ಈ ಕಾಳಿನ ಉಪಯೋಗಗಳನ್ನು ನೋಡಿದ್ರೆ ನೀವು ಈಗಲೇ ಉಪಯೋಗಿಸೋಕೆ ಶುರು ಮಾಡ್ತೀರಾ..ಯಾವ ಕಾಳು ಗೊತ್ತ ಅದು?

0
1451

ಓಮ ಕಾಳು  ಪ್ರತಿದಿನ ನಾವು ಉಪಯೋಗಿಸುತ್ತಲೇ ಇರುತ್ತವೆ.ಇದನ್ನು ಅಜ್ವಾನ ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ.ಇದು ಬರೀ ಮಸಾಲೆ ಪದಾರ್ಥ ಆಗಿರದೆ ಔಷದೀಯ ವಸ್ತುವಾಗಿಯೂ ಕೆಲಸ ಮಾಡುತ್ತದೆ.ಇದರ ಉಪಯೋಗಗಳನ್ನು ಇಲ್ಲಿ ತಿಳಿಯಿರಿ..

ನಮ್ಮ ಪ್ರಸ್ತುತದ ಆಹಾರ ಪದ್ಧತಿಯಿಂದಾಗಿ ಅಜೀರ್ಣ, ಹೊಟ್ಟೆನೋವು, ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇವೆಲ್ಲವುಗಳಿಗೆ ಓಮಕಾಳಿನ ಕಷಾಯ ಮಾಡಿ ಕುಡಿದರೆ ಬಲುಬೇಗ ಪರಿಹಾರ ಕಂಡುಬರುತ್ತದೆ.ಪ್ರತಿದಿನ ಊಟದ ಬಳಿಕ ಆರೇಳು ಓಮದ ಕಾಳುಗಳನ್ನು ಅಗಿದು ನುಂಗಿದರೆ ಅಜೀರ್ಣ,ಹೊಟ್ಟೆಯುಬ್ಬರ ಬರುವುದಿಲ್ಲ.

ನಾಲ್ಕಾರು ಓಮದ ಕಾಳುಗಳನ್ನು ಸಣ್ಣತುಂಡು ಬೆಲ್ಲದೊಂದಿಗೆ ದಿನಕ್ಕೆ ಮೂರು ಸಲ, ಮೂರುದಿನ ಅಗಿದು ನುಂಗುವುದರಿಂದ ರಕ್ತಭೇದಿ, ಅತಿಸಾರಕ್ಕೆ ತಡೆ.ಓಮ ಕಾಳು ಹಾಗೂ ಶುಂಠಿಯೊಂದಿಗೆ ತಿನ್ನುವುದರಿಂದ ಅಜೀರ್ಣ, ಹೊಟ್ಟೆನೋವು, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳಿಂದ ದೂರ ಇರಬಹುದು.ಮೂಗು  ಕಟ್ಟಿದ್ದರೆ ಶೀತ ಆಗಿದ್ದರೆ ಬೆಲ್ಲದ ಜೊತೆ ಓಮ ಕಾಳನ್ನು  ಬಿಸಿ ಮಾಡಿ ಸೇವಿಸಿ ಶೀತದಿಂದ ಮುಕ್ತಿ ಪಡೆಯಿರಿ.

ಓಮ ಕಾಳನ್ನು ಬಿಸಿ ನೀರಿನೊಂದಿಗೆ ಸೇರಿಸಿ ಅದನ್ನು ಕುಡಿಸಿ ಅದರ ನೀರಿನಿಂದ ಆವಿಯನ್ನು ತೆಗೆದುಕೊಂಡರೆ ಹಲ್ಲು ನೋವು ಕಿವಿ ನೋವನ್ನು ದೂರ ಮಾಡಬಹುದು. ಗಾಯ ಇರುವ ಭಾಗಕ್ಕೆ ಓಮದ ಕಾಳನ್ನು ಜಜ್ಜಿ ಹಚ್ಚಿದರೆ ಗಾಯದ ಕಲೆ ಮಾಯವಾಗುತ್ತದೆ,ಓಮ ಕಾಳಿನ ನೀರು ಹೆಣ್ಣುಮಕ್ಕಳಿಗೆ ತುಂಬಾ ಒಳ್ಳೆಯದು.

ಓಮದ ಕಾಳಿನೊಂದಿಗೆ ಒಣ ದ್ರಾಕ್ಷಿ ಸಕ್ಕರೆ ಕರಿಬೇವಿನ ಸೊಪ್ಪಿನ ಪೇಸ್ಟ್ ಮಾಡಿ ತಲೆಗೆ ಹಚ್ಚ್ಚಿಕೊಳ್ಳುವುದರಿಂದ ಬಿಳಿ ಕೂದಲನ್ನು ತಡೆಗಟ್ಟಬಹುದು

LEAVE A REPLY

Please enter your comment!
Please enter your name here