ಭಾರತ ನ್ಯೂಝಿಲ್ಯಾಂಡ್ ಸರಣಿಯಲ್ಲಿ ಯಾವ ಯಾವ ದಾಖಲೆಗಳಾಗಲಿವೆ ಗೊತ್ತೇ?

0
108

ಭಾನುವಾರದಿಂದ ಪ್ರಾರಂಭವಾಗಲಿರುವ ಭಾರತ ನ್ಯೂಝಿಲ್ಯಾಂಡ್ ಸರಣಿಯ ಪಂದ್ಯಗಳಲ್ಲಿ ವೀಕ್ಷಕರು ಭಾರತ ಗೆದ್ದರೆ ಪಟಾಕಿ ಹೊಡೆದು ಸಂಭ್ರಮಿಸುವುದಂತೂ ಖಂಡಿತ.ಭಾರತೀಯ ಆಟಗಾರರು ಪಂದ್ಯಗಳನ್ನು ಗೆಲ್ಲುವುದಲ್ಲದೆ ದಾಖಲೆಗಳನ್ನು ಮಾಡುವುದಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.ಪಂದ್ಯ ಗೆದ್ದು ದಾಖಲೆಗಳಾದರೆ ಅಭಿಮಾನಿಗಳಿಗೆ ಡಬಲ್ ದೀಪಾವಳಿ ಖಂಡಿತ.

ಭಾರತ ನ್ಯೂಝಿಲ್ಯಾಂಡ್ ಸರಣಿಯ ಪಂದ್ಯಗಳಲ್ಲಿ ಯಾವ ಯಾವ ದಾಖಲೆಗಳಾಗಲಿವೆ ಗೊತ್ತೇ? ಓದುತ್ತ ಹೋಗಿ…

ಧೋನಿ 242 ರನ್ ಗಳಿಸಿದರೆ 10,000 ರನ್ ಗಳ  ಸರದಾರರಾಗುತ್ತಾರೆ.

ಮಹೇಂದರ್ ಸಿಂಗ್ ಧೋನಿ ಇನ್ನು 242 ರನ್ ಗಳಿಸಿದರೆ 10,000 ರನ್ ಗಳ  ಸರದಾರರಾಗುತ್ತಾರೆ.ನ್ಯೂಝಿಲ್ಯಾಂಡ್ ಸರಣಿಯಲ್ಲಿ ಈ ದಾಖಲೆ ಮಾಡಲು ಕಾದು ಕುಳಿತಿದ್ದಾರೆ. 10,000 ರನ್ ಗಳಿಸಿದರೆ 10,000 ರನ್ ಗಳಿಸಿದ ಭಾರತದ ನಾಲ್ಕನೇ ಆಟಗಾರರಾಗುತ್ತಾರೆ. ನ್ಯೂಝಿಲ್ಯಾಂಡ್ ಜೊತೆ 3 ಏಕದಿನ ಪಂದ್ಯಗಳಲ್ಲಿ ಧೋನಿ ಚನ್ನಾಗಿ ಆಡಿದರೆ ದಾಖಲೆ ಮಾಡಲಿದ್ದಾರೆ.

ಕೊಹ್ಲಿ ಗೆ 200 ನೇ  ಪಂದ್ಯ

ನಾಯಕ ವಿರಾಟ್ ಕೊಹ್ಲಿಗೆ ನ್ಯೂಝಿಲ್ಯಾಂಡ್ ಸರಣಿಯಲ್ಲಿನ ಮೊದಲನೇ ಪಂದ್ಯ 200 ನೇ  ಪಂದ್ಯವಾಗಲಿದೆ. ಈಗಾಗಲೇ ವಿರಾಟ್ ಕೊಹ್ಲಿ  30 ಶತಕಗಳನ್ನು ಹೊಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ ಅವರು ಎರಡನೇ ಸ್ಥಾನಕ್ಕೆ ಅಧಿಪತಿ ಆಗಲಿದ್ದಾರೆ. ಇದು ವಿಶ್ವ ದಾಖಲೆ ಎನ್ನುವುದು ಇನ್ನೊಂದು ವಿಶೇಷ ಅಂಶವಾಗಿದೆ.

LEAVE A REPLY

Please enter your comment!
Please enter your name here