ಅರಿಶಿಣದ ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ…

0
700

ಅರಿಸಿನವನ್ನು ಹಾಲಿನ ಕೆನೆಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ, ಮುಖದಲ್ಲಿನ ಗುಳ್ಳೆಗಳು ಕಮ್ಮಿಯಾಗುತ್ತವೆ ಮತ್ತು ಹೊಳಪು ಬರುತ್ತದೆ.ಅರಿಸಿನದ ಪುಡಿಯನ್ನು ಕಡಲೆಹಿಟ್ಟಿಗೆ ಬೆರೆಸಿ,ಹಾಲಿನೊಂದಿಗೆ ಕಲೆಸಿ ಸಹ ಮುಖಕ್ಕೆ ಹಚ್ಚಬಹುದು.

ಅರಿಶಿನದ ಪುಡಿಯನ್ನು ಸ್ವಲ್ಪ ಬಿಸಿ ಮಾಡಿದ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕೆಮ್ಮು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುತ್ತದೆ.ಇದು ಆಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡಿಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ.ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿರುವಾಗ ಈ ಅರಿಶಿಣದ ಪುಡಿಯನ್ನು ಗಾಯದ ಮೇಲೆ ಹಾಕಿ ಅದುವುದರಿಂದ ರಕ್ತ ಬರುವುದು ನಿಲ್ಲುತ್ತದೆ.

(ಚಿಕ್ಕ ಗಾಯಗಳಿಗೆ) ಆಂಟಿಸೆಪ್ಟಿಕ್ ಆಗಿರುವುದರಿಂದ ಬೇಗನೆ ಗಾಯವೂ ಒಣಗುತ್ತದೆ/ಮಾಯುತ್ತದೆ.ಅರಿಶಿಣದ ಕೊಂಬನ್ನು ಹಾಲಿನಲ್ಲಿ ತೇದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಗುಳ್ಳೆಗಳು ಇಲ್ಲವಾಗುತ್ತವೆ ಮತ್ತು ಮುಖವು ಹೊಳಪು ಬರುತ್ತದೆ.

ಇದು ಅರಿಷಿಣದ ಪುಡಿಯಲ್ಲಿ ಕಲೆಸಿ ಹಚ್ಚುವುದಕ್ಕಿಂತ ತುಂಬಾ ಉತ್ತಮವಾದದ್ದು. ಅಂಗಡಿಯಲ್ಲಿ ತಂದ ರೆಡಿಮೇಡ್ ಪುಡಿ ಉಪಯೋಗಿಸುವುದರಿಂದ ಹೆಚ್ಚು ಅನುಕೂಲ ದೊರೆಯದು,ಅದರಲ್ಲಿ ಕೆಲವು ಬಣ್ಣ ಮಿಶ್ರಿತವಾಗಿರುತ್ತವೆ. ಆದ್ದರಿಂದ ತೇದು ಹಚ್ಚುವುದರಿಂದ ಸ್ವಚ್ಛವಾದ ಅರಿಸಿನ ಸಿಗುತ್ತದೆ.

LEAVE A REPLY

Please enter your comment!
Please enter your name here