ಏನಪ್ಪಾ ಇದು ಕುಸುಬಿ ಅಂದ್ರೆ ಅಂತ ಯೋಚನೆ ಮಾಡ್ತಾ ಇದ್ದೀರಾ? ಓದಿ ಇದರ ಬಗ್ಗೆ…

ಈ ಸಸ್ಯದ ಬೀಜದಿಂದ ತೈಲ ತಯಾರು ಮಾಡಿ ಆಹಾರದಲ್ಲಿ ಉಪಯೊಗ ಮಾಡುತ್ತಾರೆ.ಊದಿದ ಮತ್ತು ನೋವು ತುಂಬಿದ ಭಾಗಗಳಿಗೆ ಈ ತೈಲವನ್ನು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.

ಪಾರ್ಶ್ವವಾಯುವಿನಿಂದ ಪೀಡಿತರಾದವರಿಗೆ ಮಾಂಸವೇಶಿಗಳ ಉತ್ತೇಜನ ಮಾಡಲು ಇದರ ಎಣ್ಣೆಯ ಅಭ್ಯಂಗ ಮಾಡಿಸುತ್ತಾರೆ.

ಕುದಿಯುತ್ತಿರುವ ನೀರಿಗೆ ಬೀಜ ಹಾಕಿ,ರಾತ್ರಿ ಇಟ್ಟು ಬೆಳಿಗ್ಗೆ ಶೋಧಿಸಿ ಉಪಯೋಗ ಮಾಡಿದರೆ ಮಲಬಧ್ಹತೆ ನಿವಾರಣೆಯಾಗುತ್ತದೆ.

ಸಸ್ಯವನ್ನು ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸಿ,ತೆಣಿಸಿ ಶರೀರದಲ್ಲಾಗುವ ನವೆಗೆ ಉಪಯೋಗಿಸಬಹುದು.

ಕುಸುಬಿ ಎಣ್ಣೆ

ಕುಸುಬಿ ಎಣ್ಣೆ ಕಡಿಮೆ ಬಣ್ಣ ಹೊಂದಿರುತ್ತದೆ,ಕಡಿಮೆ ವಾಸನೆ ಇರುತ್ತದೆ. ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.ರಿಫೈಂಡು ಮಾಡಿದ ಎಣ್ಣೆ ಪಾರದರ್ಶಕವಾಗಿರುತ್ತದೆ.

ಕುಸುಬಿ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು ಹೆಚ್ಚಾಗಿರುತ್ತವೆ.ಕುಸುಬಿ ಎಣ್ಣೆಯಲ್ಲಿ ಲಿನೊಲಿಕ್ ಕೊಬ್ಬಿನ ಆಮ್ಲ ಮತ್ತು ಒಲಿಕ್ ಕೊಬ್ಬಿನ ಆಮ್ಲ ಅಧಿಕ ಶೇಕಡದಲ್ಲಿರುತ್ತದೆ.

ಉಪಯೋಗಗಳು

ಕುಸುಬಿ ಎಣ್ಣೆ ಶ್ರೇಷ್ಠವಾದ ಅಡುಗೆ ಎಣ್ಣೆ

ಕುಸುಬಿಎಣ್ಣೆಯನ್ನು ಸಾಲಡ್(salads)ಮತ್ತು ಮಾರ್ಗರೈನ್(Margarine)ಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.

ಕುಸುಬಿ ಹೂಗಳಿಂದ ಹರ್ಬಲ್(herbal)ಟೀ ತಯಾರಿಸುತ್ತಾರೆ.

LEAVE A REPLY

Please enter your comment!
Please enter your name here