ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಕೊಲೆಗಾರ ಎಂಬ ಖ್ಯಾತಿ ಹೊಂದಿದ್ದ ನಾಥೂರಾಮ್ ಗೋಡ್ಸೆಯನ್ನು 1949 ರಲ್ಲಿ ಈ ದಿನ (ನವೆಂಬರ್ 15) ರಂದು ಗಲ್ಲಿಗೇರಿಸಲಾಯಿತು.

ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಾರ್ಯಕರ್ತರಾಗಿದ್ದರು ಹಾಗು ಇವರು ಮೊದಲು ಗಾಂಧೀಜಿಯವರ ಅನುಯಾಯಿಯಾಗಿದ್ದರು ಕೂಡ ಕೆಲವು ವಿಷಯಗಳು ಅವರನ್ನು ಗಾಂಧಿಯನ್ನು ಹತ್ಯೆ ಮಾಡುವಂತೆ ಮಾಡಿತು

ಇವರು ಗಾಂಧಿಯನ್ನು ಕೊಂದಿದ್ದರು ಎಂಬುದನ್ನು ಹೊರತುಪಡಿಸಿ ನಮಗೆಲ್ಲ ಗೋಡ್ಸೆ ಬಗ್ಗೆ ಹೆಚ್ಚು ತಿಳಿದಿಲ್ಲ.ಈ ದಿನ ನಾಥೂರಾಮ್ ವಿನಾಯಕ್ ಗೋಡ್ಸೆ ಬಗ್ಗೆ ಖಂಡಿತವಾಗಿಯೂ ನೀವು ತಿಳಿದುಕೊಳ್ಳಬೇಕಾದ ಸತ್ಯಗಳ ಪಟ್ಟಿಯನ್ನು ನಾವು ಹೊಂದಿದ್ದೇವೆ:

1. ನಾಥೂರಾಮ್ ಎಂಬ ಹೆಸರಿನ ಹಿಂದೆ ಬಹಳ ಕುತೂಹಲಕಾರಿ ಕಥೆ ಇದೆ

ಹೌದು ನಾಥೂರಾಮ್ ಎಂಬ ಹೆಸರಿನ ಹಿಂದೆ ಬಹಳ ಕುತೂಹಲಕಾರಿ ಕಥೆ ಇದೆ. ನಾಥೂರಾಮ್ ಅವರಿಗೆ ಮೂವರು ಸಹೋದರರು ಮತ್ತು ಸಹೋದರಿ ಇದ್ದರು.ಮೂವರು ಹುಡುಗರು ತಮ್ಮ ಚಿಕ್ಕವಯಸ್ಸಿನಲ್ಲೇ ಸತ್ತುಹೋದರು ಆದ್ದರಿಂದ ಅವರ ಕುಟುಂಬದಲ್ಲಿ ಪುರುಷ ಮಕ್ಕಳ ಸುತ್ತಲೂ ಶಾಪವಿದೆ ಎಂದು ನಾಥೂರಾಮ್ ಪೋಷಕರು ನಂಬಿದ್ದರು.

ಆದ್ದರಿಂದ ನಾಥೂರಾಮ್ ಜನಿಸಿದಾಗ ಅವರನ್ನು ಹುಡುಗಿಯ ರೀತಿ ಬೆಳೆಸಿದರು.ಅವರ ಜೀವನದ ಮೊದಲ ಕೆಲವು ವರ್ಷಗಳಲ್ಲಿ ಅವರು ಮೂಗುತಿಯನ್ನು (ಮರಾಠಿ ಭಾಷೆಯಲ್ಲಿ ನಾಥ್) ಧರಿಸುತ್ತಿದ್ದರು.ಇದೇ ಕಾರಣಕ್ಕೆ ಅವರಿಗೆ ನಾಥೂರಾಮ್ ಎಂಬ ಹೆಸರು ಬಂದಿತು.ನಂತರ ಅವರಿಗೆ ಕಿರಿಯ ಸಹೋದರ ಜನಿಸಿದಾಗ ಅವರ ಪೋಷಕರು ಅವರನ್ನು ಹುಡುಗನಾಗಿ ಬದಲಾಯಿಸಿದರು

2. ಮೊದಲಿಗೆ ಇವರು ಕೂಡ ಗಾಂಧೀಜಿಯವರ ಅನುಯಾಯಿಯಾಗಿದ್ದರು

ಶಾಲೆಯ ದಿನಗಳಲ್ಲಿ ನಾಥೂರಾಮ್ ಗಾಂಧಿಯವರಲ್ಲಿ ಮಹತ್ತರವಾದ ಗೌರವವನ್ನು ಹೊಂದಿದ್ದಾ ರೆಂದು ಹೇಳಲಾಗುತ್ತದೆ.ಅವರು ತಮ್ಮ ನಾಗರಿಕ ಅಸಹಕಾರ ಚಳವಳಿಯಲ್ಲಿ ಗಾಂಧಿಯವರನ್ನು ಅನುಸರಿಸಿದ್ದರು.

3. ಚಳುವಳಿಗಳಲ್ಲಿ ತಾವೇ ಮುಂದೆ ಬಂದು ಭಾಗವಹಿಸುತ್ತಿದ್ದರು

ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗೋಡ್ಸೆ ಶಾಲೆಯಿಂದ ಹೊರಬರಲು ನಿರ್ಧರಿಸಿದರು ಮತ್ತು ಹಿಂದೂ ರಾಷ್ಟ್ರೀಯ ಸಂಘಟನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಹಿಂದೂ ಮಹಾಸಭಾಗಳಂತಹ ಅನೇಕ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುದ್ದರು

4. ಹೆಚ್ಚು ವಿದ್ಯಾವಂತರಾಗಿದ್ದರು

ಅವರು ತಮ್ಮ ಕಾಲದಲ್ಲಿ ಬಹಳ ಕಲಿತ ವ್ಯಕ್ತಿಯೆಂದು ಹೆಸರಾಗಿದ್ದರು.ವೀರ್ ಸಾವರ್ಕರ್ ಸಿದ್ಧಾಂತದಲ್ಲಿ ಗೋಡ್ಸೆ ನಂಬಿದ್ದರು.ಹಾಗು ನಾರಾಯಣ ಆಪ್ಟೆ ಅವರೊಂದಿಗೆ ಸೇರಿ ಅಗ್ರನಿ ಎಂಬ ಪತ್ರಿಕೆಯನ್ನು ನಡೆಸಿದರು.ಅವರು ವೃತ್ತಪತ್ರಿಕೆಯ ಸಂಪಾದಕರಾಗಿದ್ದರು ಮತ್ತು ಅದಕ್ಕೆ ಲೇಖನಗಳನ್ನು ಬರೆದರು.

5. ಗಾಂಧೀಜಿಯವರ ಬಗ್ಗೆ ಅಸಮಾಧಾನ

ಗಾಂಧೀಜಿಯವರು ದೇಶದ ಮುಸ್ಲಿಂ ಜನಸಂಖ್ಯೆಗೆ ಹಾಗು ವಿಶೇಷವಾಗಿ ಜಿನ್ನಾಗೆ ಉದಾರವಾಗಿರುವುದರಿಂದ ಅಸಮಾಧಾನಗೊಂಡಿದ್ದಾರೆಂದು ಹೇಳಲಾಗುತ್ತದೆ.

ಭಾರತದ ವಿಭಾಗವನ್ನು ಎರಡು ಭಾಗಗಳಾಗಿ ಅಂದರೆ ಭಾರತ ಪಾಕಿಸ್ತಾನ ಎಂದು ವಿಂಗಡಣೆಮಾಡಿದ ನಂತರ ಹಾಗು ಪಾಕಿಸ್ತಾನದಲ್ಲಿನ ಅನೇಕ ಹಿಂದೂಗಳ ಕೊಲೆಗೆ ಪರೋಕ್ಷವಾಗಿ ಗಾಂಧೀಜಿಯವರೇ ಕಾರಣವೆಂದು ತೀರ್ಮಾನಿಸಿ ಗಾಂಧೀಜಿಯವರನ್ನು ಹತ್ಯೆಮಾಡಲು ನಿರ್ಧರಿಸುತ್ತಾರೆ

ಗುರುವಾರ ಬೆಳಗ್ಗೆ 5:17 ಕ್ಕೆ ಸಂಜೆ ಪ್ರಾರ್ಥನೆಯ ಸಮಯದಲ್ಲಿ 1948 ರ ಜನವರಿ 30 ರಂದು ಗೋಡ್ಸೆ ಗಾಂಧಿಯನ್ನು ಭೇಟಿಯಾದರು.ನಂತರ ಗಾಂಧಿಯನ್ನು ಮೂರು ಬಾರಿ ಎದೆಗೆ ಗುಂಡು ಹರಿಸಿ ಅವರನ್ನು ಕೊಂದರು.ವಿಚಾರಣೆಯ ನಂತರ, ನವೆಂಬರ್ 15 ರಂದು ಗೋಡ್ಸೆ ಮತ್ತು ಆಪ್ಟೆರನ್ನು 1949 ರಲ್ಲಿ ಗಲ್ಲಿಗೇರಿಸಲಾಯಿತು.

LEAVE A REPLY

Please enter your comment!
Please enter your name here