ಅಕ್ಕಿ ತೊಳೆದು ನೀರನ್ನು ಚೆಲ್ಲುವುದಕ್ಕೂ ಮುನ್ನ ಇದನ್ನು ಓದಿರಿ.ಅಕ್ಕಿ ತೊಳೆದ ನೀರಿನಿಂದ ಹಲವಾರು ಬೆನಿಫಿಟ್ ಇದೆ. ಇಲ್ಲಿದೆ ನೋಡಿ ಇದರ ಕಂಪ್ಲೀಟ್ ಡೀಟೇಲ್ಸ್. ಅಕ್ಕಿ ತೊಳೆದ ನೀರಿನಲ್ಲಿ ಕೂದಲು ತೊಳೆಯುವುದರಿಂದಾಗಿ ಕೂದಲುದುರುವಿಕೆಯನ್ನು ನಿಯಂತ್ರಿಸಿಕೊಳ್ಳಬಹುದು.

ಅಕ್ಕಿ ತೊಳೆದ ನೀರಿನಲ್ಲಿರುವ ಅಮೈನೋ ಆಸಿಡ್ ಅಂಶಗಳುನ ಕೂದಲಿನ ಬೇರನ್ನು ಗಟ್ಟಿಗೊಳಿಸುತ್ತದೆ.ಹಾಗೂ ಕೂದಲು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಚರ್ಮಕ್ಕೂ ಕೂಡ ಅಕ್ಕಿ ತೊಳೆದ ನೀರಿನಿಂದ ಹಲವು ಲಾಭಗಳಿವೆ.ಚರ್ಮವನ್ನು ತಂಪುಗೊಳಿಸುವ ಮತ್ತು ಮೃದುಗೊಳಿಸುವ ಸಾಮರ್ಥ್ಯ ಅಕ್ಕಿ ತೊಳೆದ ನೀರಿಗಿದೆ.

ಸುಟ್ಟ ಗಾಯಗಳ ಆಯುರ್ವೇದಿಕ್ ಆಯಿಂಟ್ ಮೆಂಟ್ ಗಳ ತಯಾರಿಕೆಯಲ್ಲಿ ಅಕ್ಕಿ ತೊಳೆದ ನೀರನ್ನು ಬಳಸಲಾಗುತ್ತದೆ. ಅಕ್ಕಿ ತೊಳೆದ ನೀರು ರಕ್ತಸಂಚಾರ ಅಧಿಕಗೊಳಿಸಿ, ವಯಸ್ಸಾದಂತೆಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ನಿವಾರಿಸಿ ಯಂಗ್ ಆಗಿ ಇರುವಂತೆ ನೋಡಿಕೊಳ್ಳುತ್ತದೆ.ಹಾಗೂ ಮಾಯ್ಚರೈಸರ್,ಆಂಟಿ ಆಕ್ಸಿಡೆಂಟ್ ಮತ್ತು ಗಾಯ ಗುಣಗೊಳಿಸುವ ಶಕ್ತಿ ಇದೆ.

ಕೂದಲು ತೊಳೆಯಲು ಮತ್ತು ಸ್ಕಿನ್ ಟೋನರ್ ಆಗಿ ಕೂಡ ಇದನ್ನು ಬಳಸಬಹುದು.ಅಕ್ಕಿ ತೊಳೆದ ನೀರನ್ನು ಬಾಡಿ ಕ್ಲೆನ್ಸರ್ ಆಗಿ ಕೂಡ ಬಳಕೆ ಮಾಡಬಹುದು.ಅದಕ್ಕಾಗಿ ಸ್ವಲ್ಪ ಲಿಂಬೆಯ ರಸ,ಲ್ಯಾವೆಂಡರ್ ಮಿಕ್ಸ್ ಮಾಡಿರುವ ಎಸೆನ್ಶಿಯಲ್ ಆಯಿಲ್ ಮಿಕ್ಸ ಮಾಡಿ ಮುಖ ಮತ್ತು ದೇಹವನ್ನು ವಾಷ್ ಮಾಡಿಕೊಳ್ಳಬಹುದು.

ಚರ್ಮದಲ್ಲಿರುವ ರಂಧ್ರಗಳಿಗೆ ಅಕ್ಕಿ ತೊಳೆದ ನೀರು ಒಂದು ಅಧ್ಬುತ ಮೆಡಿಸಿನ್ ಆಗಿದೆ.. ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ. ಅಕ್ಕಿ ತೊಳೆದ ನೀರಿಗೆ ಕಿತ್ತಲೆ ಸಿಪ್ಪೆ, ಲಿಂಬೆಯ ಸಿಪ್ಪೆ,ಗ್ರೀನ್ ಟೀ, ತುಳಸಿ ದಳಗಳು,ಬೇವಿನ ಎಲೆ,ಇವುಗಳಲ್ಲಿ ಯಾವುದಾದ್ರೂ ಒಂದನ್ನು ಮಿಕ್ಸ್ ಮಾಡಿಕೊಂಡು ಬಳಸಿದ್ರೂ ಕೂಡ ನಿಮ್ಮ ಚರ್ಮದ ಆರೋಗ್ಯ ವೃದ್ದಿಯಾಗಲಿದೆ. ಹಾಗಾದರೆ ಯಾಕೆ ತಡ ಒಮ್ಮೆ ಟ್ರೈ ಮಾಡಿ

LEAVE A REPLY

Please enter your comment!
Please enter your name here