ಸಂಜೆಯ ಸಮಯದಲ್ಲಿ ಅದೃಷ್ಟ ದೇವತೆಗಳಾದ ಅಷ್ಟ ಲಕ್ಷ್ಮಿಗಳು ಮನೆಯಲ್ಲಿರಬೇಕಾದರೆ ನಮ್ಮ ಆಚಾರ-ವಿಚಾರಗಳನ್ನು ಪಾಲಿಸುತ್ತಿರಬೇಕು.ಪ್ರತಿ ನಿತ್ಯ ಜಗಳ,ಕೆಟ್ಟ ಮಾತುಗಳಲ್ಲಿ ಬೈಯುವುದು.ಯಾವ ಸಮಯದಲ್ಲಿ ಯಾವ ಕೆಲಸವನ್ನು ಮಾಡಬೇಕೋ ಅದನ್ನು ಮಾಡದೆ ಇನ್ನ್ಯಾವುದೋ ಕೆಲಸ ಮಾಡುವುದರಿಂದ ನಮಗೆ ಕಷ್ಟಗಳು ಬರುತ್ತವೆ.

ಸಾಯಂಕಾಲ ಅಥವಾ ಸೂರ್ಯಾಸ್ತದ ಸಮಯದಲ್ಲಿ ಕೆಲ ಕೆಲಸಗಳನ್ನು ಮಾಡಬಾರದು. ಸಾಯಂಕಾಲದ ಹೊತ್ತು ಸಲ್ಲದ ಕೆಲಸ ಮಾಡಿದರೆ ಸಾಯುವವರೆಗೂ ಬಡತನ ಮತ್ತು ದುಃಖ ನಮ್ಮನ್ನು ಕಾಡುತ್ತದೆ.

ಸಂಜೆ ಹೊತ್ತಿನಲ್ಲಿ ಮಾಡಬಾರದಾದ ಕೆಲಸಗಳು ಯಾವುದು ಗೊತ್ತೇ…?

01 ಸಂಜೆ ಸಮಯದಲ್ಲಿ ಜಗಳ ಮಾಡಬಾರದು

ಸಂಜೆಯ ಸಮಯದಲ್ಲಿ ಲಕ್ಷ್ಮಿಯು ವಿಹರಿಸುತ್ತಿರುತ್ತಾಳೆ.ಆದ ಕಾರಣ ನಾವು ಜಗಳ ಮಾಡಬಾರದು.ಆ ವೇಳೆ ದೇವರ ಜಪ-ತಪಗಳು ನಡೆಯಬೇಕು. ಸಂಜೆ ಸಮಯದಲ್ಲಿ ಗಲಾಟೆ ನಡೆಯುತ್ತಿದ್ದರೆ ಆ ಮನೆಗೆ ದಾರಿದ್ರ್ಯ ಬರುವುದು.

02 ಸಂಜೆಯ ಸಮಯದಲ್ಲಿ ಮಲಗಬಾರದು

ಸಂಜೆಯ ಸಮಯದಲ್ಲಿ ನಾವು ಮಲಗಬಾರದು ಅದು ಮನೆಗೆ ದರಿದವನ್ನು ತರುವುದು,ಮಲಗಿದರೆ ಮನಸ್ಸು ಮತ್ತು ನೆನಪಿನ ಶಕ್ತಿಯು ದುರ್ಬಲಗೊಳ್ಳುತ್ತದೆ. ಅಲ್ಲದೆ ಸ್ಥೂಲಕಾಯದಿಂದ ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾಗುವುದು.

03 ಸಂಜೆ ಸಮಯದಲ್ಲಿ ಮನೆಯ ಮಕ್ಕಳಿಗೆ ಹೊಡೆಯಬಾರದು,ಬಯ್ಯಬಾರದು

ಸಂಜೆ ಸಮಯದಲ್ಲಿ ಮಕ್ಕಳಿಗೆ ಕೆಟ್ಟ ಮಾತು ಬೈಯುವುದು,ಜಗಳವಾಗುವುದು ಇವೆಲ್ಲವೂ ಮನೆಗೆ ದಾರಿದ್ರ್ಯವನ್ನು ತರುವುದು ಹಾಗೂ ಮನಸಿನ ಶಾಂತಿಯನ್ನು ಹಾಳು  ಮಾಡುತ್ತವೆ.

04 ಸಂಜೆ ಹೊತ್ತಿನಲ್ಲಿ ತುಳಸಿ ಎಲೆಗಳನ್ನು ಕೀಳಬಾರದು

ಮುಸ್ಸಂಜೆಯ ಸಮಯದಲ್ಲಿ ತುಳಸಿ  ಎಲೆಗಳನ್ನು ಕೀಳಬಾರದು. ಇದರಿಂದ ವ್ಯಕ್ತಿಯ ಮನೆಗೆ ಬಡತನ ಮತ್ತು ಶಾಪ ತಗುಲುವುದು. ಮುಸ್ಸಂಜೆಯ ನಂತರ ಎಲೆಗಳನ್ನು ಕಿತ್ತರೆ ಆ ಸಸ್ಯವನ್ನು ನಿರ್ಜೀವಗೊಳಿಸಿದಂತೆ ಎಂದು ವಿಜ್ಞಾನ ಹೇಳುತ್ತದೆ.

05 ಸಂಜೆ ವೇಳೆಯಲ್ಲಿ ಲಕ್ಷ್ಮಿಯ ಧ್ಯಾನ ಮಾಡಬೇಕು

ಮೊದಲೇ ಹೇಳಿದ ಹಾಗೆ ಸಂಜೆ ವೇಳೆಯಲ್ಲಿ  ಅದೃಷ್ಟ ದೇವತೆಗಳಾದ ಅಷ್ಟ ಲಕ್ಷ್ಮಿಗಳು ಮನೆಯಲ್ಲಿರಬೇಕಾದರೆ ನಾವು ಸದಾ ಲಕ್ಷ್ಮಿಯ ಧ್ಯಾನವನ್ನು ಮಾಡಬೇಕು.ಇದರಿಂದ ನಮಗೆ ಒಳ್ಳೆಯದಾಗುವುದು.

LEAVE A REPLY

Please enter your comment!
Please enter your name here