ವಿಜಯನಗರ ಪತನದ ಅಸಲಿ ಕಾರಣವನ್ನು ಕೇಳಿದರೆ ನಿಮ್ಮ ಮೈ ಕುದಿಯುತ್ತದೆ
ಸುಮಾರು 250 ವರ್ಷಗಳ ಕಾಲ ಆಡಳಿತ ನಡೆಸಿದ ದಕ್ಷಿಣ ಭಾರತದ ಏಕೈಕ ಹಿಂದೂ ಸಾಮ್ರಾಜ್ಯವೆಂದರೆ ಅದು ವಿಜಯನಗರ ಸಾಮ್ರಾಜ್ಯ.ವಿಜಯನಗರದ ಗತ್ತು ವೈಭವ ವನ್ನು ನೆನೆದರೆ ಮೈ ಕಂಪಿಸುತ್ತದೆ ಹಾಗೆಯೇ ಅದರ ಪತನದ ನಿಜವಾದ ಕಾರಣವನ್ನು ಕೇಳಿದರೆ ಮೈ ಜುಮ್ಮೆನಿಸುತ್ತದೆ.

ವಿಜಯನಗರ ಸಾಮ್ರಾಜ್ಯ ಪತನದ ಅಸಲಿ ಕಾರಣಗಳು

೧) ರಾಜ್ಯದಾಹ

ಕೃಷ್ಣದೇವರಾಯನ ನಂತರ ವಿಜಯನಗರದ ಸಾಮ್ರಾಜ್ಯ ಅವನತಿಯ ಹೊಸ್ತಿಲಿನಲ್ಲಿ ಇತ್ತು,ಆದರೆ ಇದೆಲ್ಲದನ್ನು ತನ್ನ ಕೈಗೆ ತೆಗೆದುಕೊಂಡು ಸಾಮ್ರಾಜ್ಯವನ್ನು ಒಂದು ಹಂತದಲ್ಲಿ ತರುವಲ್ಲಿ ಕೃಷ್ಣದೇವರಾಯನ ಅಳಿಯನಾದ ರಾಮರಾಯನ ಪರಿಶ್ರಮ ಮೆಚ್ಚುವಂತದ್ದೆ, ಆದರೆ ಇಲ್ಲಿ ನಾವು ಗಮನಿಸಬೇಕಾದುದ್ದು ಏನೆಂದರೆ ಅಸಲಿಗೆ ರಾಮರಾಯ ಕೇವಲ ರಾಜ್ಯದ ಮುಖ್ಯಸ್ಥನಾಗಿದ್ದನು.

ಅಲ್ಲಿ ನಿಜವಾದ ರಾಜನಾಗಿದ್ದವನು ಸದಾಶಿವರಾಯ,ಆದರೆ ರಾಜ್ಯದಾಹದ ಆಸೆಯಿಂದ ರಾಮರಾಯ ಸದಾಶಿವರಾಯನನ್ನು ಕೇವಲ ಹೆಸರಿನ ರಾಜನನ್ನಾಗಿ ಮಾಡಿ ಆತನೇ ನಿಜವಾದ ಆಳ್ವಿಕೆ ಮಾಡುತ್ತಿದ್ದನು,ಇದೆ ಮುಂದೆ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ನಿಜವಾದ ಕಾರಣವಾಗಿತ್ತು.

೨) ಸ್ವಂತದವರ ಮೇಲಿನ ಅನುಮಾನ

ರಾಮರಾಯ ಅಧಿಕಾರದ ಅಮಲಿನಲ್ಲಿ ತಮ್ಮವರು ಯಾರನ್ನು ನಂಬಲಿಲ್ಲ, ತನ್ನ ಮಂತ್ರಿವರ್ಗ,ಕೃಷ್ಣದೇವರಾಯನ ಹೆಂಡತಿಯಾದ ತಿರುಮಲಾದೇವಿ ಹಾಗು ಅಸಲಿರಾಜನಾದ ಸದಾಶಿವರಾಯ ಮತ್ತು ಕೊನೆಗೆ ತನ್ನ ಪ್ರೀತಿಯ ತಮ್ಮಂದಿರನ್ನು ಆತ ನಂಬಲಿಲ್ಲ

ಆತನ ಕೆಲವು ರಾಜ್ಯಕ್ಕೆ ಕಂಟಕ ತರುವಂತಹ ಕಾರ್ಯಗಳನ್ನು ಪ್ರಶ್ನೆಮಾಡಿದ್ದಕೆ ರಾಜನಾದ ಸದಾಶಿವರಾಯನನ್ನು ಕೂಡ ಆತ ಬಂಧಿಸಿದ,ತಿರುಮಲಾದೇವಿಯು ಸದಾಶಿವರಾಯನಿಗೆ ಕುಮ್ಮತ್ತು ಕೊಡುತ್ತಿರಬಹುದೆಂದು ಅನುಮಾನಿಸಿ ಆಕೆಗೆ ಎಚ್ಚರಿಕೆಯನ್ನು ನೀಡಿದ

ಸ್ವಂತ ತಮ್ಮಂದಿರು ಅವನ ವಿರುದ್ಧ ಕಟ್ಟಿ ಮಸೆಯುವಂತೆ ಆತನೇ ಮಾಡಿಕೊಂಡ,ಇಂತಹ ಅನೇಕ ಕಾರಣದಿಂದ ರಾಮರಾಯ ಒಬ್ಬ ಕುರುಡು ದೊರೆಯಾಗಿ ವಿಜಯ ನಗರದ ಪತನಕ್ಕೆ ಕಾರಣನಾದ

೩) ಹಿಂದೂ ಅಧಿಕಾರಿಗಳನ್ನು ತೆಗೆದುಹಾಕಿದ್ದು

ಈ ಕಾರಣವು ಸಾಮ್ರಾಜ್ಯದ ಪತನಕ್ಕೆ ಅಸಲಿ ಕಾರಣವೆಂದೇ ಹೇಳಬಹುದು,ಏಕೆಂದರೆ ಅಲಿ ಆದಿಲ್ ಷ ಎಂಬ ವ್ಯಕ್ತಿಯೊಬ್ಬ ತನ್ನ ದಾಯಾದಿಗಳ ಕಾರಣದಿಂದ ಅವನ ರಾಜ್ಯದಿಂದ ಹೊರಬಂದು ರಾಮರಾಯನ ಆಸ್ಥಾನಕ್ಕೆ ಬಂದು ಅವನಿಗೆ ಇಲ್ಲೇ ವಾಸಿಸುವುದಕ್ಕೆ ಅನುಮತಿಯನ್ನು ಕೋರುತ್ತಾನೆ

ಹಿಂದೂ ಮುಸ್ಲಿಂ ಸೌಹಾರ್ದಯುತೆಯ ಕನಸನ್ನು ಕಾಣುತಿದ್ದ ರಾಮರಾಯ ಅವನನ್ನು ಇಲ್ಲೇ ಇರುವಂತೆ ಒಪ್ಪಿ ಅವನನ್ನು ಒಂದು ಕೆಲಸಕ್ಕೆ ನೇಮಿಸುತ್ತಾನೆ ಆದ್ರೆ ಆ ಜಗದಲ್ಲಿ ಮೊದಲು ಬೇರೊಬ್ಬ ಹಿಂದೂ ಅಧಿಕಾರಿ ಇರುತ್ತಾನೆ,ಹಿಂದೂ ಅಧಿಕಾರಿಯನ್ನು ಕೆಲಸದಿಂದ ತೆಗುದು ಹಾಕಿ ಆದಿಲ್ ಷ ನನ್ನ ನೇಮಿಸಿದ್ದು ಅಲ್ಲಿ ಯಾರಿಗೂ ಇಷ್ಟವಾಗುವುದಿಲ್ಲ,ಆದರೆ ಇದೆ ಮುಂದೆ ಒಂದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆಯೆಂದು ರಾಮರಾಯಕೂಡ ಊಹಿಸಿರುವುದಿಲ್ಲ

೪) ಅನ್ಯಧರ್ಮದವರ ಮೇಲಿನ ಅತಿಯಾದ ನಂಬಿಕೆ

ಮೇಲೆ ಹೇಳಿದಂತೆ ಆದಿಲ್ ಷ ಅಧಿಕಾರಿಯಾಗಿ ಕೆಲಸವಹಿಕೊಳ್ಳುತ್ತಾನೆ ಆದರೆ ಇದು ಆ ಹಿಂದೂ ಅಧಿಕಾರಿಗೆ ಸಹಿಸಲು ಆಗುವುದಿಲ್ಲ,ಆತ ಹೋಗಿ ರಾಮರಾಯನ ಬಳಿ ತನ್ನ ಆಕ್ಷೇಪವನ್ನು ಹೊರಹಾಕುತ್ತಾನೆ,ಆದರೆ ಇದಕ್ಕೆ ರಾಮರಾಯ ಉತ್ತರಿಸುವುದಿಲ್ಲ, ಇದರಿಂದ ಇನ್ನು ಕೋಪಗೊಂಡ ಆತ ಆದಿಲ್ ಷ ಹತ್ತಿರ ಬಂದು ಜಗಳ ಮಾಡುತ್ತಾನೆ

ಇದರಿಂದ ಮಾತಿಗೆ ಮಾತು ಬೆಳೆದು ಅವರಿಬ್ಬರೂ ಕತ್ತಿ ತೆಗೆಂದುಕೊಂಡು ಹೋರಾಡಲು ಮುಂದಾಗುತ್ತಾರೆ,ಇಬ್ಬರ ಜಗಳದಲ್ಲಿ ಆದಿಲ್ ಷ ಆತನಿಗೆ ಕತ್ತಿಯಿಂದ ಆತನ ತಲೆಯನ್ನು ಉರುಳಿಸಿತ್ತಾನೆ ಹಿಂದೂ ಅಧಿಕಾರಿ ಅಲ್ಲಿ ಸಾವನ್ನು ಅಪ್ಪುತ್ತಾನೆ, ಇದು ಸಾಮ್ರಾಜ್ಯದಲ್ಲಿ ಒಂದು ದೊಡ್ಡ ಕೋಲಾಹಲವನ್ನೇ ಎಬ್ಬಿಸುತ್ತದೆ, ಇದು ರಾಮರಾಯನವರೆಗೂ ಹೋಗುತ್ತದೆ

೫) ಅಣ್ಣ ತಮ್ಮಂದಿರ ನಡುವಿನ ವೈಷಮ್ಯ

ರಾಮರಾಯನ ಕೆಲವೊಂದು ನಿರ್ಧಾರಗಳನ್ನು ಸಹಿಸದ ಸದಾಶಿವರಾಯನನ್ನು ರಾಮರಾಯನು ಬಂಧಿಸುತ್ತಾನೆ, ಇದರಿಂದ ಕೋಪಗೊಂಡ ರಾಮರಾಯನ ತಮ್ಮ ತಿರುಮಲರಾಯನು ಅಣ್ಣನ ವಿರುದ್ಧ ತಿರುಗಿ ಬೀಳುತ್ತಾನೆ, ರಾಜಪಟ್ಟವನ್ನು ಸದಾಶಿವನಿಗೆ ಹಿಂತಿರುಗಿಸದಿದ್ದರೆ ಅವನ ಮೇಲೆ ಯುದ್ಧ ಮಾಡುವುದಾಗಿ ಎಚ್ಚರಿಕೆ ನೀಡುತ್ತಾನೆ ಇದರಿಂದ ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡುತ್ತದೆ

೬) ಹಿಂದೂರಾಜರುಗಳೊಂದಿಗೆ ಅಸಮಾಧಾನ

ಇದೆ ಸಮಯದಲ್ಲಿ ರಾಮರಾಯನ ಮಗ ಕೃಷ್ಣ ಅಕಾಲಿಕ ಮರಣವನ್ನು ಹೊಂದುತ್ತಾನೆ, ಇದೆ ದುಖ್ಖದಲ್ಲಿದ್ದಾಗ ಅವನ ಆಸ್ಥಾನಕ್ಕೆ ಆಶ್ರಯವನ್ನು ಬೇಡಿ ಬಂದವನೇ ಇಬ್ರಾಹಿಂ ಖುತ್ಬು ಷಾ, ಆತನನ್ನು ನೋಡಿದ ರಾಮರಾಯನಿಗೆ ತನ್ನ ಮಗ ಕೃಷ್ಣನೇ ಬರುತ್ತಿದ್ದನೇನೋ ಎಂದನಿಸುತ್ತದೆ,ನೋಡಲು ಇಬ್ರಾಹಿಂ ಕೃಷ್ಣನ ರೂಪವನ್ನೇ ಹೊಂದಿರುತ್ತಾನೆ,

ಆತ ಕೂಡ ದಾಯಾದಿಗಳ ದ್ವೇಷದಿಂದಲೇ ರಾಜ್ಯವನ್ನು ಬಿಟ್ಟು ಬಂದಿರುತ್ತಾನೆ, ಅವನಿಗೆ ಆಶ್ರಯ ನೀಡಿದ್ದು ಕೆಲವೊಂದು ಹಿಂದೂ ರಾಜರಿಗೆ ಸಹಿಸಲಾಗುವುದಿಲ್ಲ, ಇದನ್ನು ಕುರಿತು ಅವನಿಗೆ ಎಚ್ಚರಿಕೆಯನ್ನು ಕೂಡ ನೀಡುತ್ತಾರೆ, ಆದರೆ ರಾಮರಾಯ ಇದನ್ನು ಒಪ್ಪುವುದಿಲ್ಲ, ಇಬ್ರಾಹಿಂ ಗಾಗಿ ಆತ ಅವನ ಸಹೋದರ ರಾಜರುಗಳೊಂದಿಗೆ ಮನಸ್ಥಾಪವನ್ನು ಬೆಳೆಸಿಕೊಳ್ಳುತ್ತಾನೆ, ಆದ್ರೆ ಇದೆ ಇಬ್ರಾಹಿಂನಿಂದಲೇ ಇವನ ಶಿರಛೇಧನವಾಗುತ್ತದೆ ಎಂದು ಇವನಿಗೆ ಅರಿವಿರಲಿಲ್ಲ

೭) ಬಹುಮನಿ ಸುಲ್ತಾನರೊಂದಿಗೆ ವೈಷಮ್ಯ

ಆದಿಲ್ ಷಾ ಮತ್ತು ಇಬ್ರಾಹಿಂ ಇಬ್ಬರಿಗೂ ಆಶ್ರಯ ನೀಡಿದ್ದಲ್ಲದೆ ಅವರವರ ರಾಜ್ಯಗಳನ್ನು ಅವರಿಗೆ ಹಿಂತಿರುಗಿಸುವುದಾಗಿ ಅವರಿಗೆ ಮಾತನ್ನು ನೀಡುತ್ತಾನೆ,ರಾಮರಾಯನ ತಪ್ಪುಗಳಲ್ಲಿ ಮಹಾತಪ್ಪೆಂದರೆ ಇದೆ, ಅವರ ರಾಜ್ಯಗಳನ್ನು ಕೊಡಿಸುವ ಭರದಲ್ಲಿ ಆತ ಅನೇಕ ಬಹುಮನಿ ಸುಲ್ತಾನರೊಂದಿಗೆ ದ್ವೇಷವನ್ನು ಕಟ್ಟಿಕೊಳ್ಳುತ್ತಾನೆ,ಆದರೆ ಇವರೆಲ್ಲರೂ ಒಂದೇ ಎಂಬ ಭಾವನೆ ಅವನಿಗೆ ಕೊನೆಯವರೆಗೂ ಬರಲೇ ಇಲ್ಲ.

ರಾಮರಾಯ ಒಬ್ಬ ಉತ್ತಮ ಹಾಗು ನಿರಾಳ ಮನಸ್ಸಿನ ವ್ಯಕ್ತಿಯಾಗಿದ್ದರು,ರಾಜ್ಯದಾಹ ಎಂಬುದು ಆತನ ಕಣ್ಣುನ್ನು ಮುಚ್ಚಿಸಿತ್ತು. ಸ್ನೇಹಕ್ಕಾಗಿ ಅವನು ಆಯ್ದುಕೊಂಡ ವ್ಯಕ್ತಿಗಳು ಅದಕ್ಕೆ ಅರ್ಹರಲ್ಲ ಎಂಬ ಸತ್ಯ ಅವನಿಗೆ ತಿಳಿದಿರಲಿಲ್ಲ,ಏಕೆಂದರೆ ವಿಜಯನಗರ ಸಾಮ್ರ್ಯಾಜ್ಯದ ಪತನಕ್ಕೆ ಪ್ರಮುಖ ರೂವಾರಿಗಳು ಇಬ್ರಾಹಿಂ ಹಾಗು ಆದಿಲ್ ಷಾ ಆಗಿದ್ದರು, ವೈಭವೀಯುತವಾಗಿದ್ದ ರಾಜ್ಯ ಅಂದು ಸ್ಮಶಾನವಾಗಿತ್ತು.

ಯುದ್ಧದಲ್ಲಿ ಸುಲ್ತಾನರು ಗೆದ್ದರು, ಅರಮನೆ ದೇವಸ್ಥಾನಗಳೆಲ್ಲವನ್ನು ಹಾಳುಮಾಡಿದರು, ರಾಮರಾಯನನ್ನು ಬಂಧಿಸಿದರು, ತನ್ನ ಮಗನೆಂದುಕೊಂಡಿದ್ದ ಇಬ್ರಾಹಿಂ ಕಯ್ಯಿಂದಲೇ ರಾಮರಾಯನ ತಲೆ ಕಡಿಯಲ್ಪಟ್ಟಿತು,ಬರೀ ಕಡಿದದ್ದು ಮಾತ್ರವಲ್ಲದೆ ತಮ್ಮ ವಿಜಯದ ಕುರುಹಾಗಿ ಅವನ ತಲೆಯನ್ನು ಎಷ್ಟೋ ವರ್ಷಗಳ ಕಾಲ ತಮ್ಮ ಬಳಿಯೇ ಉಳಿಸಿಕೊಂಡಿದ್ದರು,ಅಲ್ಲಿಗೆ ಚಿನ್ನದ ನಾಡು ವಿಜಯನಗರದ ಕಥೆ ಮುಗಿದೇ ಹೋಗಿತ್ತು.

LEAVE A REPLY

Please enter your comment!
Please enter your name here