ಭರ್ಜರಿ ಆಫರ್ ಗಳನ್ನು ಕೊಟ್ಟು ಪ್ರಸಿದ್ದಿಯಾದ ರಿಲಯನ್ಸ್ ಜಿಯೋ ಈಗ ಹೆಚ್ಚಿನ ವೇಗದ ಫೈಬರ್ ಟು ಹೋಮ್ ಸೇವೆಯನ್ನು ಹೊಸ ವರ್ಷದ ಅಂಗವಾಗಿ ಆರಂಭಿಸಲಿದೆ ಎನ್ನುವ ಸುದ್ದಿಯೊಂದು ಬಂದಿದೆ.

ಈಗಾಗಲೇ ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿದ್ದು,ಹೊಸ ವರ್ಷದ ದಿನ ವೇಗದ ಫೈಬರ್ ಸೇವೆಯನ್ನು ನೀಡಲಿದೆ.ಮೊದಲಿಗೆ 30 ನಗರಗಳಲ್ಲಿ ಈ ಸೇವೆಯನ್ನು ನೀಡಲಾಗುವುದು.

ಮುಂದಿನ ದಿನಗಳಲ್ಲಿ ಒಟ್ಟು 100 ನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುವುದು.

ಇದಲ್ಲದೇ ಫೈಬರ್ ಟು ಹೋಮ್ ಸೇವೆಯೊಂದಿಗೆಯೇ TV ಸೇವೆಯನ್ನು ನೀಡುವ ಯೋಜನೆಯನ್ನು ಜಿಯೋ ರೂಪಿಸಿದ್ದು,ಜಿಯೋ TV ಸೇವೆಯನ್ನು ಬಳಸಿಕೊಳ್ಳಲು ಡಿಶ್ ಬೇಕಾಗಿಲ್ಲ ಎನ್ನಲಾಗುತ್ತಿದೆ.

ದೇಶದಲ್ಲಿ ಸುಮಾರು 100 ನಗರಗಳಲ್ಲಿ ಈ ಸೇವೆಯನ್ನು ಪರಿಚಯಿಸುವಂತ ಕಾರ್ಯವನ್ನು ಜಿಯೋ ಹಮ್ಮಿಕೊಂಡಿದೆ ಎನ್ನಲಾಗಿದೆ.

ಈ ಸೇವೆಯನ್ನು ಪಡೆದುಕೊಳ್ಳಲು ಗ್ರಾಹಕರು 4,500 ಠೇವಣಿ ಇಡಬೇಕಾಗಿದೆ. ನಂತರದಲ್ಲಿ ತಿಂಗಳಿಗೆ ರೂ.1000 ಇಲ್ಲವೇ ರೂ.1500 ಪ್ಯಾಕ್ ಹಾಕಿಸಿಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here