ಮುಂದಿನ IPL ನ ವಿಶೇಷ ಏನು ಗೊತ್ತೇ? ಓದಿ ಇದನ್ನು..

0
1157

ಫಿಕ್ಸಿಂಗ್ ವಿಷಯದಲ್ಲಿ ಐಪಿಎಲ್ ನಿಂದ ನಿಷೇದಗೊಂಡಿದ್ದ  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳು ಮುಂದಿನ ಆವೃತ್ತಿಯಲ್ಲಿ ಮತ್ತೆ ಮರಳಲಿವೆ.ಕಳೆದ ಎರಡು ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಸೂಪರ್ ಜೆಂಟ್ ಹಾಗೂ ಗುಜರಾತ್ ಲಯನ್ಸ್ ಪರ ಆಡಿದ್ದ ಆಟಗಾರರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಲು ಸಿ ಎಸ್ ಕೆ ಕಸರತ್ತು ನಡೆಸಿದೆ.

ಹೀಗೆ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಇಂಡಿಯನ್ ಪ್ರೀಮಿಯರ್ ಗವರ್ನಿಂಗ್ ಕೌನ್ಸಿಲ್ ಒಪ್ಪಿದ್ದೇ ಆದ್ರೆ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಲಿದ್ದಾರೆ.

ಪುಣೆ ಹಾಗೂ ಗುಜರಾತ್ ಪರ ಆಡಿದ ಓರ್ವ ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರು ಮತ್ತೆ ತಂಡಕ್ಕೆ ಮರಳಬಹುದು.ರವೀಂದ್ರ ಜಡೇಜಾ ಅಥವಾ ಸುರೇಶ್ ರೈನಾ ಇಬ್ಬರಲ್ಲಿ ಒಬ್ಬರು ಕೂಡ ವಾಪಸ್ಸಾಗುವ ಸಾಧ್ಯತೆ ಇದೆ. ಧೋನಿ ಸಿ ಎಸ್ ಕೆ ಸೇರುವುದು ಬಹುತೇಕ ಪಕ್ಕಾ ಆಗಿದೆ.

LEAVE A REPLY

Please enter your comment!
Please enter your name here