ಕಿಡ್ನಿಯಲ್ಲಿ ಕಲ್ಲುಂಟಾಗಲು ಮುಖ್ಯ ಕಾರಣ ಮೂತ್ರದಲ್ಲಿರುವ ಖನಿಜಾಂಶಗಳು ಮತ್ತು ನೀರಿನಾಂಶ ಕಡಿಮೆಯಾಗಿ ದೇಹದಲ್ಲಿ ಕಾಣಿಸುವ ಶುಶ್ಕತೆ (ಡೀಹೈಡ್ರೇಶನ್). ಒಂದು ಲೋಟ ನೀರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿದಾಗ ಕರಗುವುದು ಸಹಜ. ಸಕ್ಕರೆ/ಅಥವಾ ಉಪ್ಪನ್ನು ಹೆಚ್ಚಿಸುತ್ತಾ ಹೋದಲ್ಲಿ (ನೀರು ಕರಗಿಸಲಾರದಷ್ಟು) ಅದು ತಳದಲ್ಲಿ ಶೇಖರಣೆ ಗೊಳ್ಳುವುದನ್ನು ನೀವು ನೋಡಿರಬಹುದು.

ಇಲ್ಲೂ ಅದೇ ರೀತಿ. ಮೂತ್ರದಲ್ಲಿನ ನೀರಿನಾಂಶ ಕಡಿಮೆಯಾಗಿ ಖನಿಜಾಂಶ ಹೆಚ್ಚಿರುವಾಗ ಅವು ಶೇಖರಣೆಗೊಂಡು ಹರಳಿನ ರೂಪ ಪಡೆದು ಕಲ್ಲಾಗುತ್ತವೆ. ಬೇಸಿಗೆಯಲ್ಲಿ ಬೆವರುವುದು ಹೆಚ್ಚುವುದರಿಂದ ದೇಹದಲ್ಲಿ ನೀರಿನಾಂಶದ ಕೊರತೆ ಯಾಗುತ್ತದೆ. ಮತ್ತು ಮೂತ್ರದಲ್ಲಿ ಖನಿಜಾಂಶ ಹೆಚ್ಚಿ ಈ ಕಾಲದಲ್ಲಿ ಈ ರೋಗದ ಸಂಭವ ಹೆಚ್ಚು.

ಈ ಕೆಳಗಿನ ವಿಧಾನಗಳು ಕಿಡ್ನಿಯಲ್ಲಿರುವ ಕಲ್ಲು ತೆಗೆಯಲು ಮಾತ್ರವಲ್ಲ,ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡೆಯಲು ಸಹಕಾರಿಯಾಗಿದೆ.

1. ನೀರು: ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ದೇಹದಲ್ಲಿ ನೀರಿನಂಶ ಕಡಿಮೆಯಾದರೆ ನಿಶ್ಯಕ್ತಿ,ಕಿಡ್ನಿಯಲ್ಲಿ ಕಲ್ಲು,ತ್ವಚೆ ಸೌಂದರ್ಯ ಹಾಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ.ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡರೆ ದಿನಕ್ಕೆ 5-6 ಲೀಟರ್ ನೀರು ಕುಡಿದರೆ ಕಲ್ಲು ಮೂತ್ರದಲ್ಲಿ ಹೊರಹೋಗುವುದು.

2. ನೀರಿನಲ್ಲಿ ನೆನೆ ಹಾಕಿದ ಮೆಂತೆ: ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಷ್ಮಲಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ.

3. ತಾಟಿನುಂಗು: ಇದನ್ನು ಪಾಮ್ ಫ್ರೂಟ್ ಅಂತ ಕೂಡ ಕರೆಯುತ್ತಾರೆ.ಇದರಿಂದ ತಾಲ್ ಮಿಶ್ರಿ ಎಂಬ ಸಕ್ಕರೆ ತಯಾರಿಸಲಾಗುವುದು.ಇದನ್ನು ಒಂದು ರಾತ್ರಿ ನೀರಿನಲ್ಲಿ ಕಲೆಸಿ ಬೆಳಗ್ಗೆ ಎದ್ದು ಕುಡಿಯುವುದು ಒಳ್ಳೆಯದು.ಇದು ಸಿಗುವುದು ಸ್ವಲ್ಪ ಕಷ್ಟ.ಆದರೆ ಇದು ಕಿಡ್ನಿಯಲ್ಲಿರುವ ಕಲ್ಲು ನಿವಾರಣೆಗೆ ತುಂಬಾ ಸಹಕಾರಿಯಾಗಿದೆ. ಇಲ್ಲದಿದ್ದರೆ ತಾಟಿನುಂಗು ದಿನಾ ತಿನ್ನುವುದು ಕೂಡ ಒಳ್ಳೆಯದು.

4. ಬಾಳೆ ದಿಂಡು: ಬಾಳೆ ದಿಂಡಿನ ಒಳಭಾಗವನ್ನು ಪಲ್ಯ ಮಾಡಿ ತಿನ್ನಬಹುದು.ಇದು ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ.

5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದು ಕೂಡ ತುಂಬಾ ಒಳ್ಳೆಯದು.

6. ತುಳಸಿ: ನಮ್ಮ ಮನೆಯಂಗಳದ ಸಸ್ಯ ಔಷಧೀಯ ಗುಣಗಳಿರುವ ತುಳಸಿಯಾಗಿದೆ, ನಿಮಗೆ ತಿಳಿದಿದೆಯೇ ಕಿಡ್ನಿ ಸ್ಟೋನ್‌ಗೆ ನೈಸರ್ಗಿಕ ಪರಿಹಾರ ಈ ತುಳಸಿಯಿಂದ ದೊರೆಯುತ್ತದೆ.ತುಳಸಿಯು ನಮ್ಮ ಕಿಡ್ನಿಗಳನ್ನು ಬಲಪಡಿಸುತ್ತದೆ.ತುಳಸಿ ಎಲೆಗಳಿಗೆ ಜೇನನ್ನು ಸೇರಿಸಿ ಚಹಾ ಅಥವಾ ಜ್ಯೂಸ್ ಮಾಡಿಕೊಳ್ಳಿ.ದಿನಂಪ್ರತಿ ಇದರ ಚಹಾ ಅಥವಾ ಜ್ಯೂಸ್ ಮಾಡಿ ಕುಡಿಯುವುದು ಕಿಡ್ನಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

LEAVE A REPLY

Please enter your comment!
Please enter your name here