ರೆಡ್ ಮೀ ನೋಟ್ 4 ಸ್ಫೋಟಗೊಳ್ಳಲು ಕಾರಣವೇನು ಗೊತ್ತೇ?

0
245

ಚೀನಾದ ನಂಬರ್ ಒನ್ ಕಂಪನಿ ಕ್ಸಾಯೋಮಿ ನೋಟ್ 4 ನ್ನು ತುಮಕೂರಿನಲ್ಲಿ ಖರೀದಿಸಿದ ಗ್ರಾಹಕರೊಬ್ಬರು ಸ್ಕ್ರೀನ್ ಗಾರ್ಡ್ ಹಾಕಿಸಲು ಹೋದಾಗ ಅಂಗಡಿಯಲ್ಲಿ ಮೊಬೈಲ್ ಸ್ಫೋಟಗೊಂಡಿದ್ದು ನಿಮಗೆ ಗೊತ್ತೇ ಇದೆ.ಅದಕ್ಕೆ ಕಾರಣ ಏನಿರಬಹುದು? ಮುಂದೆ ಓದಿ ಕಂಪನಿ ಏನು ಕಾರಣ ಎಂಬುದನ್ನು ಹೇಳಿದೆ…

ಇದೆ ರೀತಿ ಬೆಂಗಳೂರಿನಲ್ಲಿಯೂ ಒಮ್ಮೆ ಸ್ಫೋಟಗೊಂಡಿದ್ದು ಕೂಡ ನಿಮಗೆ ಗೊತ್ತಿರಬಹುದು..ಹೀಗೆ ಸ್ಪೋಟಗೊಂಡಿರುವುದು ಇದು 4ನೇ ಪ್ರಕರಣವಾಗಿದ್ದು,ಗ್ರಾಹಕರು ಉಪಯೋಗ ಮಾಡುವ ವಿಧಾನವೇ ಕಾರಣ ಎಂದು ಕಂಪನಿ ಹೇಳಿದೆ.

ಚಾರ್ಜರ್ ಅದೇ ಮೊಬೈಲೇದಾಗಿರಬೇಕು.ಅದನ್ನು ಬಿಟ್ಟು ಲೋಕಲ್ ಚಾರ್ಜರ್ ಗಳನ್ನೂ ಉಪಯೋಗಿಸಿದರೆ ಮೊಬೈಲ್ ಸ್ಪೋಟಗೊಳ್ಳುತ್ತದೆ.ಫೋನ್ ಚಾರ್ಜಿಂಗ್ ವೇಳೆ ಸ್ವಿಚ್ ಆಫ್  ಮಾಡುವುದರಿಂದ, ಫೋನ್ ಸ್ಪೋಟಗೊಳ್ಳುವುದಿಲ್ಲ ಅನ್ನುವುದು ಸುಳ್ಳು. ಕೆಟ್ಟ ಚಾರ್ಜರ್ ಅಥವಾ ಲೋಕಲ್ ಜಾರ್ಜರ್ ಬಳಕೆ ಎಂದಿಗೂ ಡೇಂಜರ್.

ಒಂದು ವೇಳೆ ಗ್ರಾಹಕರು ಫೋನ್ ಅದಾಗದೇ ಸ್ಫೋಟಗೊಂಡಿರುವುದನ್ನು ಸಾಬೀತು ಪಡಿಸಿದರೆ ಬದಲಿಗೆ ಹೊಸ ಫೋನ್ ನೀಡುವುದಾಗಿ ಕಂಪನಿ ತಿಳಿಸಿದೆ.ಸ್ಮಾರ್ಟ್ಫೊನ್ ಚಾರ್ಜರ್ ಗುಣಮಟ್ಟದ್ದಾಗಿದ್ದರೆ ಮತ್ತು ಲಿಥಿಯಂ-ಐಯಾನ್ ಬ್ಯಾಟರಿಗಳಾಗಿದ್ದರೆ ಮೊಬೈಲ್ ಸ್ಫೋಟಗೊಳ್ಳುವುದಿಲ್ಲ.ಈ ಎರಡೂ ವಸ್ತುಗಳೂ ಸರಿ ಇಲ್ಲದಿದ್ದರೇ ಸ್ಮಾರ್ಟ್ಫೋನ್ ಸ್ಪೋಟವಾಗುವ ಸಾಧ್ಯತೆ ಇದೆ.ಇನ್ನು ಕಳಪೆ ಗುಣಮಟ್ಟದ ಚಾರ್ಜರ್ ಬಳಸಿದ್ರೆ ಹೆಚ್ಚು ವಿದ್ಯುತ್ ಪ್ರವಹಿಸಿ ಸ್ಮಾರ್ಟ್ಫೋನ್ ಸ್ಪೋಟಗೊಳ್ಳುತ್ತದೆ.

 

ಒಂದೊಂದು ಫೋನಿಗೆ ಒಂದೊಂದು ಮಿತಿಯ ವೋಲ್ಟೇಜ್ ಅವಶ್ಯಕತೆ ಇರುತ್ತದೆ. ಹೀಗಾಗಿ ಕಂಪನಿಗಳ ಜಾರ್ಜರ್ ಬಳಸುವುದೇ ಉತ್ತಮ ಎಂದು ಕಂಪನಿ ಹೇಳಿದೆ.

LEAVE A REPLY

Please enter your comment!
Please enter your name here