ಆಲೂಗಡ್ಡೆಯನ್ನು ಕತ್ತರಿಸಿ ಸಾಂಬಾರು, ಗೊಜ್ಜು ಮಾಡಲು ಮಾತ್ರವಲ್ಲ, ಕೆಲ ಅನ್ಯ ಗೃಹಬಳಕೆಗೂ ಬಳಸಿಕೊಳ್ಳಬಹುದು ಅನ್ನುವುದು ಅನೇಕರಿಗೆ ಗೊತ್ತಿಲ್ಲ.ಆಲೂಗಡ್ಡೆ ಬಹೂಪಯೋಗಿ ತರಕಾರಿ.ರುಚಿಕಟ್ಟಾದ ಸಾಂಬಾರು ಸಿದ್ಧಪಡಿಸಲು ಬಹುತೇಕ ಮನೆಗಳಲ್ಲಿ ಇದರ ಬಳಕೆ ಆಗುತ್ತದೆ.

ಈರುಳ್ಳಿಯೊಂದಿಗೆ ಇದನ್ನು ಹಾಕಿ ರುಚಿಕಟ್ಟಾದ ಸಾಂಬಾರು ತಯಾರಿಸಬಹುದು ಎಂಬುದು ಪ್ರತಿ ಗೃಹಿಣಿಗೂ ಗೊತ್ತು.ಆದರೆ ಇದರ ಇನ್ನಿತರ ಬಳಕೆ ಬಗ್ಗೆ ಇಲ್ಲಿದೆ ನೋಡಿ.

ಕಪ್ಪು ಕಲೆ ನಿವಾರಣೆಗೆ

ಒಂದು ಸಣ್ಣ ಆಲೂಗಡ್ಡೆಯನ್ನು ರುಬ್ಬಿಕೊಳ್ಳೀ ಹಾಗೂ ರುಬ್ಬಿಕೊಂಡ ಆಲೂಗಡ್ದೆಗೆ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಈ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿಕೊಳ್ಳಿ ಅಥವಾ ಇಡೀ ಮುಖಕ್ಕೂ ಹಚ್ಚಿಕೊಳ್ಳಬಹುದು.

ಹದಿನೈದು ನಿಮಿಷಗಳ ನಾನಾತರ ಮಿಶ್ರಣವನ್ನು ನೀರಿನಿಂದ ತೊಳೆಯಬಹುದು.ಹಾಗಲ್ಲದೆ ಬಾರಿ ಅಲೂವಿನ ಹೊಳನ್ನು ತೆಗೆದುಕೊಂಡು ನಿಮ್ಮ ಕಲೆಗಳ ಮೇಲೆ ನೇರವಾಗಿ ಉಜ್ಜಿಕೊಂಡು ಹದಿನೈದು ನಿಮಿಷಗಳಲ್ಲಿ ತೊಳೆಯಬಹುದು.

ಆಲೂಗಡ್ಡೆಯನ್ನು ಬಳಸುವ ಮತ್ತೊಂದು ವಿಧಾನವೆಂದರೆ ಅಲೂಗದ್ದೆಯ ರಸವನ್ನು ತೆಗೆದು ಅದನ್ನು ನೇರವಾಗಿ ಕಲೆಗಳ ಮೇಲೆ ನೇರವಾಗಿ ಬಳಸಿ ಫಲಿತಾಂಶವನ್ನು ಕಾಣಬಹುದು.

ಮನೆ ಸ್ವಚ್ಛತೆಗೂ ಉಪಯೋಗಿ

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಬೆಂಗಳೂರಿನಂಥ ಮಹಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರ ಸಂಖ್ಯೆಯೇ ಹೆಚ್ಚು.

ಬಾಡಿಗೆ ಕಟ್ಟುವಲ್ಲಿ ಹೈರಾಣಾಗಿ ಹೋಗುವ ಶರೀರಕ್ಕೆ ಇನ್ನಷ್ಟು ಹೊರೆ ಹೊರಲು ಸಾಧ್ಯವಾಗುವುದಿಲ್ಲ. ಮಿತ ಬೆಲೆಗೆ ಜೀವನ ನಿರ್ವಹಣೆ ಮಾಡಲು ಅನೇಕ ಕಸರತ್ತು ಮಾಡಲೇಬೇಕು. ಅದರಲ್ಲಿ ಇಂಥ ಕೆಲ ಟ್ರಿಕ್ ಬಳಕೆಯೂ ಕಡಿಮೆ ಖರ್ಚಲ್ಲಿ ಸಂಸಾರ ಸರಿದೂಗಿಸಲು ಗೃಹಿಣಿಯರಿಗೆ ಸಹಕಾರಿಯಾಗುತ್ತದೆ.

LEAVE A REPLY

Please enter your comment!
Please enter your name here