ದೇಹದ ಹೊರಗಿನ ಅಂಗಾಂಗಗಳನ್ನು ನೋಡಿಕೊಳ್ಳಲು ಸಮಯವಿಲ್ಲದೆ ಇರುವಂತಹ ಕಾಲದಲ್ಲಿ ದೇಹದ ಒಳಗಿನ ಅಂಗಾಂಗಗಳ ಆರೈಕೆ ಮಾಡುವುದು ಹೇಗೆ ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುವುದು. ಆದರೆ ನಮ್ಮ ದೇಹದ ಪ್ರಮುಖ ಅಂಗವೆಂದೇ ಪರಿಗಣಿಸಲ್ಪಟ್ಟಿರುವ ಕಿಡ್ನಿಯ ಆರೋಗ್ಯವನ್ನು ನಾವು ತಿನ್ನುವಂತಹ ಆಹಾರದಿಂದ ಕಾಪಾಡಬಹುದು. ಇದಕ್ಕಾಗಿ ನಾವು ತಿನ್ನುವ ಆಹಾರವು ಅತೀ ಮುಖ್ಯವಾಗಿದೆ.

1. ಹೂಕೋಸನ್ನು:

ಕಿಡ್ನಿಯ ಸರಿಪಡಿಸುವಿಕೆ ಮತ್ತು ಪೋಷಣೆ ನೀಡಲು ಪ್ರಮುಖವಾಗಿ ಬಳಸಲಾಗುತ್ತದೆ. ಇದರಲ್ಲಿ ಇರುವಂತಹ ಪೈಥೋಕೆಮಿಕಲ್ ನಿಂದಾಗಿ ಇದು ಕಿಡ್ನಿಯ ಕಾರ್ಯವನ್ನು ಸುಧಾರಿಸುವುದು. ಇದರಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ವಿಟಮಿನ್ ಕೆ, ನಾರಿನಾಂಶ ಮತ್ತು ಫಾಲಿಕ್ ಆಮ್ಲವಿದೆ.

ಬೆರ್ರಿಗಳು:

ಬೆರ್ರಿಗಳಲ್ಲಿ ಮೆಗ್ನಿಶಿಯಂ, ವಿಟಮಿನ್ ಸಿ, ನಾರಿನಾಂಶ ಮತ್ತು ಫಾಲಟೆ ಸಮೃದ್ಧವಾಗಿದೆ. ಸ್ಟ್ಟಾಬೆರ್ರಿ, ಕ್ರಾನ್ ಬೆರ್ರಿ, ರಸ್ಬೇರಿ ಮತ್ತು ನೇರಳೆಹಣ್ಣುಗಳನ್ನು ತಿಂದರೆ ಕಿಡ್ನಿಗಳಿಗೆ ಒಳ್ಳೆಯದು. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಉರಿಯೂತ ಕಡಿಮೆ ಮಾಡಿ ಮೂತ್ರಕೋಶ ಸರಿಯಾಗಿ ಕೆಲಸ ಮಾಡಲು ನೆರವಾಗುವುದು.

ಬೆಳ್ಳುಳ್ಳಿ:

ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಹೆಪ್ಪುಗಟ್ಟುವಿಕೆ ವಿರೋಧಿ ಗುಣಗಳು ಇವೆ. ಇದು ಕಿಡ್ನಿ ಕಾಯಿಲೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದು. ಭಾರದ ಖನಿಜಗಳ ಹಾನಿಕಾರಕ ಪರಿಣಾಮವಾಗದಂತೆ ಕಿಡ್ನಿಯನ್ನು ಬೆಳ್ಳುಳ್ಳಿಯು ರಕ್ಷಿಸುವುದು. ತಾಜಾ, ಬೇಯಿಸಿದ ಅಥವಾ ಬೆಳ್ಳುಳ್ಳಿ ಹುಡಿಯನ್ನು ನಿಮ್ಮ ಆಹಾರದಲ್ಲಿ ಬಳಸಬಹುದು.

ಆಲಿವ್ ತೈಲ:

ಹೃದಯಕ್ಕೆ ಆಲಿವ್ ತೈಲವು ಎಷ್ಟು ಒಳ್ಳೆಯದು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದು ಕಿಡ್ನಿಗಳಿಗೆ ಉತ್ತಮವೆಂದು ನಿಮಗೆ ತಿಳಿದಿದೆಯಾ? ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಮತ್ತು ಕೊಬ್ಬಿನಾಮ್ಲವು ಆಕ್ಸಿಡೇಷನ್ ಕಡಿಮೆ ಮಾಡಿ ಕಿಡ್ನಿ ಆರೋಗ್ಯ ಸುಧಾರಿಸುವುದು. ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲ ಬಳಸಿ

ಕೆಂಪು ದೊಣ್ಣೆ ಮೆಣಸು:

ಕೆಂಪು ದೊಣ್ಣೆ ಮೆಣಸಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಸಮೃದ್ಧವಾಗಿದೆ ಮತ್ತು ಪೊಟಾಶಿಯಂ ಕಡಿಮೆಯಿದೆ. ಇದರಲ್ಲಿ ಫಾಲಿಕ್ ಆಮ್ಲ ಮತ್ತು ನಾರಿನಾಂಶವು ಸಮೃದ್ಧವಾಗಿದೆ. ಇದು ಕಿಡ್ನಿಯ ಕಾರ್ಯಚಟುವಟಿಕೆಗೆ ನೆರವಾಗುವುದು. ಕೆಂಪು ದೊಣ್ಣೆ ಮೆಣಸನ್ನು ಅಡುಗೆಯನ್ನು ಬಳಸಿ ಕಿಡ್ನಿ ಸಮಸ್ಯೆ ನಿವಾರಿಸಿ.

ಸೇಬು:

ಸೇಬು ಮಲಬದ್ಧತೆ ನಿವಾರಿಸುವುದು, ಹೃದಯ ಕಾಯಿಲೆಯಿಂದ ಕಾಪಾಡುವುದು ಮತ್ತು ಕಣ್ಣಿನ ದೃಷ್ಟಿ ಸುಧಾರಿಸುವುದು. ಸೇಬಿನಿಂದ ಆರೋಗ್ಯಕರ ಕಿಡ್ನಿ ಪಡೆಯಬಹುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಮತ್ತು ಮೂತ್ರವು ಶುದ್ಧವಾಗಿರಲು ಸೇಬು ನೆರವಾಗುವುದು.

ಕೆಂಪು ದ್ರಾಕ್ಷಿ:

ಕೆಂಪು ದ್ರಾಕ್ಷಿಯು ಆಮ್ಲೀಯವಾಗಿದೆ. ಇದು ಕಿಡ್ನಿ ಮತ್ತು ಮೂತ್ರಕೋಶದಲ್ಲಿ ಕಂಡು ಬರುವ ಕೀಟಾಣು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ಸ್ನಾಯುಗಳ ಆರಾಮವಾಗಿರಲು ಮತ್ತು ರಕ್ತ ಸಂಚಾರ ಸರಿಯಾಗಿರಲು ಇದು ನೆರವಾಗುವುದು. ಇದರಲ್ಲಿ ಇರುವಂತಹ ಅದ್ಭುತ ಪ್ರಮಾಣದ ಫ್ಲಾವನಾಯ್ಡ್ ಕ್ಯಾನ್ಸರ್ ಮತ್ತು ಇತರ ವಿಧದ ಉರಿಯೂತ ತಡೆಯುವುದು.

ಲಿಂಬೆರಸ:

ಲಿಂಬೆರಸದಲ್ಲಿ ಇರುವಂತಹ ಆಮ್ಲೀಯ ಗುಣವು ಕಿಡ್ನಿಯಲ್ಲಿರುವ ಕಲ್ಲುಗಳನ್ನು ವಿಘಟಿಸುವುದು. ಇದರಿಂದ ಕಿಡ್ನಿಯು ಆರೋಗ್ಯವಾಗಿರುವುದು. ಲಿಂಬೆರಸದಲ್ಲಿ ಇರುವಂತಹ ಸಿಟ್ರಸ್ ಕಿಡ್ನಿಯಲ್ಲಿ ಇರುವಂತಹ ಕಲ್ಲುಗಳು ಒಂದಕ್ಕೊಂದು ಜೋಡಣೆಯಾಗದಂತೆ ನೋಡಿಕೊಳ್ಳುವುದು

ಹೂಕೋಸು:

ಹೂಕೋಸಿನಲ್ಲಿ ವಿಟಮಿನ್ ಸಿ, ಫಾಲಟೆ ಮತ್ತು ನಾರಿನಾಂಶವಿದೆ. ಹೂಕೋಸಿನಲ್ಲಿ ಇರುವಂತಹ ಕೆಲವು ಪ್ರಮುಖ ಅಂಶಗಳು ದೇಹದಲ್ಲಿ ಇರುವಂತಹ ವಿಷವನ್ನು ತಟಸ್ಥಗೊಳಿಸಲು ಯಕೃತ್‌ಗೆ ನೆರವಾಗುವುದು ಮತ್ತು ಜೀವಕೋಶ ಪೊರೆಗಳನ್ನು ಸಂರಕ್ಷಿಸುವುದು. ಇದನ್ನು ಬೇಯಿಸಿಕೊಂಡು ಆಹಾರದಲ್ಲಿ ಬಳಸಿ.

ಈರುಳ್ಳಿ:

ಈರುಳ್ಳಿಯಲ್ಲಿ ಇರುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳು ಕಿಡ್ನಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಶುದ್ಧೀಕರಿಸುವುದು. ಇದರಲ್ಲಿ ಪೊಟಾಶಿಯಂ, ಚಾರೊಮಿಯಮ್ ಇತ್ಯಾದಿ ಕಡಿಮೆ ಇದೆ. ಇದರಿಂದ ದೇಹವು ಕೊಬ್ಬು, ಪ್ರೋಟೀನ್ ಮತ್ತು ಕಾರ್ಬ್ರೋಹೈಡ್ರೇಟ್ಸ್ ಅನ್ನು ಚಯಪಚಾಯಗೊಳಿಸಬಹುದು.

ಕೊತ್ತಂಬರಿ ಸೊಪ್ಪು:

ಕೊತ್ತಂಬರಿ ಸೊಪ್ಪು ಒಂದು ಹಿಡಿ ಮೂಲಂಗಿ ಸೊಪ್ಪು ಅಥವ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ ಅದನ್ನು ಕುದಿಯುವ ನೀರಲ್ಲಿ ಹಾಕಿ 10 ನಿಮಿಷ ಬೇಯಿಸಿಬೇಕು. ನಂತರ ಸೋಸಿಕೊಂಡು ತಂಪಾದ ಸ್ಥಳ ಅಥವಾ ಪ್ರಿಜ್ ನಲ್ಲಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ದಿನವು ಒಂದು ಗ್ಲಾಸ್ ಈ ನೀರನ್ನು ಕುಡಿಯುತ್ತಿರಿ ಕಿಡ್ನಿ ಸ್ವಚ್ಛವಾಗುತ್ತದೆ.

ಕೃಪೆ: ಬೋಲ್ಡ್ ಸ್ಕೈ.ಕಾಮ್

LEAVE A REPLY

Please enter your comment!
Please enter your name here