ಬೆಂಗಳೂರಿನ ಕೆರೆಗಳ ಬಗ್ಗೆ ನಿಮಗೆಷ್ಟು ಗೊತ್ತು?

0
103

ಒಂದು ಕಾಲದಲ್ಲಿ ಕೆರೆಗಳ ನಾಡೆಂದು ಬೆಂಗಳೂರು ಪ್ರಸಿದ್ದಿಯನ್ನು ಪಡೆದಿತ್ತು.1985 ರ ಸಮಯದಲ್ಲಿ 51 ಕೆರೆಗಳನ್ನು ಹೊಂದಿದ್ದ ಬೆಂಗಳೂರು ನಗರದಲ್ಲಿ ಪ್ರಸ್ತುತ ಕೇವಲ 17 ಕೆರೆಗಳನ್ನು ನೋಡಬಹುದಾಗಿದೆ.ಆಗಿನ ಕಾಲದ ಕೆರೆಗಳು ಯಾವುವು? ಅವೆಲ್ಲ ಈಗ ಏನಾಗಿವೆ ಗೊತ್ತೇ?

ಮುಂದೆ ಓದುತ್ತ ಹೋಗಿ…

ಅಂದಿನ ಕೆರೆಗಳು

ಧರ್ಮಾಂಬುಧಿ ಟ್ಯಾಂಕ್ (ಪ್ರಸಕ್ತ ಬೆಂಗಳೂರಿನ ಬಸ್ ಸ್ಟ್ಯಾಂಡ್), ಸಂಪಂಗೀ ಟ್ಯಾಂಕ್ (ಪ್ರಸಕ್ತ ಕಂಠೀರವ ಸ್ಟೇಡಿಯಮ್) ಕೆಂಪಾಂಬುಧಿ ಟ್ಯಾಂಕ್,ಅಲ್ ಸೂರ್ ಟ್ಯಾಂಕ್,ಕಾರಂಜಿ ಟ್ಯಾಂಕ್, ಮತ್ತು ಚೆನ್ನಮ್ಮ ಟ್ಯಾಂಕ್,ಕೆಂಪೇಗೌಡರ ಕಾಲದಲ್ಲೇ ನಿರ್ಮಾಣವಾಗಿದ್ದವು.ಈ ನೀರಿನ ತಾಣಗಳು, ೨೦ ನೆಯ ಶತಮಾನದ ಪ್ರಾರಭದವರೆಗೂ ಬೆಂಗಳೂರಿನ ನಾಗರಿಕರ-ನೀರಿನ ಪೂರೈಕೆಯ ತಾಣಗಳಾಗಿದ್ದವು.

 

ಆದರೆ ಹಿಂದು-ಮುಂದು ನೋಡದೆ ಮಾಡುತ್ತಿರುವ ನಗರೀಕರಣದ ವ್ಯವಸ್ಥೆಗಳು ಹಾಗೂ ದಕ್ಷ ಆಡಳಿತಗಳ ಅಭಾವದಿಂದ, ಈ ಸುಂದರ ಕೆರೆಗಳು ಅವನತಿಹೊಂದಿ ಈಗ ಕಣ್ಮರೆಯಾಗಿವೆ.ಅವುಗಳಲ್ಲಿ ಇನ್ನೂ ಕಣ್ಣಿಗೆ ಸ್ವಲ್ಪಮಟ್ಟಿಗೆ ಗೋಚರಿಸುತ್ತಿರುವುದು ಅಲಸೂರು ಕೆರೆ ಮಾತ್ರ.

 • ಶೂಲೆ ಕೆರೆ ಈಗ ಫುಟ್ಬಾಲ್ ಸ್ಟೇಡಿಯಂ ಆಗಿದೆ.
 • ಅಕ್ಕಿ ತಿಮ್ಮನ ಹಳ್ಳಿ ಕೆರೆ ಈಗ ಕಾರ್ಪೊರೇಷನ್ ಹಾಕಿ ಸ್ಟೇಡಿಯಂ ಆಗಿದೆ.
 • ಸಂಪಂಗಿ ಕೆರೆ ಈಗ ಕಂಠಿರಾವ ಕ್ರೀಡಾಂಗಣ ಆಗಿದೆ.
 • ಧರ್ಮಾಂಬುಧಿ ಕೆರೆ ಈಗ ಕೆಂಪೇಗೌಡ ಬಸ್ ನಿಲ್ದಾಣವಾಗಿದೆ
 • ಚಲ್ಲಘಟ್ಟ ಕೆರೆ ಈಗ ಕರ್ನಾಟಕ ಗಾಲ್ಫ್ ಕ್ರೀಡಾಂಗಣವಾಗಿದೆ
 • ಕೋರಮಂಗಲದ ಕೆರೆ ಈಗ ಈಜಿಪುರ ಆಗಿದೆ.

 • ಸಿದ್ಧಿಕಟ್ಟೆ ಕೆರೆ ಈಗ ಕೆ ಆರ್ ಮಾರ್ಕೆಟ್ ಆಗಿದೆ.
 • ಕಾರಂಜಿ ಕೆರೆ ಈಗ ಗಾಂಧಿ ಬಜಾರ್ ಆಗಿದೆ.
 • ಕೆಂಪಾಬುಧಿ ಕೆರೆ ಈಗ ಕಸ ಹಾಕುವ ಮೈದಾನವಾಗಿದೆ
 • ನಾಗಶೆಟ್ಟಿಹಳ್ಳಿ ಕೆರೆ ಈಗ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿದೆ.
 • ಕಾಡುಗೊಂಡನ ಹಳ್ಳಿ ಕೆರೆ ಈಗ ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಆಗಿದೆ
 • ಡೊಮ್ಲೂರು ಕೆರೆ ಈಗ ಬಿಡಿಎ ಲೇಔಟ್ ಆಗಿದೆ
 • ಮಿಲ್ಲರ್ಸ್ ಕೆರೆ ಈಗ ಗುರುನಾನಕ ಭವನ ಹಾಗೂ  ಬ್ಯಾಡ್ಮಿಂಟನ್ ಸ್ಟೇಡಿಯಂ ಆಗಿದೆ.
 • ಸುಭಾಷ್ ನಗರ ಕೆರೆ ಈಗ ಲೇಔಟ್ ಆಗಿದೆ.
 • ಕುರುಬರ ಹಳ್ಳಿ ಕೆರೆ ಈಗ ಲೇಔಟ್ ಆಗಿದೆ.
 • ಕೋಡಿ ಹಳ್ಳಿ ಕೆರೆ ಈಗ ಲೇಔಟ್ ಆಗಿದೆ.

 • ಸಿನಿವೈಗಳು ಕೆರೆ ಈಗ ಲೇಔಟ್ ಆಗಿದೆ.
 • ಮಾರೇನ ಹಳ್ಳಿ ಕೆರೆ ಈಗ ಲೇಔಟ್ ಆಗಿದೆ.
 • ಶಿವನ ಹಳ್ಳಿ ಕೆರೆ ಈಗ ಆಟದ ಮೈದಾನ,ಬಸ್ ನಿಲ್ದಾಣ.
 • ಚೆನ್ನಮ್ಮನ ಕೆರೆ ಈಗ ಬನಶಂಕರಿ ಎರಡನೇ ಹಂತ ಆಗಿದೆ,ಅದು ಸ್ಮಶಾನ.
 • ಪುಟ್ಟೇನಹಳ್ಳಿ ಕೆರೆ ಈಗ ಜೆ.ಪಿ.ನಗರ ಆರನೇ ಹಂತ ಆಗಿದೆ.
 • ಜಕ್ಕರಾಯನ ಕೆರೆ ಈಗ ಆಟದ ಮೈದಾನವಾಗಿದೆ

LEAVE A REPLY

Please enter your comment!
Please enter your name here