ತ್ವಚೆ ಹೊಳೆಯುವಂತಾಗಬೇಕೆಂದು ನೀವು ಬಯಸುವುದಾದರೆ ಮೊದಲು ಮುಖವನ್ನು ತೊಳೆದುಕೊಂಡು ಮುಖಕ್ಕೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು.ಇದಕ್ಕೆ ಅಕ್ಕಿ ಅಥವಾ ಕಡಲೆಹಿಟ್ಟನ್ನು ಸ್ಕ್ರಬ್ ನಂತೆ ಹಚ್ಚಿಕೊಳ್ಳಬೇಕು.ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದು ಆಮೇಲೆ ತಣ್ಣನೆ ನೀರಿನಿಂದ ಮತ್ತೊಮ್ಮೆ ತೊಳೆದುಕೊಳ್ಳಬೇಕು.

ನೀವು ಟ್ಯಾನ್ ಸಮಸ್ಯೆಯಿಂದ ಬಳಲುತ್ತೀರ ಎಂದಾದರೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.ಇದು ಸೂರ್ಯನ ಯುವಿ ಕಿರಣಗಳಿಂದಾದ ತೊಂದರೆಯನ್ನು ನಿವಾರಿಸುತ್ತದೆ. ಇದರ ನಿರಂತರ ಬಳಕೆ ಸುಕ್ಕುಗಳನ್ನೂ ಸಹ ಕಡಿಮೆಗೊಳಿಸುತ್ತದೆ.

ಚರ್ಮ ಕ್ಯಾನ್ಸರ್ ತಗುಲುವುದನ್ನು ಸಹ ಎಳ್ಳೆಣ್ಣೆ ತಡೆಯುತ್ತದೆ.ಅರ್ಧ ಕಪ್ ಎಳ್ಳೆಣ್ಣೆಗೆ ಸಮಪ್ರಮಾಣದ ಆಪಲ್ ಸೈಡರ್ ವಿನಿಗರ್ ಮತ್ತು ಮುಕ್ಕಾಲು ಕಪ್ ನೀರು ಬೆರೆಸಿ ಪ್ರತಿ ರಾತ್ರಿ ಮುಖ ತೊಳೆದ ನಂತರ ಮಸಾಜ್ ಮಾಡಿಕೊಂಡರೆ ನಿಮ್ಮ ತ್ವಚೆಗೆ ಹೊಳಪಿನೊಂದಿಗೆ ಯೌವ್ವನದ ಕಾಂತಿ ಬರುತ್ತದೆ.

ಮುಖ ಒಣಗಿದಂತಿದ್ದರೆ ಮತ್ತು ಗೆರೆಗಳು,ಕಲೆಗಳು ಕಾಣುತ್ತಿದ್ದರೆ ನಿರಂತರವಾಗಿ ಎಳ್ಳೆಣ್ಣೆ ಮಸಾಜ್ ಮಾಡಬೇಕು.ದೇಹದಲ್ಲಿ ತುರಿಕೆ ಅಥವಾ ಉರಿ ಇದ್ದರೆ ಎಳ್ಳೆಣ್ಣೆ ಲೇಪಿಸಿ ಮಸಾಜ್ ಮಾಡಿದರೆ ಉಪಶಮನವಾಗುತ್ತದೆ.

ಒಡೆದ ಮತ್ತು ಬಿರುಕು ಬಿಟ್ಟ ಹಿಮ್ಮಡಿಯಿಂದ ನೀವು ಬಳಲುತ್ತಿದ್ದರೆ ಪ್ರತಿ ರಾತ್ರಿ ಎಳ್ಳೆಣ್ಣೆ ಲೇಪಿಸಿಕೊಂಡು ಕಾಟನ್ ಕಾಲು ಚೀಲ ಧರಿಸಿ ಮಲಗಬೇಕು. ಕೆಲವೇ ದಿನಗಳಲ್ಲಿ ಫಲಿತಾಂಶ ಗೋಚರಿಸುತ್ತದೆ.

ಪ್ರತಿದಿನ ಸ್ನಾನ ಮಾಡುವ ನೀರಿಗೆ ಒಂದೆರಡು ಹನಿ ಎಳ್ಳೆಣ್ಣೆಯನ್ನು ಬೆರೆಸಿಕೊಂಡರೆ ಚರ್ಮದ ವ್ಯಾಧಿಗಳು ಬರುವುದಿಲ್ಲ.ಎಳ್ಳೆಣ್ಣೆ ಯನ್ನು ಪ್ರತಿದಿನ ಬಳಸಿದರೆ ವಾತದ ಕಾಯಿಲೆಗಳ ಸಂಭವವು ಕಡಿಮೆಯಾಗುತ್ತದೆ.

ಎಳ್ಳನ್ನು ಅರೆದು ಕುಡಿಯುವುದು ಮೂಲ ವ್ಯಾಧಿಗೆ ಉತ್ತಮ ಔಷಧಿ.ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಮೈ ಕಾಂತಿ ಹೆಚ್ಚುತ್ತದೆ. ಗರ್ಭಿಣಿಯ ಆರೋಗ್ಯಕ್ಕೆ ಎಳ್ಳಿನ ಉಂಡೆ ತಿನ್ನುವುದು ಒಳ್ಳೆಯದು.ನೋವಿರುವ ಭಾಗಕ್ಕೆ ಎಳ್ಳೆಣ್ಣೆ ಸ್ವಲ್ಪ ಬಿಸಿ ಮಾಡಿ ಮಸಾಜ್ ಮಾಡಿ ಶಾಖ ಕೊಟ್ಟಲ್ಲಿ ನೋವು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here