ತೆಲುಗಿನ ಸ್ಟಾರ್ ನಟ ಪ್ರಭಾಸ್ ಸದ್ಯ ಸುಜಿತ್ ನಿರ್ದೆಶನದ ಹೈ ಬಜೆಟ್ ಸಿನಿಮಾ ‘ಸಾಹೋ’ ನಿರ್ಮಾಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.ವಿಶ್ವದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದ ಸಾಹಸ ದೃಶ್ಯಗಳನ್ನು ಸೆರೆಹಿಡಿಯಾಗುತ್ತಿದ್ದು,ಬಿಡುವಿನ ವೇಳೆ ನಟ ಪ್ರಭಾಸ್ ತಮ್ಮ ನೆಚ್ಚಿನ ಬೈಕಿನಲ್ಲಿ ರೈಡ್ ಮಾಡಿ ಸಂಭ್ರಮಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದು ಮಾಡಿದ ನಟ ಪ್ರಭಾಸ್ ಹೊಸ ಬೈಕ್….

ಹೌದು, ನಟ ಪ್ರಭಾಸ್ ಮುಂಬರುವ ಚಿತ್ರ ‘ಸಾಹೋ’ಗಾಗಿ ದುಬೈ ಸೇರಿದಂತೆ ಹಲವು ಕಡೆ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದ್ದು,ಚಿತ್ರದಲ್ಲಿ ಬರುವ ಬೈಕ್ ಚೇಸಿಂಗ್ ಒಂದರ ದೃಶ್ಯಕ್ಕಾಗಿ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಬೈಕ್ ಬಳಕೆ ಮಾಡಿರುವುದು ಕುತೂಹಲ ಹುಟ್ಟುಹಾಕಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದು ಮಾಡಿದ ನಟ ಪ್ರಭಾಸ್ ಹೊಸ ಬೈಕ್….

ದುಬಾರಿ ಬೆಲೆಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಬೈಕ್‌ಗಳು ಪರ್ಫಾಮೆನ್ಸ್ ಬೈಕ್ ಮಾದರಿಯಾಗಿದ್ದು,ಸಾಹೋ ಚಿತ್ರಕಥೆಯಲ್ಲಿ ಬರುವ ಈ ಬೈಕ್ ಚಿತ್ರದಲ್ಲಿ ಹೊಸ ತಿರುವು ನೀಡಲಿದೆ ಎಂಬ ಮಾಹಿತಿ ಕೂಡಾ ಬಹಿರಂಗವಾಗಿದೆ.

ಸದ್ಯ ಟ್ರಯಂಫ್ ಸ್ಟ್ರೀಟ್ ಟ್ರಿಪ್ಲಲ್ ಆರ್‌ಎಸ್ ಮೂಲಕ ನಾಯಕ ನಟ ಪ್ರಭಾಸ್ ಅವರು ಚಿತ್ರದ ನಾಯಕಿ ಶ್ರದ್ಧಾ ಕಪೂರ್‌ಗಾಗಿ ಚೇಸ್ ಮಾಡುವ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದ್ದು,ಚಿತ್ರದಲ್ಲಿ ಟ್ರಯಂಫ್ ಬೈಕಿನ ಪಾತ್ರ ಎನು ಎನ್ನುವುದು ಚಿತ್ರ ಬಿಡುಗಡೆ ನಂತರವಷ್ಟೇ ತಿಳಿಯಬೇಕಿದೆ.

ಇನ್ನು ಎಕ್ಸ್‌ಶೋರಂ ಪ್ರಕಾರ ಸುಮಾರು 11 ಲಕ್ಷ ಬೆಲೆ ಹೊಂದಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಬೈಕ್‌ಗಳು ಅದ್ಬುತ ಪರ್ಫಾಮೆನ್ಸ್ ಮಾದರಿಯಾಗಿದ್ದು,ಕಳೆದ ವರ್ಷವಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವ ಮೂಲಕ ಹಲವು ವಿಶೇಷತೆಗಳಿಗೆ ಕಾರಣವಾಗುತ್ತಿದೆ.

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಬೈಕ್‌ಗಳು ಪ್ರಸ್ತುತ 765 ಸಿಸಿ ಇನ್‌ಲೈನ್ 3 ಸಿಲಿಂಡರ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು,77ಎನ್‌ಎಂ ಟಾರ್ಕ್ ಮತ್ತು 121ಬಿಎಚ್‌ಪಿ ಶಕ್ತಿ ಉತ್ಪಾದನಾ ಗುಣಹೊಂದಿದೆ.

ಈ ಮೋಟಾರ್ ಸೈಕಲ್ ಹೊಸ ಕ್ರ್ಯಾಂಕ್, ಪಿಸ್ಟನ್‌ಗಳು ಮತ್ತು ನಿಕ್ಸಿಲ್ ಲೇಪಿತ ಅಲ್ಯೂಮಿನಿಯಂ ಬ್ಯಾರೆಲ್ಸ್ ಮತ್ತು ಹೆಚ್ಚಿಸಲಾದ ಬೋರ್ ಮತ್ತು ಸ್ಟ್ರೋಕ್ ಸೇರಿದಂತೆ 80 ಹೊಸ ಬಿಡಿಭಾಗಗಳನ್ನು ಪಡೆಯುತ್ತದೆ.

ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಮೋಟಾರ್ ಸೈಕಲ್ ಮುಂಚೂಣಿಯಲ್ಲಿರುವ ಬ್ರೆಂಬೊ ಎಂ50 ಬ್ರೇಕ್ಸ್, ಷೋವ ಬಿಗ್ ಪಿಸ್ಟನ್ ಫೋರ್ಕ್ಸ್ ಫ್ರಂಟ್ ಮತ್ತು ಒಹ್ಲಿನ್ ಮನೊಶಾಕ್ ಸಸ್ಪೆನ್‌ಷನ್ ಮುಂತಾದವುಗಳನ್ನು ಬೈಕಿನ ಹಿಂಭಾಗದಲ್ಲಿ ಅಳವಡಿಸಲಾಗಿದೆ.

ಇದಲ್ಲದೆ, ಹೊಸ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ 5-ಇಂಚಿನ ಪೂರ್ಣ ಬಣ್ಣದ ಟಿಎಫ್‌ಟಿ ಪರದೆಯನ್ನು ಪಡೆಯುತ್ತದೆ.ಇದು ಡಬಲ್ಸ್ ಇನ್ಸ್ಟ್ರು‌ಮೆಂಟ್ ಕ್ಲಸ್ಟರ್‌ ಪಡೆಯುತ್ತದೆ ಹಾಗು ಪರದೆಯನ್ನು ಎರಡು ವಿಭಿನ್ನ ಆವೃತಿಗಳಲ್ಲಿ ನೋಡಬಹುದು ಮತ್ತು ಚಾಲಕನಿಗೆ ಸರಿ ಹೊಂದುವಂತೆ ಮಾಡಬಹುದು.

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಸ್ವಿಚ್ ಮಾಡಬಹುದಾದ ಎಬಿಎಸ್(ಆಯಂಟಿ ಲಾಕ್ ಬ್ರೇಕ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡ್-ಬೈ-ವೈರ್ ಥ್ರೊಟಲ್‌ಗಳನ್ನು ಒಳಗೊಂಡಿದೆ.ರಸ್ತೆ,ಮಳೆ,ಕ್ರೀಡಾ,ಟ್ರ್ಯಾಕ್ ಮತ್ತು ಇಂಡಿವಿಜುಯಲ್ ಎಂಬ ಐದು ವಿವಿಧ ಸವಾರಿ ವಿಧಾನಗಳನ್ನು ಸಹ ಪಡೆಯುತ್ತದೆ.

ಇದಲ್ಲದೇ ಹೊಸದಾಗಿ ಬಿಡುಗಡೆಯಾದ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಮ್ಯಾಟ್ ಬೆಳ್ಳಿ ಐಸ್ ಮತ್ತು ಫ್ಯಾಂಟಮ್ ಕಪ್ಪು ಎಂಬ ಎರಡು ಬಣ್ಣಗಳಲ್ಲಿ ಖರೀದಿಸಬಹುದಾಗಿದ್ದು,ನಟ ಪ್ರಭಾಸ್ ಬಳಕೆ ಮಾಡುತ್ತಿರುವ ಬೈಕ್ ಮಾದರಿಯು ಫ್ಯಾಂಟಮ್ ಕಪ್ಪು ಬಣ್ಣದ್ದಾಗಿದೆ.

ಕೃಪೆ : ಡೈಲಿ ಹಂಟ್ 

LEAVE A REPLY

Please enter your comment!
Please enter your name here