ಜೇಬಿನಲ್ಲಿ ಕರೆನ್ಸಿ ನೋಟುಗಳ ಸ್ಥಾನವನ್ನು, ಪ್ಲಾಸ್ಟಿಕ್ ಕಾರ್ಡುಗಳು ಯಾವಾಗಲೋ ಆಕ್ರಮಿಸಿಕೊಂಡಿವೆ.100 ರಿಂದ 50 ಸಾವಿರದವರೆಗೂ ಯಾವಾಗ ಬೇಕೆಂದರೆ ಆವಾಗ ಡ್ರಾ ಮಾಡಿಕೊಳ್ಳಬಹುದಾದ ಸದುಪಾಯ ಬರುವ ವೇಳೆಗೆ ಅದರಲ್ಲೂ ATMಗಳನ್ನು ಉಪಯೋಗಿಸಲು ಆಸಕ್ತಿ ತೋರುತ್ತಿದ್ದಾರೆ.

ಆದರೆ ಬಹಳಷ್ಟು ಮಂದಿ ATM ನಿಂದ ಹಣ ಡ್ರಾ ಮಾಡಿದ ಮೇಲೆ ಬರುವ ರಿಸಿಪ್ಟನ್ನು ಅಲ್ಲೇ ಕಸದಬುಟ್ಟಿಗೆ ಹಾಕುತ್ತಾರೆ.ಇಲ್ಲದಿದ್ದರೆ ಹೊರಗೆ ಬಿಸಾಕುತ್ತಾರೆ. ಈ ರೀತಿ ಮಾಡುವುದು ಅಷ್ಟು ಒಳ್ಳೆಯದಲ್ಲ.ರದ್ದಿ ಕಾಗದ ಎಂದುಕೊಂಡ ಆ ರಿಸಿಪ್ಟ್ ನಿಮ್ಮ ಖಾತೆಯ ಗುಟ್ಟನ್ನು ಹ್ಯಾಕರ್‌ಗಳ ಕೈಗೆ ಇಡುವ ಕೀ ಪಾಯಿಂಟ್ಸ್ ಆಗಿ ಬದಲಾಗುತ್ತದೆ.

ATMನಲ್ಲಿ ಹಣ ಡ್ರಾ ಮಾಡಬೇಕಾದರ ಅದರ ಹಿಂದೆ ಬಹಳ ದೊಡ್ಡ ಪ್ರೋಸೆಸ್ ನಡೆಯುತ್ತದೆ.ಹಂತಹಂತವಾಗಿ ನಾವು ಕೊಡುವ ಇನ್‌ಪುಟ್ ಅವಲಂಬಿಸಿ…ನಾವು ಕೋರಿದ ಹಣ ನಮ್ಮ ಕೈಸೇರುತ್ತದೆ. ಈ ಪ್ರೊಸೆಸ್‍ನಲ್ಲಿ ಒಮ್ಮೊಮ್ಮೆ ಎಡವಟ್ಟಾಗಿ ನಿಮ್ಮ ಹಣ ಡ್ರಾ ಆಗದೆ.ಖಾತೆಯಲ್ಲಿನ ಹಣ ಕಟ್ ಆಗಿಹೋಗುತ್ತೆ.ಅಂತಹ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಲು ಈ ರಿಸಿಪ್ಟ್ ತುಂಬಾ ಅವಶ್ಯಕ.

ATM ರಿಸಿಪ್ಟ್‌ನ್ನು ಅವಲಂಬಿಸಿ ನಿಮ್ಮ ಅಕೌಂಟ್‌ನಲ್ಲಿರುವ ಬ್ಯಾಲೆನ್ಸ್ ಮೊತ್ತ ಎಷ್ಟು?. ನೀವು ಡ್ರಾ ಮಾಡಿದ್ದು ಎಷ್ಟು? ಎಂಬ ವಿಷಯಗಳು ಗೊತ್ತಾಗುತ್ತವೆ.ಹೆಚ್ಚಿನ ಮೊತ್ತ ಡ್ರಾ ಮಾಡಿ ತೆಗೆದುಕೊಂಡು ಹೋಗುತ್ತಿದ್ದೀರಾ ಎಂದು ಗೊತ್ತಾದರೆ ಯಾರಾದರೂ ನಿಮ್ಮನ್ನು ಹಿಂಬಾಲಿಸಿ. ನಿಮ್ಮಿಂದ ಆ ಹಣ ದೋಚುವ ಪ್ರಯತ್ನ ಮಾಡಿದರೂ ಅಚ್ಚರಿಯಿಲ್ಲ.

ಇನ್ನು ATM ರಿಸಿಪ್ಟ್ ಹ್ಯಾಕರ್‌ಗಳ ಕೈಗೆ ಸಿಕ್ಕಿದರೆ ಅದರ ಮೇಲಿನ ಸಮಾಚಾರದಿಂದ…ಅದನ್ನು ಡೀಕೋಡ್ ಮಾಡಿ ನಿಮ್ಮ ATM ಪೂರ್ಣ ವಿವರಗಳನ್ನು ಹೊರತೆಗೆದು ನಿಮ್ಮ ಖಾತೆಯಲ್ಲಿನ ಹಣವನ್ನು ನಿಮಗೆ ಗೊತ್ತಾಗದಂತೆ ಖಾಲಿ ಮಾಡುವ ಅಪಾಯ ಸಹ ಇದೆ.

ರಿಸಿಪ್ಟ್ ತೆಗೆದುಕೊಂಡರೆ ಇಷ್ಟೆಲ್ಲಾ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ರಿಸಿಪ್ಟ್ ತೆಗೆದುಕೊಳ್ಳುವ ಬದಲು ನಮ್ಮ ಅಕೌಂಟಿಗೆ ಫೋನ್ ನಂಬರ್ ಅನುಸಂಧಾನ ಮಾಡಿಸಿ ಪ್ರಿಂಟ್ ತೆಗೆದುಕೊಳ್ಳುವುದೇ ಉತ್ತಮ.ಹೇಗೂ ನಮ್ಮ ಮೊಬೈಲ್‍ಗೆ ಮೆಸೇಜ್ ಬರುತ್ತದೆ ಆ ಮಾಹಿತಿ ನಮ್ಮ ಬಳಿ ಇರುತ್ತದೆ. ಹೀಗೆ ಮಾಡುವುದರಿಂದ ಗಿಡಮರ ರಕ್ಷಿಸುವುದರ ಜೊತೆಗೆ ನಮ್ಮ ಖಾತೆಯ ಮಾಹಿತಿಗಳನ್ನು ಬಹಿರಂಗವಾಗದಂತೆ ನೋಡಿಕೊಳ್ಳಬಹುದು.

LEAVE A REPLY

Please enter your comment!
Please enter your name here