ಈ ಸಿಹಿತಿಂಡಿಯ ಹೆಸರಿಗೂ ಒಂದು ಇತಿಹಾಸವಿದೆ.ಯಾವುದು ಆ ಸಿಹಿತಿಂಡಿ?ಅದನ್ನು ಮಾಡೋದು ಹೇಗೆ ಎನ್ನುವ ವೀಡಿಯೋ ನೋಡಿ..

0
215

ಮೈಸೂರ್ ಪಾಕ್ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ? ಎಲ್ಲರು ಮೈಸೂರ್ ಪಾಕ್ ನ್ನು ಇಷ್ಟ ಪಡುತ್ತಾರೆ.ಅದರ ರುಚಿಗೆ ಮಾರು ಹೋಗದವರಿಲ್ಲ.ಆದರೆ ಮೈಸೂರ್ ಪಾಕ್ ಗೆ ಮೈಸೂರ್ ಪಾಕ್ ಎಂದೇ ಏಕೆ ಕರೆಯುತ್ತಾರೆ? ಆ ಹೆಸರು ಹೇಗೆ ಬಂತು?ಆ ಹೆಸರು ಬರಲು ಕಾರಣವೇನು? ಇದನ್ನು ತಿಳಿಯಲು ಕೆಳಗಿನ ಲೇಖನವನ್ನು ಓದಿರಿ..

ಮೈಸೂರು ಪಾಕ್‌ ಇತಿಹಾಸ

1935ರಲ್ಲಿ ಮೈಸೂರು ಅರಮನೆಯ ಪ್ರಧಾನ ಅಡುಗೆ ಭಟ್ಟರಾದ ‘ಕಾಕಸುರ ಮಾದಪ್ಪ’ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಭಕ್ಷ್ಯ ಭೋಜನಗಳನ್ನು ಮಾಡುತ್ತಿದ್ದ ವ್ಯಕ್ತಿ.ಮಹಾರಾಜರು ಹೊರಗಡೆ ಸುತ್ತಾಡಿ ಬರುವ ಮುನ್ನ ಇಂದು ನಾನು ಏನಾದರೂ ವಿಶೇಷ ತಿಂಡಿ ಸಿದ್ಧಪಡಿಸಬೇಕು ಎಂಬ ಚಟಪಡಿಕೆ ಕಾಕಸುರ ಮಾದಪ್ಪನದು.

ಇದನ್ನೂ ಓದಿರಿ..

ಸಿಹಿ ಹಾಗೂ ಖಾರದ ಕಡುಬು ಮಾಡುವ ವಿಧಾನ ಗೊತ್ತೇ? ಈ ವೀಡಿಯೋ ನೋಡಿ

ಯಾವ ಸಿಹಿತಿಂಡಿ ಮಾಡಬೇಕು ಎಂದು ಚಿಂತೆಗೀಡಾಗಿದ್ದ ಭಟ್ಟರ ತಲೆಗೆ ಅದೇನೊ ಹೊಳೆದು, ಕಡಲೆಹಿಟ್ಟು, ತುಪ್ಪ, ಸಕ್ಕರೆ ಸೇರಿಸಿ ಒಂದು ಪಾಕ ಪ್ರಯೋಗ ಮಾಡಿ ಅದನ್ನು ಊಟಕ್ಕೆ ಕುಳಿತ ಮಹಾರಾಜರ ಬಳಿ ಅಳುಕಿನಿಂದಲೇ ಮುಂದಿಟ್ಟರು ಮಾದಪ್ಪ.

ಸಿಹಿತಿಂಡಿಯನ್ನ ಚಪ್ಪರಿಸಿದ ಮಹಾರಾಜರು ಇದೇನಿದು ಹೊಸ ರುಚಿ ಇಷ್ಟೊಂದು ಸ್ವಾದಿಷ್ಟವಾಗಿದೆ. ಈ ಸಿಹಿತಿಂಡಿಯ ಹೆಸರೇನು ಎಂದರಂತೆ. ತಬ್ಬಿಬ್ಬಾದ ಮಾದಪ್ಪನವರು ಸಿಹಿತಿಂಡಿಯ ಹೆಸರು ತನಗೂ ಕೂಡ ತಿಳಿದಿಲ್ಲವೆಂದು ತಲೆ ಅಲ್ಲಾಡಿಸಿದರು. ಈ ತಿಂಡಿಯನ್ನು ಹೇಗೆ ಮಾಡಿದೆ ಎಂದು ಮಹಾರಾಜರು ಪ್ರಶ್ನೆ ಮಾಡಿದರಂತೆ.

ಇದಕ್ಕೆ ಭಟ್ಟರು ಪಾಕ ದಿಂದ ಮಾಡಿದ್ದು ಎಂದು ಹೇಳಿದಾಗ ಈ ಮಾತಿನಿಂದ ಹರ್ಷರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಓ… ಪಾಕದಿಂದ ಮಾಡಿದ್ದ ಇದಕ್ಕೆ ಮೈಸೂರು ಎಂದು ಹೆಸರು ಸೇರಿಸಿ ಬಿಡೋಣವೆಂದರಂತೆ.ಅಂದಿನ ಮೈಸೂರು ಪಾಕ ಇಂದು ಮೈಸೂರು ಪಾಕ್ ಆಗಿದೆ.

ಮೈಸೂರ್ ಪಾಕ್ ಮಾಡೋದು ಹೇಗೆ ಗೊತ್ತೇ?

ನೋಡಿ ಈ ವೀಡಿಯೋ..

LEAVE A REPLY

Please enter your comment!
Please enter your name here