ಬಿಳಿ ಎಕ್ಕವನ್ನು ದೈವಿಕ ಕಾರ್ಯಗಳಲ್ಲಿ ಬಳಸುವ ಪದ್ಧತಿ ಇದೆ.ಗಣಪತಿಗೆ ಬಿಳಿ ಎಕ್ಕ ತುಂಬಾ ಪ್ರೀತಿ ಎನ್ನುವ ಪ್ರತೀತಿ.ಅದರೆ ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಪ್ರಾಮುಖ್ಯ ಹೊಂದಿದೆ.ಎಕ್ಕದ ಎಲೆಯನ್ನು ದೇಹದ ಸರ್ವಾಂಗಗಳಿಗೆ ಸ್ಪರ್ಶಿಸಿ,ಸ್ನಾನ ಮಾಡಿದರೆ ಮೂಳೆ ನೋವು ನಿವಾರಣೆ ಆಗುವುದು.

ಈ ಕಾರಣಕ್ಕಾಗಿಯೇ ರಥಸಪ್ತಮಿ ದಿನ ಎಕ್ಕದಎಲೆಯ ಸ್ನಾನ ಮಾಡುವುದು.ಎಕ್ಕದಹಾಲನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರವಾಗುವುದು.ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು ಬಿಳಿ ಎಕ್ಕದ ಹೂವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ 15 ದಿನಗಳವರೆಗೆ ಸೇವಿಸಿದರೆ ಪರಿಹಾರ ಕಾಣಬಹುದು.

ಮಾಸಿಕ ಋತುಸ್ರಾವದಲ್ಲಿ ಏರುಪೇರಾಗುತ್ತಿದ್ದರೆ ಅಥವಾ ಅನಿಯಮಿತವಾಗಿದ್ದಲ್ಲಿ ಎಕ್ಕದ ಹೂವು, ಬೆಲ್ಲ ಸೇರಿಸಿ, ಅರೆದು ಗುಳಿಗೆ ಮಾಡಿಕೊಂಡು, ದಿನಕ್ಕೆ 3–4 ಮಾತ್ರೆಯಂತೆ ಸೇವಿಸುವುದು ಉತ್ತಮ.ಬಿಳಿಎಕ್ಕದ ಎಲೆಯ ಕಷಾಯ ಸೇವಿಸಿದರೆ ಹೊಟ್ಟೆ ನೋವು ಶಮನವಾಗುವುದು.

ಯಾವುದೇ ಬಗೆಯ ಜ್ವರವಿದ್ದರೆ,ಎಕ್ಕದ ಬೇರನ್ನು ನಿಂಬೇಹಣ್ಣಿನ ರಸದಲ್ಲಿ ಅರೆದು ಸೇವಿಸಿದರೆ ಉಪಶಮವಾಗುತ್ತದೆ.ಅಜೀರ್ಣವಿದ್ದರೆ,ಎಕ್ಕದ 10 ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು.ಚರ್ಮದ ಕಾಯಿಲೆ ಇದ್ದರೆ ಬಿಳಿ ಎಕ್ಕದ ಹಾಲು ಹಾಗೂ ಜೇನುತುಪ್ಪವನ್ನು ಬೆರೆಸಿ ಹಚ್ಚಬೇಕು.

ಕ್ರಿಮಿಕೀಟಗಳು,ಕಜ್ಜಿ,ಊತ, ಉರಿ ಬಾಧಿಸುತ್ತಿದ್ದರೆ ಇದರ ಹಾಲನ್ನು ಅದರ ಮೇಲೆ ಲೇಪಿಸಿದರೆ ಉಪಶಮನವಾಗುತ್ತದೆ.ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿಣದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುವುದು.

ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ.ಆ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ.ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನುನೋವು,ಮಂಡಿನೋವು ಇರುವ ಕಡೆ ಶಾಖಕೊಟ್ಟರೆ ಕೆಲವೇ ದಿನದಲ್ಲಿ ನೋವು ಶಮನವಾಗುತ್ತದೆ.

ಎಕ್ಕದ ಬೇರಿನೊಂದಿಗೆ ನಿಂಬೆರಸ ಮಿಶ್ರಣ ಮಾಡಿ ಅರೆದು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.ಚೇಳು ಕಡಿತಕ್ಕೂ ಎಕ್ಕದ ಬೇರನ್ನು ಔಷಧಿಯಾಗಿ ಬಳಸುತ್ತಾರೆ.ಮುಖದಲ್ಲಿ ಬಂಗು ಬಂದಿದ್ದರೆ ಇದರ ರಸ ಲೇಪಿಸಬೇಕು.

ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.ಹಲ್ಲು ನೋವಿಗೂ ಬಿಳಿ ಎಕ್ಕದ ರಸ ಒಳ್ಳೆಯ ಔಷಧ.ಕಫದಿಂದ ಕೂಡಿದ ಕೆಮ್ಮಿದ್ದರೆ,ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು 5 ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.

ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಹುದು.ಮೂತ್ರಕಟ್ಟಿದ್ದಲ್ಲಿ ಎಕ್ಕದ ಎಲೆಗಳನ್ನು ಒಣಗಿಸಿ ನಯವಾದ ಪುಡಿಮಾಡಿಟ್ಟುಕೊಂಡು 10 ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರೆಸಿ ಕುಡಿಸುವುದರಿಂದ ಮೂತ್ರವಿಸರ್ಜನೆ ಸುಗಮವಾಗುತ್ತದೆ. ಮೇಲಿಂದ ಮೇಲೆ ಅಜೀರ್ಣದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿ ಬೆಳಿಗ್ಗೆ ಮತ್ತು ರಾತ್ರಿ ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು.

LEAVE A REPLY

Please enter your comment!
Please enter your name here