ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದು ಸ್ನಾನವಾದ ನಂತರ ಬಲಗೈಯ ಅನಾಮಿಕಾದಿಂದ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು.ಕುಂಕುಮವು ಹಣೆಗೆ ಸರಿಯಾಗಿ ಹಿಡಿದುಕೊಳ್ಳಲು ಮೇಣವನ್ನು ಉಪಯೋಗಿಸಬೇಕು.ಹಣೆಗೆ ಮೊದಲು ಮೇಣವನ್ನು ಹಚ್ಚಿ ಅದರ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು.

ಅನಾಮಿಕಾದಿಂದ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರ ಹಿಂದಿನ ಶಾಸ್ತ್ರ ಅನಾಮಿಕಾದಿಂದ ಪ್ರಕ್ಷೇಪಿತವಾಗುವ ಆಪತತ್ತ್ವದ ಲಹರಿಗಳ ಸಹಾಯದಿಂದ ಕುಂಕುಮದಲ್ಲಿನ ಶಕ್ತಿತತ್ತ್ವವು ಕಡಿಮೆ ಕಾಲಾವಧಿಯಲ್ಲಿ ಜಾಗೃತವಾಗಿ ಆಜ್ಞಾಚಕ್ರದಲ್ಲಿ ಸಂಗ್ರಹವಾಗುವುದರಿಂದ ಕುಂಕುಮದಲ್ಲಿನ ರಜೋಗುಣದ ಕಾರ್ಯಕ್ಕೆ ಶಕ್ತಿಯ ಬಲವು ಪ್ರಾಪ್ತವಾಗುತ್ತದೆ.ಓರ್ವ ಸ್ತ್ರೀಯು ಇತರ ಸ್ತ್ರೀಯರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು ಉಪಯೋಗಿಸುವುದರ ಹಿಂದಿನ ಶಾಸ್ತ್ರ.

ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಅವರಲ್ಲಿರುವ ಕೆಟ್ಟಶಕ್ತಿಗಳು ಬೆರಳಿನ ಮೂಲಕ ನಮ್ಮ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.

ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದುಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.

ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ

ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ.

ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮ ವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.

ಸ್ತ್ರೀಯರು ಗೋಲಾಕಾರ ಕುಂಕುಮವನ್ನು ಮತ್ತು ಪುರುಷರು ಕುಂಕುಮದ ಉದ್ದ ತಿಲಕವನ್ನು ಏಕೆ ಹಚ್ಚಿಕೊಳ್ಳಬೇಕು? ಸ್ತ್ರೀಯು ಶಕ್ತಿಯ ಪ್ರತೀಕವಾಗಿದ್ದಾಳೆ. ಸ್ತ್ರೀಯರು ತಮ್ಮ ಆಜ್ಞಾಚಕ್ರದ ಮೇಲೆ ಕೆಂಪು ಗೋಲಾಕಾರ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ. ಸ್ತ್ರೀಯರು ಹಣೆಯ ಮೇಲೆ ಹಚ್ಚಿಕೊಂಡಿರುವ ಕುಂಕುಮದಿಂದ ತಮ್ಮಲ್ಲಿರುವ ಜಗನ್ಮಾತೆ ಶ್ರೀ ದುರ್ಗಾದೇವಿಯ ತತ್ತ್ವದ ಪೂಜೆಯನ್ನು ಮಾಡುತ್ತಾರೆ.

ಸ್ತ್ರೀಯರು ತಮ್ಮ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದೆಂದರೆ ತಮ್ಮಲ್ಲಿರುವ ಶಕ್ತಿತತ್ತ್ವದ ಪೂಜೆಯನ್ನು ಮಾಡುವುದಾಗಿದೆ. ಕೆಂಪು ಗೋಲಾಕಾರ ಕುಂಕುಮವು ಶ್ರೀದುರ್ಗಾದೇವಿಯ ತತ್ತ್ವದ ಅಪ್ರಕಟ ಶಕ್ತಿಯ ಪ್ರತೀಕವಾಗಿದೆ.ಗೋಲಾಕಾರ ಕುಂಕುಮದಿಂದ ಶಕ್ತಿಯು ಅಲ್ಲಿಯೇ ತಿರುಗುತ್ತಿರುತ್ತದೆ ಮತ್ತು ಆವಶ್ಯಕತೆಗನುಸಾರ ಕೇಂದ್ರಬಿಂದುವಿನಿಂದ ಪ್ರಕಟವಾಗುತ್ತದೆ.

ಪುರುಷನು ಶಿವನ ಪ್ರತೀಕವಾಗಿದ್ದಾನೆ.ಪುರುಷರು ತಮ್ಮ ಆಜ್ಞಾಚಕ್ರದ ಮೇಲೆ ಉದ್ದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ. ಪುರುಷರು ಹಣೆಯ ಮೇಲೆ ಹಚ್ಚಿಕೊಂಡಿರುವ ಉದ್ದ ತಿಲಕದಿಂದ ತಮ್ಮಲ್ಲಿರುವ ಶಿವತತ್ತ್ವದ ಪೂಜೆಯನ್ನು ಮಾಡುತ್ತಾರೆ.

ಕೆಂಪು ಕುಂಕುಮದ ತಿಲಕವು ಶಿವತತ್ತ್ವದ ಪ್ರಕಟಶಕ್ತಿಯ ಪ್ರತೀಕವಾಗಿದ್ದು ಉದ್ದ ತಿಲಕದ ಮೇಲಿನ ತುದಿಯಿಂದ ಶಿವನ ಪ್ರಕಟಶಕ್ತಿಯು ಹೊರಬೀಳುತ್ತದೆ.ಕುಂಕುಮದ ವೈಶಿಷ್ಟ್ಯ:ಕುಂಕುಮವನ್ನು ರಾಸಾಯನಿಕಗಳಿಂದ ತಯಾರಿಸದೇ ಶುದ್ಧ ಅರಿಶಿನದಿಂದ ತಯಾರಿಸಿರುವುದರಿಂದ ಅದು ಸಾತ್ತ್ವಿಕವಾಗಿದೆ. ಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮವನ್ನು ಹಚ್ಚಿಕೊಳ್ಳುವುದು ಏಕೆ ಹೆಚ್ಚು ಯೋಗ್ಯವಾಗಿದೆ ?

ಕುಂಕುಮವು ಪಾವಿತ್ರ್ಯದ ಮತ್ತು ಮಾಂಗಲ್ಯದ ಪ್ರತೀಕವಾಗಿದೆ. ಕೃತಕ ವಸ್ತುಗಳಿಗಿಂತ ನೈಸರ್ಗಿಕ ವಸ್ತುಗಳಲ್ಲಿ ದೇವತೆಗಳ ಚೈತನ್ಯ ಲಹರಿಗಳನ್ನು ಸೆಳೆದುಕೊಳ್ಳುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುತ್ತದೆ.ಕುಂಕುಮವನ್ನು ಅರಿಶಿನದಿಂದ ತಯಾರಿಸಿರುವುದರಿಂದ ಟಿಕಲಿಗಿಂತ ಕುಂಕುಮವು ಹೆಚ್ಚು ನೈಸರ್ಗಿಕವಾಗಿದೆ.

ಕುಂಕುಮದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಪರಿಮಳದಲ್ಲಿ ಬ್ರಹ್ಮಾಂಡದಲ್ಲಿನ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಿಸುವ ಕ್ಷಮತೆಯಿರು ವುದರಿಂದ ಕುಂಕುಮವು ತಾರಕ-ಮಾರಕ ಚೈತನ್ಯಲಹರಿಗಳನ್ನು ಪ್ರಕ್ಷೇಪಿಸಿ ಜೀವವನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ.

ಆದುದರಿಂದ ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮವನ್ನು ಹಚ್ಚಿಕೊಳ್ಳುವುದು ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುವ ದೃಷ್ಟಿಯಿಂದ ಹೆಚ್ಚು ಫಲದಾಯಕವಾಗಿದೆ.ಟಿಕಲಿಯ ಹಿಂಬದಿಯಲ್ಲಿ ಉಪಯೋಗಿಸಿದ ಅಂಟು ತಮೋಗುಣಿ ಯಾಗಿರುವುದರಿಂದ ಅದು ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳುತ್ತದೆ.

ಈ ಲಹರಿಗಳು ಜೀವದ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳುವುದರಿಂದ ಶರೀರದಲ್ಲಿನ ರಜ-ತಮ ಕಣಗಳ ಪ್ರಾಬಲ್ಯವು ಹೆಚ್ಚಾಗುತ್ತದೆ.ಸತತವಾಗಿ ಟಿಕಲಿಯನ್ನು ಹಚ್ಚಿಕೊಳ್ಳುವುದರಿಂದ ಆ ಸ್ಥಳದಲ್ಲಿ ಕೆಟ್ಟಶಕ್ತಿಗಳ ಸ್ಥಾನವು ನಿರ್ಮಾಣವಾಗುವ ಸಾಧ್ಯತೆಯಿರುತ್ತದೆ.

(ಸಂಗ್ರಹ)

LEAVE A REPLY

Please enter your comment!
Please enter your name here