ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ,ಆದ್ರೆ ಖಾಸಗಿ ವೈದ್ಯರೇ ಮುಷ್ಕರಕ್ಕೆ ನಿಂತರೆ ರೋಗಿಗಳ ಪಾಡೇನು? ನೋಡಿ ನಾಳೆ ವೈದ್ಯರು ಮುಷ್ಕರಕ್ಕೆ ನಿಂತಿದ್ದಾರೆ.ಏಕೆ ಏನು ಕಾರಣ ಅಂತ ಯೋಚಿಸ್ತಾ ಇದಿರಾ?ಇದನ್ನು ಓದಿ…

ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹೊರರೋಗಿಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿಗಳ ಕಾಯ್ದೆ ವಿರೋಧಿಸಿ ನಾಳೆ ಮುಷ್ಕರವಿದೆ.

ವೈದ್ಯರ ಮುಷ್ಕರ ಹಿನ್ನೆಲೆ ನಾಳೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಮಾಡಲಾಗುವುದಿಲ್ಲ. ಸಾಂಕೇತಿಕವಾಗಿ ಹೊರ ರೋಗಿಗಳ ಸೇವೆ ಸ್ಧಗಿತಗೊಳಿಸುತ್ತೇವೆ.ಸರ್ಕಾರ ಆಗಲೂ ಮಾತು ಕಥೆಗೆ ಮುಂದಾಗಿದ್ದರೆ ನವೆಂಬರ್ 9 ಹಾಗೂ 10ರಂದು ವೈದ್ಯ ವೃತ್ತಿಯನ್ನು ತ್ಯಜಿಸುತ್ತೇವೆ ಎಂದು ರವೀಂದ್ರ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು ಐವತ್ತು ಸಾವಿರ ಖಾಸಗಿ ಆಸ್ಪತ್ರೆಗಳಿದ್ದು ಎಲ್ಲಾ ಆಸ್ಪತ್ರೆಗಳ ವೈದ್ಯರು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.

LEAVE A REPLY

Please enter your comment!
Please enter your name here