ಬ್ಯಾಂಕ್ ಖಾತೆ ಜೊತೆ ಆಧಾರ್ ನಂಬರ್ ಲಿಂಕ್ ಮಾಡುವುದು ಈಗ ಅನಿವಾರ್ಯ. ಇನ್ನೂ ಈ ಕೆಲಸ ಮಾಡಿಲ್ಲವೆಂದಾದ್ರೆ ಆದಷ್ಟು ಬೇಗ ಮಾಡಿ.

ಯಾಕೆಂದ್ರೆ ಸುಪ್ರೀಂ ಕೋರ್ಟ್ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಅವಧಿ ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

ಮಾರ್ಚ್ 31ರೊಳಗೆ ಎಲ್ಲರೂ ತಮ್ಮ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಮಾಡಬೇಕಿದೆ.

ಈಗಾಗಲೇ ಬಹುತೇಕರು ಈ ಕೆಲಸ ಮಾಡಿದ್ದಾರೆ.ಆದ್ರೆ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಆಗಿದ್ಯಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ.

ಇದನ್ನು ಈಗ ಸುಲಭವಾಗಿ ಚೆಕ್ ಮಾಡಬಹುದಾಗಿದೆ.ಮೊದಲು ಯುಐಡಿಎಐ ಅಧಿಕೃತ ವೆಬ್ಸೈಟ್ uidai.gov.inಗೆ ಭೇಟಿ ನೀಡಬೇಕು.

ನಂತ್ರ ಆಧಾರ್ ಸೇವೆ (Aadhaar Services) ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಜೊತೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ಯಾ ಎಂಬುದನ್ನು ನೋಡಲು Check Aadhaar & Bank Account Linking Status ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿರಿ…

ಕೆಲಸ ಬಿಟ್ಟಿದ್ದೀರಾ ?? ಪಿ ಎಫ್ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯುತ್ತಿಲ್ಲವೇ, ಹಾಗಾದರೆ ಈ ವಿಧಾನಗಳನ್ನು ಅನುಸರಿಸಿ ಸುಲಭವಾಗಿ ನಿಮಗೆ ನಿಮ್ಮ ಹಣ ದೊರೆಯುತ್ತದೆ

ಇದನ್ನು ಕ್ಲಿಕ್ ಮಾಡ್ತಿದ್ದಂತೆ ಹೊಸ ಪೇಜ್ ಓಪನ್ ಆಗಲಿದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.ನಂತ್ರ ಸೆಕ್ಯೂರಿಟಿ ಕೋಡ್ ನಮೂದಿಸಬೇಕು.

ಒನ್ ಟೈಮ್ ಪಾಸ್ವರ್ಡ್ ನಿಮ್ಮ ಮೊಬೈಲ್ ನಂಬರ್ ಗೆ ಬರಲಿದೆ.ಅದನ್ನು ಅಲ್ಲಿ ಹಾಕಿ ಲಾಗಿನ್ ಮಾಡಬೇಕು.

ಒಂದು ವೇಳೆ ನಿಮ್ಮ ಆಧಾರ್ ನಂಬರ್ ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗಿದ್ದರೆ Congratulations! Your Bank Aadhaar Mapping has been done ಎಂಬ ಸಂದೇಶ ಕಾಣುತ್ತದೆ.

ಇದನ್ನು ಓದಿರಿ…

ಇನ್ನು ಮುಂದೆ DL RC ಯನ್ನು ಹೀಗೂ ತೋರಿಸಬಹುದು…ಹೇಗೆ? ಓದಿ ಈ ಲೇಖನವನ್ನು ಶೇರ್ ಮಾಡಿ…

ಇದ್ರ ಜೊತೆ ನಿಮ್ಮ ಬ್ಯಾಂಕ್ ಖಾತೆ, ಯಾವಾಗ ಲಿಂಕ್ ಆಗಿದೆ ಎಂಬೆಲ್ಲ ಮಾಹಿತಿ ಸಿಗಲಿದೆ.

ಕೃಪೆ : ಡೈಲಿ ಹಂಟ್

LEAVE A REPLY

Please enter your comment!
Please enter your name here