ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಕಾರ್ಯಕ್ರಮದ ಫೈನಲ್ ಇಂದು ನಾಳೆ ಪ್ರಸಾರವಾಗಲಿದೆ.

ಫೈನಲ್ ಫೈವ್ ಸ್ಪರ್ಧಿಗಳಾಗಿ ಚಂದನ್ ಶೆಟ್ಟಿ,ಜಯರಾಂ ಕಾರ್ತಿಕ್,ನಿವೇದಿತಾ ಗೌಡ,ಶ್ರುತಿ ಪ್ರಕಾಶ್ ಮತ್ತು ದಿವಾಕರ್ ನಡುವೆ ಪೈಪೋಟಿಯಿದೆ.

ಇವರಲ್ಲಿ ಇಬ್ಬರು ಸ್ಪರ್ಧಿಗಳನ್ನು ಬಿಗ್ ಬಾಸ್ ವೇದಿಕೆ ಮೇಲೆ ಕರೆತಂದು ಕಿಚ್ಚ ಸುದೀಪ್ ಗೆದ್ದ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ.ಫೈನಲ್ ಎಪಿಸೋಡ್ ಇನ್ನೂ ಪ್ರಸಾರವಾಗುವ ಮೊದಲೇ ಗೆದ್ದವರು ಯಾರೆಂದು ವಿಕಿಪೀಡಿಯಾದಲ್ಲಿ ಬರೆಯಲಾಗಿದೆ.

ಇದರಲ್ಲಿ ಜೆಕೆ ಬಿಗ್ ಬಾಸ್ ವಿನ್ನರ್ ಎಂದು ಬರೆದುಕೊಳ್ಳಲಾಗಿದೆ.ಆದರೆ ಇದನ್ನು ಸಾರ್ವಜನಿಕರೂ ಎಡಿಟ್ ಮಾಡಬಹುದಾದ್ದರಿಂದ ಇದರಲ್ಲಿ ಬಂದ ಸುದ್ದಿ ನಿಜವೆಂದು ಹೇಳಲಾಗದು.ಹಾಗಿದ್ದರೂ ಈ ವಿಷಯ ಹೈಪ್ ಕ್ರಿಯೇಟ್ ಮಾಡಿರುವುದಂತೂ ಸುಳ್ಳಲ್ಲ.

 

 

ಕೃಪೆ: Dailyhunt

LEAVE A REPLY

Please enter your comment!
Please enter your name here