ಕಲ್ಲಂಗಡಿ ಹಣ್ಣು ಯಾವ ರೀತಿಯಾಗಿ ಚರ್ಮಕ್ಕೆ ಉತ್ತಮ ಆರೋಗ್ಯ ನೀಡುತ್ತದೆ ಇಲ್ಲಿದೆ ನೋಡಿ….

ಇತರ ಹಣ್ಣು ತರಕಾರಿಗಳಿಗಿಂತ ಲೈಕೊಪಿನ್ ಹೆಚ್ಚಾಗಿರುವ ಕಲ್ಲಂಗಡಿ ಕೊಬ್ಬು ಮುಕ್ತ ನೈಸರ್ಗಿಕ ಕೊಡುಗೆಯಾಗಿದೆ.ಕೊಲೆಸ್ಟ್ರಾಲ್ ಅಂಶವಿಲ್ಲದ ದೇಹಕ್ಕೆ ಶಕ್ತಿಯನ್ನು ಒದಗಿಸುವ ವಿಟಮಿನ್ ಭರಿತ ಹಣ್ಣಾದ ಕಲ್ಲಂಗಡಿ ಬೇಸಿಗೆಯ ಬೇಗೆಯನ್ನು ಕಳೆಯುವಲ್ಲಿ ಸಹಕಾರಿ.

ಇದನ್ನು ಜ್ಯೂಸ್ ಅಥವಾ ಹಾಗೆ ಕೂಡ ಸೇವಿಸಬಹುದು.ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧ ಹೋರಾಡುವ ಗುಣವನ್ನು ಹೇರಳವಾಗಿಸಿಕೊಂಡ ಸಮೃದ್ಧ ಹಣ್ಣು.

ಕಲ್ಲಂಗಡಿ ಹಣ್ಣಿನಲ್ಲಿ ವಿಟಾಮಿನ್‌ ಎ ಹೆಚ್ಚಿನ ಪ್ರಮಾಣದಲ್ಲಿದೆ.ಇದು ಚರ್ಮದಲ್ಲಿನ ಧೂಳು, ಮೊದಲಾದ ಅಂಶಗಳನ್ನು ನಿವಾರಿಸಿ. ಚರ್ಮ ಹೊಳೆಯುವಂತೆ ಮಾಡುತ್ತದೆ.ಈ ಹಣ್ಣು ಆ್ಯಂಟಿಆಕ್ಸಿಡೆಂಟ್‌ ಮೂಲವಾಗಿದೆ.ಇದು ಚರ್ಮದಲ್ಲಿ ಸುಕ್ಕು ಉಂಟಾಗುವುದನ್ನು ನಿವಾರಣೆ ಮಾಡುತ್ತದೆ.ಅಲ್ಲದೇ ವಯಸ್ಸಾಗುವಿಕೆಯ ಲಕ್ಷಣವನ್ನು ತಡೆಯುತ್ತದೆ.

ಪಿಂಪಲ್‌ ಬಾರದಂತೆ ತಡೆಯಲು ಸಹ ಇದೊಂದು ಅತ್ಯಂತ ಉತ್ತಮ ಔಷಧಿಯಂತೆ ಕೆಲಸ ಮಾಡುತ್ತದೆ.

ಯಾವ ರೀತಿಯಾಗಿ ಬಳಕೆ ಮಾಡಬಹುದು?

ಒಂದು ಚಮಚ ಕಲ್ಲಂಗಡಿ ಹಣ್ಣು ಮತ್ತು ಒಂದು ಚಮಚ ಮೊಸರು ತೆಗೆದುಕೊಳ್ಳಿ. ಅದನ್ನು ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಅದನ್ನು ಮುಖ ಹಾಗೂ ಕುತ್ತಿಗೆಗೆ ಸುತ್ತಲು ಹಚ್ಚು. ಅದು ಒಣಗಿದ ನಂತರ ತಂಪದಾ ನೀರಿನಿಂದ ತೊಳೆಯಿರಿ.

ಒಂದು ಬೌಲ್‌ನಲ್ಲಿ ಕಲ್ಲಂಗಡಿ ಹಣ್ಣು, ಬಾಳೆಹಣ್ಣು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಇದನ್ನು ಮುಖ ಹಾಗೂ ಕುತ್ತಿಗೆಯ ಮೇಲೆ ಹಾಕಿ ಅರ್ಧ ಗಂಟೆಯ ನಂತರ ಉಗುರು ಬಿಸಿ ನೀರಿನಿಂದ ತೊಳೆಯಿರಿ.

LEAVE A REPLY

Please enter your comment!
Please enter your name here