ವೀಳ್ಯದೆಲೆಯ ವಿಶೇಷತೆಗಳೇನು ನಿಮಗೆ ಗೊತ್ತೇ?

0
449

ವೀಳ್ಯದೆಲೆ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠವಾದದ್ದು ಹಾಗೂ ಉನ್ನತ ಸ್ಥಾನವನ್ನು ನೀಡಲಾಗಿದೆ

ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ..

ವೀಳ್ಯದೆಲೆ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ..

ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವತೆ ವಾಸ..

ವೀಳ್ಯದೆಲೆ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ

 

 

ವೀಳ್ಯದೆಲೆ ತುದಿಯಲ್ಲಿ – ಲಕ್ಷ್ಮೀವಾಸ..

ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ..

ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ..
(ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು)

ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ..
(ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ..,
ಅಹಂಕಾರ ಹಾಗೂ ದಾರಿದ್ರ್ಯಲಕ್ಷ್ಮೀ ಬರಬಾರದೆಂಬ ಅರ್ಥ..)

ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ..,

ಈ ಎಲ್ಲಾ ದೇವರುಗಳು ಇರುವುದರಿಂದ ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ..

ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆ ಹೊರಗೆ ಹಾಕಬಾರದು..ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು..ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು..ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು..

ವೀಳೆದೆಲೆಯ ಔಷದೀಯ ಉಪಯೋಗಗಳು

1 ನೋವು ನಿವಾರಕ

ವೀಳೇದೆಲೆಯು ಅದ್ಭುತ ನೋವುನಿವಾರಕವಾಗಿದೆ. ಕಡಿತ, ಮೂಗೇಟುಗಳು, ದದ್ದುಗಳು, ಉರಿಯೂತ (ಆಂತರಿಕ ಮತ್ತು ಬಾಹ್ಯ), ಅಜೀರ್ಣ, ಮಲಬದ್ಧತೆ ಮೊದಲಾದವುಗಳಿಂದ ಉಂಟಾಗುವ ನೋವು ನಿವಾರಿಸಲು ಇದನ್ನು ಬಳಸಬಹುದು. ವೀಳೇದೆಲೆಯ ಪೇಸ್ಟ್ ಅನ್ನು ತಯಾರಿಸಿಕೊಂಡು ಏಟು ಬಿದ್ದ ಜಾಗಗಳಿಗೆ ಹಚ್ಚಿದರೆ ಕಡಿಯುವಿಕೆ ಬೇಗ ಗುಣವಾಗುವುದು.

02  ಮಲಬದ್ಧತೆಗೆ ರಾಮಬಾಣ

ವೀಳೇದೆಲೆಯು ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ.ಇದು ದೇಹದ  ಸಾಮಾನ್ಯ PH ಮಟ್ಟವನ್ನು ಪುನಃಸ್ಥಾಪಿಸುತ್ತದೆ. ಪರಿಣಾಮವಾಗಿ ಮಲಬದ್ಧತೆ ಕಡಿಮೆಯಾಗುತ್ತದೆ. ಮಲಬದ್ಧತೆಗೆ ಪರಿಹಾರ ಪಡೆಯಲು ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ವೀಳೇದೆಲೆಯನ್ನು ಅಗಿಯಬಹುದು ಮತ್ತು ಅದರ ರಸವನ್ನು ಸೇವಿಸಬಹುದು.

LEAVE A REPLY

Please enter your comment!
Please enter your name here