ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ಪರಿಣಾಮ ಬೀರುವುದು. ಹೆಚ್ಚಿನ ಜನರಲ್ಲಿ ಯಾವುದಾದರೂ ಒಂದು ರೀತಿಯ ಸಾಮಾಜಿಕ ಜಾಲತಾಣದ ಖಾತೆ ಇದ್ದೇ ಇರುತ್ತದೆ.ಸಾಮಾಜಿಕ ಜಾಲತಾಣಗಳನ್ನು ನೀವು ಬಳಸುತ್ತಾ ಇದ್ದರೆ ತುಂಬಾ ಒಳ್ಳೆಯದು.ಆದರೆ ನಿಮ್ಮ ಸಾವಿನ ಬಳಿಕ ಈ ಖಾತೆ ಏನಾಗುವುದು ಎಂದು ನಿಮಗೆ ತಿಳಿದಿದೆಯಾ?

ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗುವಂತಹ ಸಾಮಾಜಿಕ ಜಾಲತಾಣವೆಂದರೆ ಫೇಸ್ ಬುಕ್. ಫೇಸ್ ಬುಕ್ ನಲ್ಲಿ ಮೃತಪಟ್ಟವರಿಗಾಗಿಯೇ ಕೆಲವೊಂದು ವಿಶೇಷ ಕಾನೂನುಗಳಿವೆ. ಮೃತರ ಖಾತೆಯನ್ನು ಡಿಲೀಟ್ ಮಾಡಬಹುದು ಅಥವಾ ನೆನಪಿಗಾಗಿ ಮುಂದುವರಿಸಬಹುದು.

ಇನ್ ಸ್ಟಾ ಗ್ರಾಮ್ ನ ನಿಯಮಗಳು ಅದರ ಮೂಲ ಕಂಪನಿ ಫೇಸ್ ಬುಕ್ ಗೆ ಸಮಾನವಾಗಿದೆ.ಖಾತೆಯನ್ನು ನೆನಪಿಗಾಗಿ ಅಥವಾ ಖಾಯಂ ಆಗಿ ಮುಚ್ಚಿಬಿಡಬಹುದು.ಆದರೆ ಇದು ನಿಮ್ಮ ಕೈಯಲ್ಲಿ ಇಲ್ಲ.ಇನ್ ಸ್ಟಾ ಗ್ರಾಮ್ ಗೆ ನಿಮ್ಮ ಮರಣಪತ್ರ ಸಲ್ಲಿಸುವ ವ್ಯಕ್ತಿಯು ಖಾತೆ ಡಿಲೀಟ್ ಮಾಡುವ ಅಥವಾ ನೆನಪಿಗಾಗಿ ಮುಂದುವರಿಸುವ ನಿರ್ಧಾರ ಮಾಡಬಹುದು.

LEAVE A REPLY

Please enter your comment!
Please enter your name here