ವೊಡಾಫೋನ್ ನಿಂದ ದೀಪಾವಳಿ ಗೆ ಭರ್ಜರಿ ಆಫರ್ ಏನದು?

0
216

ದೀಪಾವಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.ಹಬ್ಬದ ಸಡಗರಕ್ಕೆ ತಯಾರಿ ನಡೆಸಿರುವ ಗ್ರಾಹಕರಿಗೆ ಎಲ್ಲ ದೂರಸಂಪರ್ಕ ಕಂಪನಿಗಳು  ನಾ ಮುಂದು ತಾ ಮುಂದು ಎನ್ನುವಂತೆ ಒಳ್ಳೊಳ್ಳೆ ಆಫರ್ ಗಳನ್ನೂ ಬಿಡುತ್ತಿವೆ.ಅದರಲ್ಲಿ ವೊಡಾಫೋನ್ ಕೂಡ ಒಂದು ಭರ್ಜರಿ ದೀಪಾವಳಿ ಹಬ್ಬದ ಆಫರ್ ಬಿಟ್ಟಿದೆ ಏನದು ಆಫರ್ ?

ವೊಡಾಫೋನ್ ನ 399 ರೂಪಾಯಿಯ ಈ ಹೊಸ ಯೋಜನೆಯಲ್ಲಿ 6 ತಿಂಗಳವರೆಗೆ 4ಜಿ, 90 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ.

ಆದರೆ ಜಿಯೋ ಹಾಗೂ ಏರ್ಟೆಲ್ ಈಗಾಗಲೇ 399 ರೂಪಾಯಿಯ ಆಫರ್ ಅನ್ನು ತಮ್ಮ ಗ್ರಾಹಕರಿಗೆ ಒದಗಿಸಿದೆ.ಜಿಯೋ 399 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1ಜಿಬಿ ಡೇಟಾ ಸಿಗಲಿದೆ. ಆದ್ರೆ ಈ ಪ್ಲಾನ್ ಕೇವಲ 3 ತಿಂಗಳು ಮಾತ್ರ ಗ್ರಾಹಕರಿಗೆ ಲಭ್ಯವಾಗಲಿದೆ.ಆದ್ರೆ ವೊಡಾಫೋನ್ ಇಷ್ಟೇ ಬೆಲೆಯಲ್ಲಿ 6 ತಿಂಗಳವರೆಗೆ ಆಫರ್ ನೀಡುತ್ತಿದೆ.

ಏರ್ಟೆಲ್ ರೀತಿಯಲ್ಲಿಯೇ ವೊಡಾಫೋನ್ ಗ್ರಾಹಕರಿಗೆ 6 ತಿಂಗಳುಗಳ ಕಾಲ ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ.ಇದು ವೊಡಾಫೋನ್ ಪ್ರೀಪೇಡ್ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ದೀಪಾವಳಿಗಾಗಿ ಕಂಪನಿ ಗ್ರಾಹಕರಿಗೆ ಈ ಆಫರ್ ನೀಡುತ್ತಿದೆ.

LEAVE A REPLY

Please enter your comment!
Please enter your name here