ಅತ್ಯಂತ ಕುತೂಹಲ ಕೆರಳಿಸಿದ್ದ ಅಪರೂಪದ ಸೌರಮಂಡಲ ವಿಸ್ಮಯ ಇಂದು ಸಂಭವಿಸಿದೆ. ಜಗತ್ತಿನಾದ್ಯಂತ ತೀವ್ರ ಕೌತುಕತೆ ಮೂಡಿಸಿದ್ದ ರಕ್ತ ಚಂದ್ರಮ (ನೀಲ ಶಶಾಂಕ(ಬ್ಲೂಮೂನ್) ಮತ್ತು ಚಂದ್ರಗ್ರಹಣ (ಲುನಾರ್ ಎಕ್ಲಿಪ್ಸ್)-ಈ ಮೂರು ವಿರಳ ವಿದ್ಯಮಾನಕ್ಕೆ ಇಂದು ವಿಶ್ವವೇ ಸಾಕ್ಷಿಯಾಯಿತು.

ಬೆಂಗಳೂರು ಸೇರಿದಂತೆ ಭಾರತದ ವಿವಿಧೆಡೆ ಸಂಜೆ 6.21 ರಿಂದ ಆರಂಭವಾದ ಚಂದ್ರಗ್ರಹಣ 8.37ರವರೆಗೆ ನಾನಾ ಆಕಾರದಲ್ಲಿ ಕಾಣಿಸಿಕೊಂಡಿತು.ಇಂತಹ ಖಗೋಳ ಅದ್ಭುತ ಸಂಭವಿಸುತ್ತಿರುವುದು 150 ವರ್ಷಗಳ ಬಳಿಕ ಎಂಬುದು ಮತ್ತೊಂದು ವಿಶೇಷ.

ವಿಶ್ವದ ಕೆಲವು ಪ್ರದೇಶಗಳಲ್ಲಿ ಚಂದ್ರಮನು ಕಿತ್ತಳೆ ಬಣ್ಣದಲ್ಲಿ ಗೋಚರಿಸಿದರೆ,ನಂತರದ ಹಂತಗಳಲ್ಲಿ ರಕ್ತಬಣ್ಣದಲ್ಲಿ ಕಾಣಿಸಿಕೊಂಡ. ಇನ್ನು ಕೆಲವೆಡೆ ನೀಲಿ ಬಣ್ಣದಲ್ಲೂ ಕಾಣಿಸಿಕೊಂಡಿದೆ.ಚಂದಿರನು ಶೇ.14ರಷ್ಟು ದೊಡ್ಡದಾಗಿ ಮತ್ತು ಶೇ.30ರಷ್ಟು ಉಜ್ವಲವಾಗಿ ಕಂಡುಬಂದಿದ್ದಾನೆ.ಇಂದು ಚಂದ್ರ ಭೂಮಿಗೆ 3,56,565 ಕಿ.ಮೀ.ಸನಿಹದಲ್ಲಿ ಕಾಣಿಸಿಕೊಂಡಿದ್ದಾನೆ.

courtesy : Dailyhunt

LEAVE A REPLY

Please enter your comment!
Please enter your name here