One Plus ಅವರ ಹೊಸ ಮೊಬೈಲ್ ಹೇಗಿದೆ ನೋಡಿದ್ದೀರಾ?

0
103

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲಕದ ಸ್ಮಾರ್ಟ್‌ಫೋನ್‌ ಕಂಪನಿಗಳ ಆರ್ಭಟವು ಹೆಚ್ಚಾಗಿದ್ದು, ಇರುವ ಎಲ್ಲಾ ಕಂಪನಿಗಳು ಬಜೆಟ್ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮುಂದಿವೆ.

ಹಾಗೆಯೇ ಈಗ ಒನ್ ಪ್ಲಸ್ ಕಂಪನಿಯು ಹೊಸ ಮೊಬೈಲ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಅದೇ Onseplus 5T

ಅದರ ವಿಶೇಷತೆಗಳೇನು ಗೊತ್ತೇ? ಮುಂದೆ ಓದಿರಿ..

ಒನ್ ಪ್ಲಸ್ 5T ಯಲ್ಲಿ ದೊಡ್ಡ Dispaly ಇದ್ದು ಅದು 6 ಇಂಚಿನದ್ದಾಗಿರುತ್ತದೆ.ಇದು ಗೇಮ್ ಆಡಲು ಮತ್ತು ಸಿನಿಮಾ ನೋಡಲು ಉತ್ತಮ ಅನುಭವನ್ನು ನೀಡಲಿದೆ. ಫೊನಿನ ತುಂಬ Dispalyಯೇ ಇರಲಿದೆ.

ಇದರಲ್ಲಿ ಹೊಸದೇನೆಂದರೆ ಹೋಂ ಬಟನ್ ಇಲ್ಲ ಏಕೆಂದರೆ Dispaly ದೊಡ್ಡದಿರುವುದರಿಂದ ಹೋಂ ಬಟನ್ ಅನ್ನು ತೆಗೆಯಲಾಗಿದೆ.ಈ ಫೋನಿನ ಹಿಂಭಾಗದಲ್ಲಿ 20MP + 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಫೋಟೋಗ್ರಫಿಗಾಗಿ ಹೇಳಿ ಮಾಡಿಸಿದಂತೆ ಇದೆ.

ಇದಲ್ಲದೇ ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದರ RAM 8GB ಆಗಿದ್ದು 128GB ROM ಅನ್ನು ಇದು ಹೊಂದಿದೆ.ಇದರ ಬ್ಯಾಟರಿಯು 3500MAH ಇರಲಿದೆ.

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅಳವಡಿಸಲಾಗಿದೆ.ಹಾಗಾಗಿ ದೊಡ್ಡ ದೊಡ್ಡ ಗೇಮ್ ಗಳನ್ನೂ ಆರಾಮಾಗಿ ಆಡಬಹುದು.ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದಲ್ಲಿ ಅಳವಡಿಸುತ್ತಿದ್ದ ಒನ್‌ಪ್ಲಸ್, ಈ ಬಾರಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಈ ಮೊಬೈಲ್ ಭಾರತದಲ್ಲಿ ನವಂಬರ್ 5 ರಂದು ಬಿಡುಗಡೆ ಆಗಲಿದ್ದು ,ಇದರ ಬೆಲೆ  39999 ಆಗಿರುತ್ತದೆ.

LEAVE A REPLY

Please enter your comment!
Please enter your name here