ಭಾರತ ಕ್ರಿಕೆಟ್ ತಂಡ ಕಂಡ ಯಶಸ್ವಿ ನಾಯಕ ವಿರಾಟ್ ಕೊಹ್ಲಿ ನವೆಂಬರ್ 5 ರಂದು 29 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ಇದೇ ಸಂದರ್ಭದಲ್ಲಿ ಅವರು ಒಂದು ವಿಷಯದ ಕುರಿತಾಗಿ ಮಾತನಾಡಿದ್ದಾರೆ,

ಏನದು ವಿಷಯ ಓದಿ ಮುಂದೆ..

ಅದ್ಭುತ ಫಾರಂ ನಲ್ಲಿರುವ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ಅವರು ನಿವೃತ್ತಿಯ ಕುರಿತಾಗಿ ಒಂದು ಹೇಳಿಕೆ ನೀಡಿದ್ದಾರೆ.

ಖಾಸಗಿ ಕ್ರೀಡಾ ವಾಹಿನಿಯೊಂದರ ಕಾರ್ಯಕ್ರಮದಲ್ಲಿ,ತಾನು ಸದೃಢವಾಗಿರುವ ವರೆಗೂ ಕ್ರಿಕೆಟ್ ಆಡಲು ಬಯಸುತ್ತೇನೆ,ದೇಹ ಸ್ಪಂದಿಸದಿದ್ದರೆ ನಿವೃತ್ತಿ ಘೋಷಿಸುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ.

ಯಶಸ್ವಿ ಕ್ರಿಕೆಟಿಗರಾಗಿರುವ ವಿರಾಟ್ ಕೊಹ್ಲಿ ಬದ್ಧತೆ ಮತ್ತು ಶಿಸ್ತಿನಿಂದ ದೈಹಿಕ ಸದೃಢತೆ ಹೊಂದಿದ್ದಾರೆ.ಮೈದಾನದಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಇದುವರೆಗೂ 60 ಟೆಸ್ಟ್, 202 ಏಕದಿನ ಮತ್ತು 53 ಟಿ -20 ಪಂದ್ಯಗಳನ್ನಾಡಿರುವ ಕೊಹ್ಲಿ ಕ್ರಮವಾಗಿ 4658, 9030, 1878 ರನ್ ಗಳಿಸಿದ್ದಾರೆ. ಏಕದಿನದಲ್ಲಿ 32 ಶತಕ ಗಳಿಸಿದ್ದಾರೆ. ಸಚಿನ್ 49 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ

ನಮ್ಮ ಕಡೆ ಇಂದ ವಿರಾಟ್ ಕೊಹ್ಲಿ ಗೆ ಹುಟ್ಟು ಹಬ್ಬದ ಶುಭಾಶಯಗಳು..

LEAVE A REPLY

Please enter your comment!
Please enter your name here