ಸಾಮಾನ್ಯವಾಗಿ ನಮ್ಮಊರಿನ ಹೋಟೆಲುಗಳಲ್ಲಿ ಸಾಂಬಾರ್ ಮತ್ತು ಪಲ್ಯ ಮಾಡಲು ಅಗ್ಗದ ತರಕಾರಿಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವ ಕಾರಣ ಹೆಚ್ಚಿನ ದಿನಗಳಲ್ಲಿ ಮೂಲಂಗಿ ಸಾಂಬಾರ್ ಮತ್ತು ಎಲೆಕೋಸು ಪಲ್ಯ ತಯಾರಾಗಿರುತ್ತದೆ.ಯಾಕೆ ಗೊತ್ತಾ…ಓದಿ ಮುಂದೆ ಗೊತ್ತಾಗುತ್ತದೆ…

ಅಗ್ಗವಾದ ಮಾತ್ರಕ್ಕೆ ಇದರ ಆರೋಗ್ಯಕರ ಗುಣಗಳೇನೂ ಕಡಿಮೆಯಲ್ಲ.ಹಸಿಯಾಗಿಯೂ ತಿನ್ನಬಹುದಾದ ಎಲೆಕೋಸಿನಲ್ಲಿ ಹಲವು ಪೋಷಕಾಂಶಗಳಿದ್ದು ಜೀರ್ಣಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ಹೂಕೋಸಿನಲ್ಲಿರುವ ವಿಟಮಿನ್ ಸಿ,ಪೊಟ್ಯಾಶಿಯಂ ಮತ್ತು ವಿಟಮಿನ್ ಕೆ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ದಿಸುತ್ತವೆ.ಇದರಲ್ಲಿ ಉರಿಯೂತ ನಿವಾರಕ ಗುಣವೂ ಇದೆ ಹಾಗೂ ಕ್ಯಾನ್ಸರ್ ಉಂಟುಮಾಡುವ ಕಣಗಳ ವಿರುದ್ಧ ಹೋರಾಡುವ ಗುಣವೂ ಇದೆ.ಅಲ್ಲದೇ ಊದಿಕೊಂಡ ಮತ್ತು ಜರ್ಝರಿತವಾದ ಚರ್ಮಕ್ಕೆ ಉತ್ತಮ ಪೋಷಣೆಯನ್ನೂ ನೀಡುತ್ತದೆ.

ಇನ್ನು ಇದರಲ್ಲಿ ಅಡಗಿರುವ ಹಲವಾರು ವಿಟಮಿನ್ನುಗಳ ಸಹಿತ ಫೈಟೋ ನ್ಯೂಟ್ರಿಯೆಂಟುಗಳೂ,ಆಂಥೋಸಯಾನಿನ್,ಹಾಗೂ ಗ್ಲುಟಮೈನ್ ಎಂಬ ಪೋಷಕಾಂಶಗಳಿವೆ.

ಈ ಪೋಷಕಾಂಶಗಳಲ್ಲಿರುವ ಉರಿಯೂತ ನಿವಾರಕ ಗುಣ ವಿಶೇಷವಾಗಿ ಮೂಳೆಸಂದುಗಳ ನೋವು ಮತ್ತು ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತದೆ.ಎಲೆಕೋಸಿನ ಎಲೆಗಳಲ್ಲಿ ವಿಶೇಷವಾಗಿ ಪಾದಗಳ ಊತವನ್ನು ನಿವಾರಿಸುವ ಗುಣವಿದೆ. ಅಲ್ಲದೇ ವಿಶೇಷವಾಗಿ ಸಂಧಿವಾತವನ್ನು ಕಡಿಮೆಗೊಳಿಸುವ ಗುಣವಿದೆ.

(ಸಂಗ್ರಹ)

LEAVE A REPLY

Please enter your comment!
Please enter your name here