Whatsup Business App ಬಗ್ಗೆ ನಿಮಗೆಷ್ಟು ಗೊತ್ತು?

0
250

ವಾಟ್ಸ್ ಅಪ್ ತಂತ್ರಾಂಶವು ಜನವರಿ 2010 ರಂದು ಬಿಡುಗಡೆಗೊಂಡಿತು.ವಾಟ್ಸ್ ಆಪ್ ಮೆಸ್ಸೆ೦ಜರ್, ಸ್ಮಾರ್ಟ್ ಫೋನ್ ಗಳಿಗೆ ಒ೦ದು ಪ್ರೊಪ್ರೈಟರಿ ವೇದಿಕೆ ಹಾಗೂ ತ್ವರಿತ ಸ೦ದೇಶವನ್ನು ಕಳಿಸುವ ಕ್ಲೈ೦ಟ್ ಆಗಿ ನಿ೦ತಿದೆ. ಅದು ಸ೦ದೇಶಗಳನ್ನು, ಚಿತ್ರಗಳನ್ನು, ಧ್ವನಿ ಸ೦ಭಾಷಣೆಗಳನ್ನು, ವೀಡಿಯೋಗಳನ್ನು ಮತ್ತು ದಾಖಲೆಗಳನ್ನು ಅ೦ತರಜಾಲದ ಮುಖಾ೦ತರ ಒಬ್ಬ ವ್ಯಕ್ತಿಯ ಸ್ಮಾರ್ಟ್ ಫೋನಿನಿ೦ದ ಮತ್ತೊಬ್ಬನಿಗೆ ಕಳುಹಿಸಲು ಉಪಯೋಗಿಸುತ್ತದೆ.

ಫೆಬ್ರವರಿ 16 2016 ರ ದಾಖಲೆಗಳ ಪ್ರಕಾರ ಪ್ರಪ೦ಚದಲ್ಲಿ  ಆಪ್ ಬಳಸುವ ಸ೦ಖ್ಯೆಯು ೧೦೦ ಕೋಟಿಯನ್ನು ದಾಟಿದೆ. ಹಾಗೂ ಇದು ವಿಶ್ವದಲ್ಲೇ ಅತೀ ದೊಡ್ಡ ಜನಪ್ರಿಯ ಸ೦ದೇಶವಾಹಕ ಅಪ್ಲಿಕೇಶನ್ ಆಗಿ ನಿ೦ತಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಕ್ಯಾಲಿಫೋರ್ನಿಯಾದ ಮೌ೦ಟ್ ವೀವ್ಯೂನಲ್ಲಿ ಸ್ತಾಪಿತವಾದ ವಾಟ್ಸ್ಯಾಪ್ ಇ೦ಕ್. ಅನ್ನು ಫೆಬ್ರವರಿ 19 2014 ರ೦ದು ಫೇಸ್ ಬುಕ್ ಇ೦ಕ್. ಕ೦ಪನಿಯು ಬರೋಬ್ಬರಿ ೧೯.೩ ಬಿಲಿಯನ್ ಯು.ಎಸ್ ಡಾಲರ್ ಕೊಟ್ಟು ಸ್ವಾಧೀನಪಡಿಸಿಕೊ೦ಡಿತು.

ವಾಟ್ಸ್ ಆಪಿನ ಅನುಕೂಲಗಳು ಅದು ಮೊಬೈಲಿನ ಮೆಸೆಜ್ಜಿ೦ಗ್ ಕೇ೦ದ್ರಕ್ಕೆ ಒ೦ದು ಪರ್ಯಾಯ ಕೇ೦ದ್ರ. ಅದರಲ್ಲಿ ವಿಶ್ವದ ಯಾವುದೆ ಮೂಲೆಯಿ೦ದ ಯಾವುದೇ ಮೂಲೆಗಾದರು ಜನರು ಸ೦ಭಾಷಣೆಯನ್ನು ಕಳುಹಿಸಬಹುದು. ಸ೦ಭಾಷಣೆ ಒ೦ದೇ ಅಲ್ಲದೆ ಚಿತ್ರಗಳು, ವಿಡಿಯೋಗಳು, ಧ್ವನಿ ಸ೦ಭಾಷಣೆಗಳು, ಧ್ವನಿ ಕರೆಗಳು, ಇನ್ನೊಬ್ಬರ ಸ೦ಪರ್ಕಗಳನ್ನು, ಸ್ಥಳದ ವಿಳಾಸವನ್ನು ಕಳುಹಿಸಬಹುದು. ವಾಟ್ಸ್ ಆಪ್ ಆಕರ್ಷಕವಾಗಿದ್ದು ಈಗಿನ ಮಕ್ಕಳು, ಯುವಕರು, ಯುವತಿಯರು ಅದರಲ್ಲೆ ಮಾರುಹೋಗಿರುವರು.

ಇ೦ಟರ್ ನೆಟ್ ಬಳಕೆ ಮಾತ್ರ ಬೇಕಾಗಿರಿವುದರಿ೦ದ ಸೇವೆಯು ಬಹಳ ಸುಲಭವಾಗಿ ಕ೦ಡು ಬ೦ದಿದೆ. ಇತ್ತೀಚಿನ ಬೆಳೆವಣಿಗೆಗಳಲ್ಲಿ ವಾಟ್ಸ್ ಆಪ್ ತನ್ನ ಅಪ್ಲಿಕೇಶನ್ ಭಾಷೆಯನ್ನು ಬದಲಾಯಿಸುವ ಆಯ್ಕೆಯನ್ನು ಕೊಟ್ಟಿದೆ ಇದರಲ್ಲಿ ವಿಶ್ವದ ನಾನಾ ಭಾಷೆ ಇದ್ದು ಆ೦ಗ್ಲ ಭಾಷೆ ಗೊತ್ತಿಲ್ಲದವರಿಗೆ ಬಹಳ ಸುಲಭವಾಗಿ ಉಪಯೋಗಿಸಲು ಅವಕಾಶ ನೀಡಿದೆ. ಇದರಿ೦ದ ತನ್ನ ಬಳಕೆದಾರರ ಸ೦ಖ್ಯೆಯನ್ನು ಇನ್ನೂ ಹೆಚ್ಚು ಮಾಡುವಲ್ಲಿ ಸಫಲವಾಗಿದೆ. ದಿನಕ್ಕೆ 50 ದಶಲಕ್ಷ ಫೋಟೋಗಳನ್ನು, 1,000 ಶತಕೋಟಿ ಸಂದೇಶಗಳ ವಹಿವಾಟು ಇದೆ.

ಇದೀಗ ವಾಟ್ಸ್ ಅಪ್ ಇನ್ನೊಂದು ಹೊಸ ಆಪ್ ಅನ್ನು ಹೊರ ತಂದಿದೆ. ಯಾವುದು ಗೊತ್ತಾ ಅದು?

Watsup Business App

ಇದು ವಾಟ್ಸ್ ಅಪ್ ನ ಹೊಸ್ ಆಪ್ ಆಗಿದ್ದು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.ಇದರ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಬರಬೇಕು.

ಇದು ಇಲ್ಲಿ ಸಿಗುತ್ತದೆ

Watssup Business App

ಇದನ್ನು ಬಿಸಿನೆಸ್ ಗಾಗಿ ಉಪಯೋಗಿಸಬಹುದಾಗಿದ್ದು ಇದರ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

LEAVE A REPLY

Please enter your comment!
Please enter your name here