತಾಪಮಾನಗಳು ಹೀಗೆ ಎಲ್ಲಾ ರೀತಿಯ ಭಯಾನಕತೆಯಿಂದ ಹೆಸರುವಾಸಿಯಾಗಿದೆ ಮಾರ್ಪಟ್ಟಿದೆ.ಮನೆ ಕೆಡವಲ್ಪಟ್ಟಿದೆ ಆದರೆ ಕಥೆಗಳು ಮುಂದುವರಿಯುತ್ತದೆ.

M.G ರಸ್ತೆಯ ಕಾಲ್-ಸೆಂಟರ್:
ನೀವು ರಾತ್ರಿಯ ಶಿಫ್ಟ್ ಕೆಲಸ ಮಾಡುತ್ತಿದ್ದರೆ,ನೀವು ಇದನ್ನು ಓದವುದು ಒಳ್ಳೆಯದು . ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳಿಗೆ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿಯಂತ್ರಣ ಆಕೆಗೆ ಅಪಘಾತವನ್ನು ಮಾಡಿದನು.

ಆದ್ರೆ ಚಾಲಕನು ರಸ್ತೆಯ ಮೇಲೆ ಆಕೆ ಕಿರುಚುತ್ತಿದ್ದರು ಅವಳನ್ನು ಬಿಟ್ಟುಹೋದನು,ಅಲ್ಲಿ ಅವಳು ಸತ್ತಳು. ಕಚೇರಿ ಹೋಗುವವರು ಪ್ರತಿ ವರ್ಷ ಅದೇ ರಾತ್ರಿಯಲ್ಲಿ ಅವಳ ಕಿರಿಚುವಿಕೆಯನ್ನು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

NH 4
ಹೆದ್ದಾರಿಗಳಲ್ಲಿ ಪ್ರೇತದ ವಿಷಯಗಳು ಸಾಮಾನ್ಯವಾದದ್ದೇ,ಅದೇ ಸಾಲಿನಲ್ಲಿ ಈ ಕೂಡ NH 4 ಸೇರಿಕೊಂಡಿದೆ,ಒಂದು ಸುಂದರ ಹುಡುಗಿಯೊಬ್ಬಳು ಮಧ್ಯರಾತ್ರಿಯಲ್ಲಿ ಲಿಫ್ಟ್ಗಾಗಿ ಪ್ರಯಾಣಿಕರನ್ನು ಕೇಳಿಕೊಂಡಿದ್ದಾಳೆಂದು ಜನರು ಹೇಳುತ್ತಾರೆ.

ಅವಳು ಎಲ್ಲಿಗೆ ಹೋಗಬೇಕೆಂಬ ಆಕೆಯನ್ನು ಕೇಳಲು ಅವಳು ಕಾಣೆಯಾಗಿರುತ್ತಿದಳು.ಆಕೆ ಮತ್ತೆ ಕಾಣಿಸಿಕೊಂಡು ನಗಲು ಪ್ರಾರಂಭಿಸುತ್ತಾಳಂತೆ,ಇದನ್ನು ಕಂಡ ಅನೇಕ ಜನರು ಅಲ್ಲಿಂದ ಎದ್ದು ಬಿದ್ದು ಓದಿದ ಘಟನೆ ಹಲವಾರಿವೆ.

ಈ ಮೇಲಿನ ಎಲ್ಲ ಘಟನೆಗಳು ಹಲವು ಜನ ತಮ್ಮ ಸ್ವಂತ ಅನುಭವದಿಂದ ಹೇಳಿಕೊಂಡಿರುವುದು,ಇದರಲ್ಲಿ ನಿಜವೆಷ್ಟೋ ಸುಳ್ಳುಗಳೆಷ್ಟೋ ಸರಿಯಾದ ಸಾಕ್ಷಾಧಾರಗಳಿಲ್ಲ,ಆದರೆ ನೀವು ಈ ಮೇಲಿನ ಜಾಗಗಳನ್ನು ನೋಡಲು ಹೊರಟ್ಟಿದ್ದಾರೆ ನಿಮ್ಮ ಜಾಗ್ರತೆಯಲ್ಲಿ ನೀವು ಇರುವುದು ಉತ್ತಮ..

LEAVE A REPLY

Please enter your comment!
Please enter your name here