ಊಟವಾದ ಬಳಿಕ ಬಡೆಸೊಪ್ (ಸೋಂಪು)ತಿನ್ನುವುದು ಅನಾದಿಕಾಲದಿಂದಲೂ ಬಂದ ಪದ್ಧತಿ.ಈ ಜಂಕ್ ಫುಡ್ ಯುಗದಲ್ಲಿ ಹಳೆಯ ಪದ್ದತಿಯನ್ನು ನಾವು ಮರೆತಿದ್ದೇವೆ.ಹಾಗು ಇಂತಹ ಆಹಾರಗಳಿಂದ ನಾವು ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ.ಊಟಮಾಡಿದ ನಂತರ ಸೋಪನ್ನು ಚೆನ್ನಾಗಿ ಅಗೆದು ನುಂಗುವುದರಿಂದ ಏನೆಲ್ಲ ಆಗುತ್ತೆ ಗೊತ್ತ

ಅಜೀರ್ಣ,ಗ್ಯಾಸ್, ಅಸಿಡಿಟಿ ಮಲಬದ್ಧತೆ ಮೊದಲಾದ ಸಮಸ್ಯೆಗಳು ಅನೇಕರನ್ನು ಕಾಡುತ್ತಿವೆ.ಆದುದ್ದರಿಂದ ಈ ಸಮಸ್ಯೆಗಳಿಂದ ನರಳುತ್ತಿರುವವರು ಊಟವಾದ ನಂತರ ಒಂದು ಚಮಚ ಸೋಂಪು ತಿಂದರೆ, ಜೀರ್ಣಾಶಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ವಾತ ದೋಷವನ್ನು ನಿವಾರಿಸುವ ಗುಣವಿರುವುದರಿಂದ ಸೋಂಪನ್ನು ತಿನ್ನುವುದರಿಂದ ದೇಹದ ಅಧಿಕ ಭಾರ ಸಮಸ್ಯೆ ತೊಲಗುತ್ತದೆ.ಊಟದ ನಂತರ ಸೋಂಪನ್ನು ತಿಂದರೆ ಬಾಯಿ ಫ್ರೆಶ್ ಆಗಿರುತ್ತದೆ.ಬಾಯಲ್ಲಿರುವ ಬ್ಯಾಕ್ಟೀರಿಯಾ ಹಾಗು ಇತರೆ ಕ್ರಿಮಿಗಳು ನಾಶವಾಗುತ್ತವೆ.ಹಲ್ಲುಗಳು ಹಾಗು ವಸಡುಗಳು ಶುಭ್ರವಾಗುತ್ತವೆ.

ಋತು ಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆ ನೋವಿರುತ್ತದೆ. ಸೋಂಪನ್ನು ತಿನ್ನುವುದರಿಂದ ನೋವು ಕಡಿಮೆಯಾಗುತ್ತದೆ ಹಾಗು ಋತು ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

ಸೊಂಪಿನಲ್ಲಿ ಮ್ಯಾಂಗನೀಸ್, ಜಿಂಕ್, ಕಾಪರ್, ಐರನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೆಲೆನಿಯಮ್ ಮೊದಲಾದ ಖನಿಜ, ಲವಣಗಳಿವೆ, ಇವುಗಳು ಹಲವು ರೀತಿಯ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ.ಸೋಂಪ ಸೇವನೆ ರಕ್ತವನ್ನು ವೃದ್ದ್ಧಿಗೊಳಿಸಿ. ರಕ್ತ ಹೀನತೆಯನ್ನು ನಿವಾರಿಸುತ್ತದೆ. ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚುತ್ತದೆ.

ಕೃಪೆ : ವೆಬ್ ದುನಿಯಾ 

LEAVE A REPLY

Please enter your comment!
Please enter your name here