ಭಾರತದ ಈ ಆಟಗಾರ ನಾಯಕ ಕೊಹ್ಲಿ ಗೆ ಸೆಡ್ಡು ಹೊಡೆಯುತ್ತಿದ್ದಾರೆ…!! ಯಾರದು ಗೊತ್ತೇ?

0
1461

ವಿರಾಟ್ ಕೊಹ್ಲಿ ಮತ್ತು ಈ ಆಟಗಾರನ ನಡುವೆ  ಯಾರು ಗ್ರೇಟ್ ಎನ್ನುವುದರ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.ಕೊಹ್ಲಿ ನಾಯಕತ್ವದಲ್ಲೇ ಈ ಆಟಗಾರ ಈ ವರ್ಷ ಪ್ರತಿ ಪಂದ್ಯದ್ಲಲೂ ಆಲ್ರೌಂಡ್ ಆಟ ಪ್ರದರ್ಶನ ಮಾಡಿದ್ದಾರೆ.ಯಾರಪ್ಪ ಈ ಆಟಗಾರ ಎಂದು ಯೋಚಿಸುತ್ತಿದ್ದೀರಾ? ಓದಿ ಮುಂದೆ..

ನಾಯಕನಿಗೆ ಸೆಡ್ಡು ಹೊಡಿತಿದ್ದಾರೆ ಈ ಆಟಗಾರ..!!!

ಈಗ ವಿಶ್ವ ಕ್ರಿಕೆಟ್​ನಲ್ಲಿ ಒಂದು ಚರ್ಚೆ ಶುರುವಾಗಿದೆ. ಈ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಯಾರು ಗ್ರೇಟ್ ಅನ್ನೋದು. ವಿರಾಟ್ ಕೊಹ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡಿತಿದ್ದಾರೆ. ಆದ್ರೂ ಈ ಬರೋಡ ಆಲ್​ರೌಂಡರ್ ಮಾತ್ರ ಕೊಹ್ಲಿಗೆ ಸೆಡ್ಡು ಹೊಡೆಯುವ ಪ್ರದರ್ಶನ ನೀಡ್ತಿದ್ದಾರೆ.ಆಲ್​ರೌಂಡ್ ಆಟದಿಂದ ಮಿಂಚುತ್ತಿದ್ದಾರೆ.

ಈ ವರ್ಷದ ಏಕದಿನ ಆಟಗಾರರ  ಪಟ್ಟಿಯಲ್ಲಿ ಇವರಿಬ್ಬರೇ ಟಾಪ್

2017ರ ಐಸಿಸಿ ಏಕದಿನ ಕ್ರಿಕೆಟ್​ನ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಈಗಾಗಲೇ ರೇಸ್ ಶುರುವಾಗಿದೆ. ಸಂಭವ್ಯ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಪ್ರಶಸ್ತಿ ದಕ್ಕಲಿದೆ. ವಿರಾಟ್​ಗೆ ಸೆಡ್ಡು ಹೊಡೆದು ಪ್ರಶಸ್ತಿ ಬಾಚಿಕೊಳ್ಳಲು ಪಾಂಡ್ಯ ರೆಡಿಯಾಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಮಾಲ್​ ಮಾಡಿರುವ ಹಾರ್ದಿಕ್ ಪ್ರಶಸ್ತಿ ನನ್ನದೇ ಅಂತಿದ್ದಾರೆ.

ಹಾರ್ದಿಕ್ ಪಾಂಡ್ಯ ಈ ವರ್ಷ 22 ಏಕದಿನ ಪಂದ್ಯಗಳನ್ನಾಡಿದ್ದು 28 ಸಿಕ್ಸ್​ಗಳನ್ನ ದಾಖಲಿಸಿದ್ದಾರೆ.25 ವಿಕೆಟ್ ಸಹ ಪಡೆದಿದ್ದಾರೆ.44.09ರ ಸರಾಸರಿಯಲ್ಲಿ 485 ರನ್ ಹೊಡೆದಿದ್ದಾರೆ. 123.09ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ 4 ಅರ್ಧಶತಕವನ್ನೂ ದಾಖಲಿಸಿದ್ದಾರೆ.

ಸಾವಿರ ರನ್ ಸರದಾರ ಕೊಹ್ಲಿ

ಈ ವರ್ಷವೂ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆಗ್ಲೇ ಒಂಡೇ ಕ್ರಿಕೆಟ್​ನಲ್ಲಿ ಈ ವರ್ಷ ಒಂದು ಸಾವಿರ ರನ್ ಗಡಿ ದಾಟಿದ್ದಾರೆ. ಈ ವರ್ಷ ಗರಿಷ್ಠ ರನ್ ಹೊಡೆದ ಬ್ಯಾಟ್ಸ್​​ಮನ್ ಎನಿಸಿಕೊಂಡಿದ್ದಾರೆ. ಸದ್ಯ ಅವರ ಫಾರ್ಮ್​ ನೋಡಿದ್ರೆ ಈ ವರ್ಷ ಅವರ ರನ್ ಒಂದುವರೆ ಸಾವಿರ ಗಡಿ ದಾಟಲಿದೆ.

ನಾಯಕ ವಿರಾಟ್ ಕೊಹ್ಲಿಗೆ ನ್ಯೂಝಿಲ್ಯಾಂಡ್ ಸರಣಿಯಲ್ಲಿನ ಮೊದಲನೇ ಪಂದ್ಯ 200 ನೇ  ಪಂದ್ಯವಾಗಲಿದೆ. ಈಗಾಗಲೇ ವಿರಾಟ್ ಕೊಹ್ಲಿ  30 ಶತಕಗಳನ್ನು ಹೊಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ ಅವರು ಎರಡನೇ ಸ್ಥಾನಕ್ಕೆ ಅಧಿಪತಿ ಆಗಲಿದ್ದಾರೆ. ಇದು ವಿಶ್ವ ದಾಖಲೆ ಎನ್ನುವುದು ಇನ್ನೊಂದು ವಿಶೇಷ ಅಂಶವಾಗಿದೆ.

ಈ ವರ್ಷ ವಿರಾಟ್ ಕೊಹ್ಲಿ 23 ಒಂಡೇ ಮ್ಯಾಚ್​ನಿಂದ 74.81ರ ಸರಾಸರಿಯಲ್ಲಿ 1197 ರನ್ ಬಾರಿಸಿದ್ದಾರೆ. 98.68ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿರುವ ಅವರು, 4 ಶತಕ, 7 ಅರ್ಧಶತಕಗಳನ್ನ ಸಿಡಿಸಿದ್ದಾರೆ.

LEAVE A REPLY

Please enter your comment!
Please enter your name here