ಮೂಡ್ ಸರಿ ಇಲ್ಲ ನನ್ನದು ಎಂಬ ಮಾತು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಆಗಾಗ ಕೇಳಿ ಬರುವಂತದ್ದು.ಮೂಡ್ ಎಂದರೆ ಚಿತ್ತ ಅಥವ ಮನಸ್ಥಿತಿ.ಮನಸ್ಥಿತಿ ಸ್ಥಿಮಿತದಲ್ಲಿ ಇಲ್ಲದೆ ಚಂಚಲತೆಯನ್ನು ಹೊಂದಿದಾಗ ಹೊಂದುವ ಸ್ಥಿತಿಯೇ ಮನದ ತೊಳಲಾಟ.ಚಿತ್ತದ ಚಂಚಲತೆಯನ್ನು ನಿಭಾಯಿಸುವುದೇ ಒಂದು ಸವಾಲೆನಿಸಿದೆ.

ಹೆಚ್ಚಿನ ಸಂದರ್ಭಗಳಲ್ಲಿ ಈ ಬಗೆಯ ಚಂಚಲತೆ ಹಾರ್ಮೋನುಗಳ ಕಾರಣದಿಂದ ಆಗುವಂತದ್ದು.ಹಾರ್ಮೋನುಗಳ ವ್ಯತ್ಯಯದಿಂದ ಹಲವು ಮಹಿಳೆಯರಲ್ಲಿ ಅವರ ಮೆನ್ಸುರಲ್ ಅವಧಿಯ ಮುನ್ನ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಉದಾಹರಣೆಗೆ ಸ್ತನದಲ್ಲಿ ನೋವುಕಾಣಿಸುವುದು, ದೇಹದ ವಿವಿಧ ಭಾಗಗಳಲ್ಲಿ ನೋವುಗಳು,ದೇಹಕ್ಕೆ ಸುಸ್ತೆನಿಸುವುದು,ಕಿರಿಕಿರಿಯ ಅನುಭವ,ಭಾವನೆಯನ್ನು ನಿಯಂತ್ರಿಸಿಕೊಳ್ಳಲಾಗದಿರುವ ಸ್ಥಿತಿ ಇತ್ಯಾದಿಗಳು.ಇಂತಹ ಸಮಸ್ಯೆಗಳು ಅವರ ಮನಸ್ಸಿನ ಮೇಲೂ ಹೆಚ್ಚ್ಚಿನ ಪರಿಣಾಮವನ್ನು ಬೀರಿದಾಗ ಈ ಸಮಸ್ಯೆಯನ್ನು ಪಿಎಮೆಸ್(ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್) ಎನ್ನಲಾಗುತ್ತದೆ.

ಹೀಗೆ ಹಾರ್ಮೋನುಗಳ ವ್ಯತ್ಯಯದಿಂದಾಗಿ ನಮ್ಮ ಮನಸ್ಥಿತಿಯ ಮೇಲೆ ಕೆಟ್ಟ ಪ್ರಭಾವ ಬೀರುವುದನ್ನು ನೋಡಬಹುದಾಗಿದೆ.ಇಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ಶೀಘ್ರವಾಗಿ ಕೋಪಗೊಂಡು ಸುಮ್ಮನೇ ರೇಗಾಡುವುದು,ಸಕಾರಣವಿಲ್ಲದೆ ಮಕ್ಕಳಿಗೆ ಹೊಡೆಯುವುದು, ಮುಂತಾದ ತಪ್ಪುಗಳು ನಡೆದುಹೋಗಬಹುದು.

ಮತ್ತು ಅದರಿಂದ ದುಃಖವನ್ನೂ ಅನಭವಿಸು ವಂತಾಗುವುದಲ್ಲದೆ ಪಶ್ಚಾತಾಪವನ್ನೂ ಪಡಬೇಕಾಗಬಹುದು.ಈ ಸ್ಥಿತಿಯನ್ನು ನಿಭಾಯಿಸಲು ಅಂದರೆ ಒಳ್ಳೆಯ ಮೂಡಿನಲ್ಲಿರಲು ಹೆಚ್ಚು ಅನುಕೂಲವಾಗುವ ಏಳು ಬಗೆಯ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ!

ತೆಂಗಿನಕಾಯಿ

ತೆಂಗಿನಕಾಯಿಯ ಸಣ್ಣಸಣ್ಣ ತುಂಡುಗಳನ್ನು ತಿನ್ನುವುದರಿಂದ ನಿಮ್ಮ ಮೂಡ್ ಸರಿಯಾಗುತ್ತದೆ.ತೆಂಗಿನಕಾಯಿಯಲ್ಲಿ ಮಧ್ಯಮ ಸರಪಳಿ ಮೇಧಾಮ್ಲವಿರುವುದರಿಂದ ಇದು ನಿಮ್ಮ ಮೆದಳನ್ನು ಚುರುಕಾಗಿರಿಸುವುದರ ಜೊತೆಗೆ ಆನಂದವಾಗಿರುವಂತೆ ಮಾಡುತ್ತದೆ.

ಅಲ್ಲದೆ ಇದು ಸಹಜವಾಗಿಯೇ ಸಿಹಿಯಾಗಿರುವುದರಿಂದ ತಿನ್ನಲೂ ರುಚಿಕರವಾಗಿರುತ್ತದೆ. ಇದನ್ನು ಉಷ್ಣವಲಯದ ಹಣ್ಣು ಎಂತಲೂ ಕರೆಯುತ್ತಾರೆ. ಇದರ ಸೇವನೆಯಿಂದ ನೀವು ಬೇಗನೆ ಕೆಟ್ಟ ಮೂಡ್ ನಿಂದ ಹೊರಬರುತ್ತೀರಿ.

ಕಾಯಿಯ ಮೇಲಿರುವ ಕತ್ತಮಿಂದ ತೆಂಗಿನನಾರು ತಯಾರು ಮಾಡಿ, ಅದರಿಂದ ಕಾಲ್ಚಾಪೆ(doormat), ಹಗ್ಗ, ನೇಣುರುಳುಗಳನ್ನು ಉತ್ಪನ್ನ ಮಾಡುವರು.

ಕಾಯಿ ಒಳಗೆ ಇರುವ ನೀರನ್ನು ಎಳೆನೀರೆಂದು ಕರೆಯುತ್ತಾರೆ.ಈ ಎಳೆನೀರಲ್ಲಿ ಪೋಷಕ ಪದಾರ್ಥಗಳು ಅಧಿಕವಾಗಿವೆ.ಹೆಚ್ಚಿನ ಜನ ಎಳೆನೀರಿರುವ ಪ್ರಭೇದಗಳನ್ನು ಬೆಳೆಸುತ್ತಾರೆ. ಅದರಲ್ಲಿ ಗಂಗಾಭವಾನಿ ಪ್ರಭೇದವೂ ಒಂದು.

ಕತ್ತ ತೆಗೆದ ತೆಂಗಿನಕಾಯನ್ನು ದೇವಾಲಯದಲ್ಲಿ, ಮನೆಯಲ್ಲಿ ಪೂಜೆ ಮಾಡುವಾಗ ಉಪಯೋಗಿಸುವರು.ಶುಭಕಾರ್ಯದಲ್ಲಿ,ಮದುವೆ ಸಂದರ್ಭದಲ್ಲಿ ತೆಂಗಿನಕಾಯಿ ಇರಲೇಬೇಕು.ಕತ್ತದ ಕೊಚ್ಚನ್ನು ಸೌದೆಯನ್ನಾಗಿ ವಿನಿಯೋಗಿಸುತ್ತಾರೆ

ಡಾರ್ಕ್ ಚಾಕಲೇಟುಗಳು

ಡಾರ್ಕ್ ಚಾಕಲೆಟ್ಟುಗಳು ಕಾರ್ಟಿಸೋಲ್ ಮತ್ತು ಕಾಟೆಕೋಲಮೈನ್ ಎಂಬ ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳನ್ನು ನಿಯಂತ್ರಣದಲ್ಲಿರಿಸುತ್ತವೆ ಎಂಬದು ಅಧ್ಯಯನದಿಂದ ತಿಳಿದುಬಂದಿದೆ.

ಮೋಡದಂತಹ ವಾತಾವರಣದಲ್ಲಿ ನಿಮ್ಮ ಮೂಡ್ ಕೆಟ್ಟದಾಗಿದ್ದರೆ ಹಾಟ್ ಚಾಕಲೇಟ್, ಮೌಲ್ಟನ್ ಡಾರ್ಕ್ ಚಾಕಲೇಟ್ ಮತ್ತು ಹಾಲಿನಿಂದ ತಯಾರಿಸಲ್ಪಟ್ಟ ಪಾನೀಯವನ್ನು ಸೇವಿಸುವುದರಿಂದ ಆಹ್ಲಾದಕರವಾದ ಅನುಭವವನ್ನು ಪಡೆಯಬಹುದು.

ಡಾರ್ಕ್‌ ಚಾಕಲೇಟ್‌ನಲ್ಲಿ ಹೆಚ್ಚಿನ ಪೋಷಕಾಂಶ ಇದೆ

ಡಾರ್ಕ್‌ ಚಾಕಲೇಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ಅಡಗಿದೆ. ಅಂದರೆ ಇದರಲ್ಲಿ ಫೈಬರ್‌ ಮತ್ತು ಮಿನೆರಲ್ಸ್‌ ಹೆಚ್ಚಾಗಿದೆ. ಇದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ.

ರಕ್ತದೊತ್ತಡ ನಿಯಂತ್ರಿಸುತ್ತದೆ

ಡಾರ್ಕ್‌ ಚಾಕಲೇಟ್‌ನಲ್ಲಿ ಕಬ್ಬಿಣ, ತಾಮ್ರ, ಮೆಗ್ನೀಷಿಯಂ ಮತ್ತು ಮ್ಯಾಂಗನೀಸ್ ಖನಿಜಾಂಶಗಳು ಯಥೇಚ್ಛ ಪ್ರಮಾಣದಲ್ಲಿದ್ದು ಇವೆಲ್ಲಾ ರಕ್ತದೊತ್ತಡವನ್ನು ಸಮಮಟ್ಟದಲ್ಲಿ ಇರಿಸಲು ಸಹಕಾರಿಯಾಗಿವೆ.ಇದರಲ್ಲಿ ಕೊಬ್ಬು ಮತ್ತು ಸಕ್ಕರೆಯ ಪ್ರಮಾಣವೂ ಅತ್ಯಂತ ಕಡಿಮೆಯಿದೆ.ಬೇರೆ ರೀತಿಯ ಚಾಕ್ಲೇಟ್‌ಗಳಲ್ಲಿ ಈ ಅಂಶಗಳು ಅಧಿಕವಾಗಿರುತ್ತವೆ.ಅದರಲ್ಲೂ ಅತ್ಯಂತ ಪರಿಶುದ್ಧವಾಗಿರುವ ಕೋಕೊ ಚಾಕ್ಲೇಟ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿದೆ.

ಕೊಲೆಸ್ಟ್ರಾಲ್ ನಿವಾರಣೆ

ಸುಮಾರು 75 ಗ್ರಾಂನಷ್ಟು ಕೋಕೊ ಅಂಶವಿರುವ ಡಾರ್ಕ್‌ ಚಾಕಲೇಟ್‌ ಕೆಟ್ಟ ಕೊಲೆಸ್ಟ್ರಾಲ್‌ಗಳ ವಿರುದ್ಧ ಹೋರಾಡಿ,ಅದರ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.ಹಾಗೂ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಅಂಶಗಳು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಗೊಳ್ಳದಂತೆ ಮಾಡುತ್ತವೆ.ಇದರಲ್ಲಿರುವ ಕರಗದ ಕೊಬ್ಬಿನ ಆಮ್ಲಗಳು ದೇಹಕ್ಕೆ ಉತ್ತಮವಾಗಿ ಪರಿಣಮಿಸುತ್ತವೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ಕೋಕೊದಲ್ಲಿರುವ ರಾಸಾಯನಿಕ ಅಂಶಗಳು ನೈರ್ಸಗಿಕ ಆಸ್ಪಿರಿನ್‌ನಂತೆ ಕಾರ್ಯ ನಿರ್ವಹಿಸುತ್ತವೆ.ಇವು ರಕ್ತವನ್ನು ತೆಳುವಾಗಿಸುವ ಕೃತಕ ಗುಳಿಗೆಗಳಂತೆ ನಿಮ್ಮ ರಕ್ತವನ್ನು ತೆಳುವಾಗಿಸುತ್ತದೆ.ಹಾಗೂ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ.

ಸ್ಪಿನಾಚ್ ಹಸಿರು ಎಲೆಗಳು

ಸ್ಪಿನಾಚ್ ಹಸಿರು ಎಲೆಗಳೂ ಕೂಡ ನಿಮ್ಮ ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ. ಇದು ತಕ್ಷಣಕ್ಕೆ ಅರಿವಿಗೆ ಬರದಿದ್ದರೂ ನಿಧಾನವಾಗಿ ಅದು ನಿಮ್ಮ ಮನಸ್ಥಿತಿಯನ್ನು ಸ್ಥಿರವಾಗಿಸುವಲ್ಲಿ ಸಹಾಯಕವಾಗಬಲ್ಲದು. ಹಾಗಾಗಿ ನಿಮ್ಮ ಮೆನ್ಸುರಲ್ ದಿನ ಹತ್ತಿರುವಾಗಿರುವಾಗ ಇದನ್ನು ನಿಮ್ಮ ಆಹಾರದಲ್ಲಿ ಬಳಸಿಕೊಳ್ಳಲು ಮರೆಯದಿರಿ.

ಯುನೈಟೆಡ್ ಸ್ಟೇಟ್ಸ್ನ ಸಂಶೋಧಕರು ಪಾಲಕವನ್ನು ಸ್ನಾಯು ಬೆಳೆಯುವ ಸಾಮರ್ಥ್ಯವನ್ನು ಸೂಚಿಸುತ್ತಾರೆ. ಇದಕ್ಕೆ ಕಾರಣವೆಂದರೆ ಅಧ್ಯಯನವು ಮಾನವರ ಮೇಲೆ ನಡೆಸಲಾಗುವುದಿಲ್ಲ ಆದರೆ ದಿನಕ್ಕೆ 1 ಕೆಜಿ ಎಲೆ ಪಾಲಕವನ್ನು ಮಾನವ ಬಳಕೆಗೆ ಅನುಗುಣವಾಗಿ ಪ್ರಮಾಣದಲ್ಲಿ ನೀಡಲಾಗುವ ಇಲಿಗಳ ಮೇಲೆ.

ಗಮನಿಸಿದ ಪರಿಣಾಮಕ್ಕೆ ಜವಾಬ್ದಾರಿಯುತವಾದ ಸಾಮಾನ್ಯ ಹೆಸರು ಫೈಟೊಕ್ಸ್ಡಿಸ್ಟರ್ಗಳೊಂದಿಗೆ ಒಂದು ಗುಂಪಿನ ವಸ್ತುಗಳು. ಪಾಲಕ ಜೊತೆಗೆ, ಫೈಟೊಕ್ಸ್ಡೈಸ್ಟರ್ಗಳು ಮೂಲಿಕೆಯ ಸಸ್ಯಗಳಲ್ಲಿ ಸಹ ಕಂಡುಬರುತ್ತವೆ.

ಮೊಟ್ಟೆ

ಮೊಟ್ಟೆಯನ್ನು ಪ್ರೋಟೀನ್ ಬಾಲುಗಳೆಂದೂ ಕರೆಯಲಾಗುತ್ತದೆ.ಇದರಲ್ಲಿ ವಿಟಮಿನ್ ಮತ್ತು ಮೂಡ್ ಬೂಸ್ಟಿಂಗ್ ಒಮೆಗಾ ತ್ರಿ ಎಂಬ ಮೇಧಾಮ್ಲಗಳು ಹಚ್ಚಿನ ಪ್ರಮಾಣದಲ್ಲಿರುತ್ತವೆ. ಅಷ್ಟೇ ಅಲ್ಲದೆ ಪ್ರೋಟೀನ್ ಅಂಶವೂ ಕೂಡ ಅಧಿಕ ಪ್ರಮಾಣದಲ್ಲಿರುತ್ತದೆ.

ಇವು ನಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿವೆ.ಮೊಟ್ಟೆಯಲ್ಲಿ ಅಧಿಕ ಕೊಲೆಸ್ಟ್ರಾಲ್ ಇದೆ.ಆದರೆ ಇದು ಮನುಷ್ಮನ ದೇಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.

ಈ ಕೊಲೆಸ್ಟ್ರಾಲ್ ರಕ್ತದಲ್ಲಿರುವ ಕೊಬ್ಬನ್ನು ಹೆಚ್ಚಿಸಲ್ಲ.ದೇಹದಲ್ಲಿ ಅತಿ ಹೆಚ್ಚು ಸಾಂದ್ರತೆಯುಳ್ಳ ಲಿಪ್ರೋಪ್ರೋಟೀನ್ ಎಂಬ ಅಂಶವಿರುತ್ತದೆ.ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಇದರ ಪ್ರಮಾಣವನ್ನು ಕಡಿಮೆ ಮಾಡಿ.ಹೃದಯ ರೋಗ ಮತ್ತು ಪಾರ್ಶ್ವ ವಾಯುಗಳಂತ ರೋಗಗಳಿಂದ ಕಾಪಾಡುತ್ತದೆ.ಪ್ರತಿ ನಿತ್ಯ ಒಂದು ಮೊಟ್ಟೆ ತಿಂದರೆ ಮಾಂಸಖಂಡಗಳು ಬಲವಾಗುತ್ತವೆ.

ಮೊಟ್ಟೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆಮೊಟ್ಟೆ ಮಾನವನ ಮಿದುಳನ್ನು ಆರೋಗ್ಯವಾಗಿಡುತ್ತದೆ.ಮೊಟ್ಟೆಯಲ್ಲಿ ಅಗತ್ಯವಾಗಿರುವ ವಿಟಮಿನ್ ಹಾಗೂ ಮಿನರಲ್ಸ್ ಇರುವುದರಿಂದ ಮಿದುಳು ಬೆಳೆಯಲು ಸಹಕರಿಸಿ ಬುದ್ದಿವಂತರನ್ನಾಗಿಸುತ್ತದೆ.
ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿರುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗರ್ಭಿಣಿಯರು ಮೊಟ್ಟೆ ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಪೂರೈಕೆಯಾಗಿ ಆರೋಗ್ಯಯುತವಾಗಿ ಬೆಳೆಯಲು ಸಹಾಯವಾಗುತ್ತದೆ.
ಮೊಟ್ಟೆ ದೃಷ್ಟಿ ದೋಷವನ್ನು ತಡೆಗಟ್ಟುತ್ತದೆ. ತೀವ್ರ ನಿಶಕ್ತತೆ ಹಾಗೂ ಸಣಕಲು ದೆೇಹದಿಂದ ಬಳಲುತ್ತಿರುವವರು ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಸದೃಢರಾಗಿ ಆರೋಗ್ಯಯುತ ದೇಹ ಹೊಂದಬಹುದು.
ಮಹಿಳೆಯರು ವಾರಕ್ಕೆ 4 ರಿಂದ 5 ಮೊಟ್ಟೆ ತಿನ್ನುವುದರಿಂದ ಸ್ತನ ಕ್ಯಾನ್ಸರ್ ನಿಂದ ದೂರ ವಿರುಬಹುದು.ಇನ್ನು ಡಯಟ್ ಮಾಡುವವರಿಗೂ ಮೊಟ್ಟೆ ಉತ್ತಮ ಆಹಾರ. ಇದರಲ್ಲಿರುವ ವಿಟಮಿನ್ಸ್ ಹಾಗೂ ಮಿನರಲ್ಸ್ ದೇಹಕ್ಕೆ ಬೇಕಾದ ಅವಶ್ಯಕ ಅಂಶಗಳನ್ನು ಪೂರೈಸುವುದರಿಂದ ಆಹಾರ ಸಮತೋಲನ ಕಾಪಾಡಬಹುದು.

ಟೊಮೆಟೋ

ಟೊಮೆಟೋದಲ್ಲಿ ಲೈಕೋಪೀನ್ ಅಂಶವಿದ್ದು, ಇದರಲ್ಲಿ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಿರುವುದರಿಂದ ನಿಮ್ಮ ಮೆದುಳಿನ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

ಆದ್ದರಿಂದ ನೀವು ಕೆಟ್ಟ ಮೂಡಿನಲ್ಲಿದ್ದಾಗ ಟೊಮೇಟೋ ಸಲಾಡಿಗೆ ಆಲೀವ್ ಎಣ್ಣೆಯನ್ನು ಹಾಕಿ ತಿನ್ನುವುದರಿಂದ ಟೊಮೆಟೋದಲ್ಲಿನ ಲೈಕೋಪೀನ್ ಅಂಶವನ್ನು ಕರುಳು ಹೀರಿಕೊಳ್ಳಲು ಸಹಾಯವಾಗುತ್ತದೆ.

ನಿಮ್ಮ ಸುಂದರ ತ್ವಚೆಗಾಗಿ,ಮೂಳೆಗಳ ಅಭಿವೃದ್ಧಿಗಾಗಿ ಟೊಮೇಟೊ ಸಹಕಾರಿಯಾಗಿದೆ. ತೂಕ ಇಳಿಕೆಯಲ್ಲೂ ಇದು ಪರಿಣಾಮಕಾರಿ ಪ್ರಭಾವವನ್ನು ಬಿರುತ್ತದೆ ಎಂಬುದು ಸಾಬೀತಾಗಿದ್ದು ವಿಟಮಿನ್ ಮಿನರಲ್ಸ್ ಯುಕ್ತವಾಗಿದೆ. ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುವ ಇದನ್ನು ಹಸಿಯಾಗಿ ತಿಂದಷ್ಟು ಆರೋಗ್ಯ ಆಯಸ್ಸು ವೃದ್ಧಿಯಾಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ.

ಸುಂದರ ತ್ವಚೆಗಾಗಿ ಟೊಮೇಟೊ

ಫೇಶಿಯಲ್ ಕ್ಲೀನರ್‌ನಂತೆ ಕೆಲವೆಡೆಗಳಲ್ಲಿ ಬಳಸಲಾಗುವ ಲೈಕೋಪನ್ ಟೊಮೇಟೊದಲ್ಲಿ ಹೇರಳವಾಗಿದೆ. ಮುಖದ ಅಂದಕ್ಕಾಗಿ ಟೊಮೇಟೊವನ್ನು ನೀವು ಬಳಸುತ್ತಿರುವಿರಿ ಎಂದರೆ 8 ರಿಂದ 12 ಟೊಮೇಟೊಗಳ ಅವಶ್ಯಕತೆ ನಿಮಗಿದೆ.

ಟೊಮೇಟೊದ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ನಿಮ್ಮ ಮುಖದ ಮೇಲಿಡಿ. 10 ನಿಮಿಷಗಳಷ್ಟು ಕಾಲ ಟೊಮೇಟೊ ತಿರುಳು ನಿಮ್ಮ ಮುಖದಲ್ಲಿರಲಿ ನಂತರ ತೊಳೆಯಿರಿ. ಇದು ಮುಖವನ್ನು ಸ್ವಚ್ಛಗೊಳಿಸಿ ಹೊಳೆಯುವಂತೆ ಮಾಡುತ್ತದೆ.

ಜೇನುತುಪ್ಪ

ಜೇನುತುಪ್ಪದಲ್ಲಿ ನಿಮ್ಮ ಮೆದುಳನ್ನು ಆರೋಗ್ಯವಾಗಿರಿಸುವ ಮತ್ತು ಖಿನ್ನತೆಯನ್ನು ದೂರಮಾಡುವ ಕ್ಯಾಮ್ಪೆರ್ಫಾಲ್ ಮತ್ತು ಕ್ವೆರ್ಸೆಟಿನ್ ಅಂಶಗಳನ್ನು ಹೊಂದಿದ್ದು ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಅಲ್ಲದೆ ಜೇನುತುಪ್ಪವು ಸಕ್ಕರೆಗಿಂತ ಐದು ಪಟ್ಟು ಹೆಚ್ಚಿನ ಸಿಹಿಯನ್ನು ಹೊಂದಿದ್ದು ತಿನ್ನಲೂ ರುಚಿಕರ ಹಾಗೂ ಸ್ವಲ್ಪವನ್ನು ತಿಂದರೂ ಸ್ವಾದಕರವಾಗಿ ಮನಸ್ಸಿಗೆ ಹಿತ ನೀಡುತ್ತದೆ.

ಕ್ಯಾನ್ಸರ್ ನಿರೋಧಕ

ಜೇನುತುಪ್ಪ ಫ್ಲೇವೊನೈಡ್ಗಳನ್ನು ಹೊಂದಿದೆ, ಇದು ಕೆಲವು ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳು. ಕ್ರೈಸಿನ್, ಪಿ-ಕೊಮಾರ್ರಿಕ್ ಆಸಿಡ್, ಗಲಿಕ್ ಆಸಿಡ್, ಎಲ್ಯಾಜಿಕ್ ಆಸಿಡ್, ಫೆರುಲಿಕ್ ಆಸಿಡ್,

ಸಿರಿಂಜಿಕ್ ಆಸಿಡ್, ಕೆಫೀಕ್ ಆಸಿಡ್ ಸೇರಿದಂತೆ, ಜೇನುತುಪ್ಪದಲ್ಲಿ ಗುರುತಿಸಲಾದ ಹಲವಾರು ಫ್ಲೇವೊನೈಡ್ಗಳು ಮತ್ತು ಫೀನಾಲ್ ಸಂಯುಕ್ತಗಳು ಇವೆ, ಇವುಗಳು ಉರಿಯೂತ ನಿರೋಧಕಗಳು, ಆಂಟಿಆಕ್ಸಿಡೆಂಟ್, ಮೆಟಾಸ್ಟಾಟಿಕ್ ವಿರೋಧಿ ಗುಣಗಳು ಮತ್ತು ಕ್ಯಾನ್ಸರ್ಗಳಲ್ಲಿ ಗೆಡ್ಡೆಗಳು ಅಧಿಕ ಬೆಳೆಯದಂತೆ ಪ್ರತಿಬಂಧಕ ಅಂಶಗಳನ್ನು ಒಳಗೊಂಡಿದೆ.

ಕೆಮ್ಮು ನಿವಾರಕ

ಜೇನುತುಪ್ಪವು ಗಟ್ಟಿ ದ್ರವ ಇರುವ ಕಾರಣ ಇದು ಗಂಟಲ ಒಳಗೆ ಒಂದು ಪದರವನ್ನು ರಚಿಸಿ ಗಂಟಲಲ್ಲಾಗುವ ಕಿರಿಕಿರಿಯನ್ನು ತಪ್ಪಿಸುತ್ತದೆ ಮತ್ತು ಇದರ ಸಿಹಿ ರುಚಿಯು ನರ ತುದಿಗಳನ್ನು ಪ್ರಚೋದಿಸಿ ಕೆಮ್ಮು ಬರುವುದನ್ನು ತಡೆಹಿಡಿಯುತ್ತದೆ. ಜೇನುತುಪ್ಪವು ಮೇಲ್ಭಾಗದ ಶ್ವಾಸಕೋಶದ ತೊಂದರೆಗಳನ್ನು ಮತ್ತು ಇತರೆ ಸೋಂಕನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಬ್ಯಾಕ್ಟೀರಿಯಾ ವಿರೋಧಿ, ಶಿಲಿಂಧ್ರ ವಿರೋಧಿ

ಜೇನುತುಪ್ಪವು ಬ್ಯಾಕ್ಟೀರಿಯಾ ಮತ್ತು ಶಿಲಿಂಧ್ರಗಳೆರಡೂ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಇದನ್ನು ನೈಸರ್ಗಿಕ ಆಂಟಿಸೆಪ್ಟಿಕ್ ಔಷಧಿಯನ್ನಾಗಿ ಬಳಸಲಾಗಿದೆ.

ಸುಟ್ಟ ಗಾಯ ಮತ್ತು ಬಿದ್ದ ಗಾಯವನ್ನು ವಾಸಿ ಮಾಡುತ್ತದೆ

ಜೇನುತುಪ್ಪ ನೈಸರ್ಗಿಕ ಪ್ರತಿಜೀವಕವಾಗಿದ್ದು ಅದು ಆಂತರಿಕವಾಗಿ ಮತ್ತು ಬಾಹ್ಯವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಸೂಕ್ಷ್ಮಕ್ರಿಮಿನಾಶಕ ಗುಣಲಕ್ಷಣಗಳು ಸೋಂಕನ್ನು ತಡೆಗಟ್ಟಿ ಬೇರೆ ಕಾರ್ಯಗಳಾದ ಉರಿಯೂತ ವಿರೋಧಿ ಕೆಲಸ ಮಾಡಿ ಊತ ಮತ್ತು ನೋವು ಎರಡನ್ನೂ ಕಡಿಮೆ ಮಾಡುತ್ತದೆ,

ಮತ್ತು ಕಲೆ ಬೀಳದಂತೆ ನೋಡಿಕೊಳ್ಳುತ್ತದೆ. ಜೇನುತುಪ್ಪ ಗಾಳಿಯಿಂದ ತೇವಾಂಶವನ್ನು ಹೀರಿಕೊಂಡು ಗಾಯವನ್ನು ವಾಸಿಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದನ್ನು ಪ್ರಥಮ ಚಿಕಿತ್ಸೆಯಾಗಿ ಮತ್ತು ನೈಸರ್ಗಿಕ ಚಿಕಿತ್ಸೆಯ ರೂಪವಾಗಿ ಗಾಯಗಳು, ಸುಟ್ಟ ಗಾಯಗಳು ಮತ್ತು ಸೀಳಿರುವ ಗಾಯಗಳಿಗೆ ಬಳಸಲಾಗುತ್ತದೆ.

ಶಕ್ತಿ ಉತ್ತೇಜಕ

ಜೇನುತುಪ್ಪವು ನಮ್ಮ ಶರೀರಕ್ಕೆ ಬೇಕಾಗಿರುವ ಶಕ್ತಿ ಮತ್ತು ದೃಢತೆಯನ್ನು ಒದಗಿಸುವ ಕಾರ್ಬೋಹೈಡ್ರೇಟ್ಗಳ ಒಂದು ಉತ್ತಮ ಮೂಲವಾಗಿದೆ. ಇದನ್ನು ಸೇವಿಸಿದ ತಕ್ಷಣವೇ ಕಾರ್ಯಕ್ಷಮತೆಯನ್ನು ಉತ್ತೇಜಿಸುವಲ್ಲಿ ಇದು ಬಹಳ ಪರಿಣಾಮಕಾರಿಯಾಗಿದೆ. ಜೇನುತುಪ್ಪದಲ್ಲಿರುವ ನೈಸರ್ಗಿಕ ಸಕ್ಕರೆ ವ್ಯಾಯಾಮದ ಸಮಯದಲ್ಲಿ ಆಗುವ ಆಯಾಸವನ್ನು ತಡೆಯುತ್ತವೆ. ಇದರಲ್ಲಿನ ಗ್ಲುಕೋಸ್ ತ್ವರಿತವಾಗಿ ಹೀರಿಕೊಂಡು, ತಕ್ಷಣದ ಶಕ್ತಿ ವರ್ಧಕವನ್ನು ನೀಡುತ್ತದೆ, ಮತ್ತು ಫ್ರಕ್ಟೋಸ್ ನಿಧಾನವಾಗಿ ಹೀರಿಕೊಂಡು ನಿರಂತರ ದೃಢತೆಯನ್ನು ಒದಗಿಸುತ್ತದೆ. ಇತರ ವಿಧದ ಸಕ್ಕರೆಯೊಂದಿಗೆ ಹೋಲಿಸಿದರೆ ಜೇನುತುಪ್ಪವನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸ್ಥಿರವಾಗಿ ಉಳಿಸಿಕೊಳ್ಳಲು ಸಹಾಯಮಾಡುತ್ತದೆ.

ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ

ಜೇನುತುಪ್ಪವನ್ನು ಸೇವಿಸುವುದರಿಂದ ಮಕ್ಕಳು ಮತ್ತು ಶಿಶುಗಳಲ್ಲಾಗುವ ಬ್ಯಾಕ್ಟೀರಿಯಾ ಸೋಂಕಿನ ಭೇದಿಯ ಸಮಯವನ್ನು ಕಡಿಮೆ ಮಾಡಬಹುದು ಮತ್ತು ಇದನ್ನು ಗ್ಲುಕೋಸ್ ನ ಬದಲಿಗೆ ಓಆರ್ಎಸ್ ನಲ್ಲಿ ಬಳಸಬಹುದು. ಇದು ಹೊಟ್ಟೆ ಮತ್ತು ಜೀರ್ಣ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟಬಲ್ಲವು.

ತೂಕ ಇಳಿಕೆ

ಜೇನುತುಪ್ಪದಲ್ಲಿ ಸಕ್ಕರೆಕ್ಕಿಂತ ಹೆಚ್ಚಿನ ಕ್ಯಾಲೋರಿಗಳು ಇದ್ದರೂ ಸಹ ಇದನ್ನು ಬೆಚ್ಚಗಿನ ನೀರಿನಲ್ಲಿ ತೆಗೆದುಕೊಂಡಾಗ ಇದು ದೇಹದಲ್ಲಿರುವ ಕೊಬ್ಬನ್ನು ಕರಗಿಸುವಲ್ಲಿ ಸಹಾಯಮಾಡುತ್ತದೆ. ಹಾಗೆಯೇ ಜೇನುತುಪ್ಪ ಮತ್ತು ಲಿಂಬೆ ರಸವನ್ನು ಒಂದು ಚಿಟಿಕೆ ಚಕ್ಕೆಯೊಂದಿಗೆ ಸೇವಿಸುವುದರಿಂದಲೂ ಸಹ ತೂಕವನ್ನು ಇಳಿಸಬಹುದು.

ಚರ್ಮ

ಇದರ ಸೂಕ್ಷ್ಮಕ್ರಿಮಿನಾಶಕ ಗುಣಗಳು ತ್ವಚೆಗೆ ಹೆಚ್ಚು ಸಹಕಾರಿಯಾಗಿವೆ, ಇದನ್ನು ಬೇರೆ ನೈಸರ್ಗಿಕ ಪದಾರ್ಥಗಳೊಂದಿಗೆ ಉಪಯೋಗಿಸುವುದರಿಂದ ಇದು ತ್ವಚೆಗೆ ಬೇಕಾಗಿರುವ ಪೋಷಣೆ ಮತ್ತು ತೇವಾಂಶವನ್ನು ಒದಗಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇದರ ಆಂಟಿಆಕ್ಸಿಡೆಂಟ್ ಮತ್ತು ಸೂಕ್ಷ್ಮಜೀವಿಗಳಪ್ರತಿರೋಧಕ ಗುಣಗಳು ಜೀರ್ಣಾಂಗವನ್ನು ಆರೋಗ್ಯಕರ ರೀತಿಯಲ್ಲಿ ಇಡುವಲ್ಲಿ ಯಶಸ್ವಿಯಾಗಿದೆ. ಜೇನುತುಪ್ಪದ ಆರೋಗ್ಯದ ಮೇಲಿನ ಪ್ರಯೋಜನವನ್ನು ನೀವು ಕೂಡ ಪಡೆಯಬೇಕೆಂದಿದ್ದರೆ ಪ್ರತಿ ದಿನವೂ ಈ ಟಾನಿಕನ್ನು ಹೀಗೆ ಬಳಸಿ : ಬೆಳಗಿನ ತಿಂಡಿಯ ಮೊದಲು, ಅರ್ಧ ಕಪ್ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಮತ್ತು ಅರ್ಧ ನಿಂಬೆ ರಸವನ್ನು ಮಿಶ್ರಣ ಮಾಡಿ ಕುಡಿಯಿರಿ.

ತಲೆ ಹೊಟ್ಟಿಗಾಗಿ

ಜೇನುತುಪ್ಪದ ಸೂಕ್ಷ್ಮಜೀವಿನಾಶಕ ಮತ್ತು ಶಿಲಿಂಧ್ರ ವಿರೋಧಿ ಗುಣಗಳು ನೆತ್ತಿಯ ತಲೆಹೊಟ್ಟು ಸಮಸ್ಯೆಯಿಂದ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ. ಮತ್ತು ಇದು ಶಿಲಿಂಧ್ರ ಜೀವಿಗಳಿಂದ ಆಗಾಗ್ಗೆ ಆಗುವ ಸೆಬೋರ್ಹ್ಯಿಕ್ ಡೆರ್ಮಟೈಟಿಸ್ ಹಾಗೂ ತಲೆ ಹೊಟ್ಟನ್ನು ಕೂಡ ಕಡಿಮೆಮಾಡುತ್ತದೆ. ಇದರ ನೋವುನಿವಾರಕ ಶಕ್ತಿಯು ನೆತ್ತಿಯಲ್ಲಾಗುವ ತುರಿಕೆ ಮತ್ತು ಚರ್ಮ ಕೆಂಪಾಗುವುದನ್ನು ತಡೆಗಟ್ಟುತ್ತದೆ.

ಗ್ರೀಕ್ ಮೊಸರು

ಗ್ರೀಕ್ ಮೊಸರು ಹೆಚ್ಚಿನ ಪ್ರಮಾಣದ ಕಾಲ್ಸಿಯಂ ಹೊಂದಿದೆ. ಮತ್ತು ಇದು ಮೆದುಳಿನಲ್ಲಿ ನರಪ್ರೇಕ್ಷಕಗಳ ಬಿಡುಗಡೆಗೆ ಅವಶ್ಯಕವಾಗಿದೆ. ಬಹುಮುಖ್ಯವಾಗಿ ಉಲ್ಲಾಸದ ಭಾವನೆಗಳ ಉತ್ಪತ್ತಿಗೆ ಕಾರಣವಾಗುವಂತಹದಾಗಿದೆ.ಹಾಗಾಗಿ ಹಣ್ಣುಗಳ ಜೊತೆಗೆ ಸೇರಿಸಿಕೊಂಡು ಸೇವಿಸಿದರೆ ಇದು ತಿನ್ನಲೂ ರುಚಿ ಹಾಗೂ ಮನಸ್ಸಿಗೂ ಆನಂದದಾಯಕ.

LEAVE A REPLY

Please enter your comment!
Please enter your name here