ಕೂದಲು ಉದುರುವುದು,ತಲೆಹೊಟ್ಟು ನಿವಾರಣೆಯಾಗಬೇಕೇ? ಹೀಗೆ ಮಾಡಿ ನೋಡಿ…

0
892

ಹಲವು ಸೌಂದರ್ಯ ವರ್ಧಕಗಳ ಆಗರವಾಗಿರುವ ಹಾಗೂ ಸುಲಭವಾಗಿ ಮನೆಯಲ್ಲಿಯೇ ಕೈಗೆಟುಕುವ ಮೊಸರು,ಕೂದಲಿನ ಆರೈಕೆಯಲ್ಲಿ ತನ್ನ ಕೈ ಚಳಕವನ್ನು ತೋರಿಸುವ ಮೂಲಕ ನೈಸರ್ಗಿಕ ಕಂಡೀಶನರ್ ಆಗಿ ಕೆಲಸ ಮಾಡುತ್ತದೆ ಎಂಬುದು ಎಷ್ಟೋ ಹೆಣ್ಣು ಮಕ್ಕಳಿಗೆ ಗೊತ್ತಿರದ ವಿಷಯ.

ಮೊಸರನ್ನು ವಿವಿಧ ರೀತಿಯಲ್ಲಿ ಹೇರ್ ಪ್ಯಾಕ್ ಮಾಡಿಕೊಳ್ಳುವ ಮೂಲಕ ಯಾವುದೇ ರೀತಿಯ ಖರ್ಚು ವೆಚ್ಚವಿಲ್ಲದೇ ಹಾಗೂ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೇ,ನಿಮ್ಮ ಕೂದಲಿನ ಅಂದವನ್ನು ಹೆಚ್ಚಿಸಿಕೊಳ್ಳಲು ಇಲ್ಲಿವೆ ನೋಡಿ ಕೆಲವೊಂದು ಟಿಪ್ಸ್.

1) ಮೊಸರು ಮತ್ತು ನಿಂಬೆರಸ :

ಮೊಸರು ಮತ್ತು ನಿಂಬೆರಸದಲ್ಲಿ ಲ್ಯಾಕ್ಟಿಕ್ ಮತ್ತು ಸಿಟ್ರಿಕ್ ಆಮ್ಲಗಳು ಅಧಿಕವಾಗಿರುತ್ತವೆ.ಹಾಗಾಗಿ ಅರ್ಧಬಟ್ಟಲು ಮೊಸರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕಲಸಿ 5 ನಿಮಿಷ ಬಿಟ್ಟು ತಲೆ ಮತ್ತು ಕೂದಲಿನ ಬುಡಕ್ಕೆ ಲೇಪಿಸಿ 10 ರಿಂದ 15 ನಿಮಿಷಗಳ ತರುವಾಯ ಶ್ಯಾಂಪೂವಿನಿಂದ ತೊಳೆಯುತ್ತಾ ಬಂದರೆ ನಿಮ್ಮ ತಲೆಹೊಟ್ಟಿನ ನಿವಾರಣೆಯಾಗುವುದಲ್ಲದೇ, ಬುಡದಲ್ಲಿ ಉರಿಯೂತ ಕಂಡುಬರುವುದನ್ನು ತಡೆಗಟ್ಟುತ್ತದೆ.

ಸಾಮಾನ್ಯವಾಗಿ ತಲೆಯಲ್ಲಿ ಬರುವ ಹೊಟ್ಟಿನ ಪ್ರಮುಖ ಮೂಲವೇ ಉರಿಯೂತ. ಆಗಾಗಿ ಮೊಸರು ಮತ್ತು ನಿಂಬೆಯನ್ನು ಬಳಸಿ ತಲೆಗೆ ಲೇಪಿಸಿದರೆ ಇದು ನೈಸರ್ಗಿಕ ಕಂಡೀಶನರ್ ಆಗಿ ವರ್ತಿಸುವುದಲ್ಲದೇ, ಕೂದಲನ್ನು ಆರೋಗ್ಯವಾಗಿರಿಸುತ್ತದೆ.

2) ಮೊಸರು, ಬಾದಾಮಿ ಎಣ್ಣೆ  ಮತ್ತು ಮೊಟ್ಟೆ  :

ಮೊಸರು, ಬಾದಾಮಿ ಹಾಗೂ ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌ಗಳು ಹಾಗೂ ಸಾಕಷ್ಟು ಮಿನರಲ್ಸ್‌ಗಳು ಇರುತ್ತವೆ.ಒಂದು ಬಟ್ಟಲು ಮೊಸರಿಗೆ ಎರಡು ಚಮಚದಷ್ಟು ಬಾದಾಮಿ ಎಣ್ಣೆ ಹಾಗೂ ಒಂದು ಮೊಟ್ಟೆಯೊಳಗಿರುವ ಬಿಳಿಯ ಲೋಳೆಯನ್ನು ಹಾಕಿ ಚೆನ್ನಾಗಿ ಕಲಸಿ

ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಂಡು ಸುಮಾರು 30 ನಿಮಿಷಗಳ ನಂತರ ಉತ್ತಮ ಗುಣಮಟ್ಟದ ಶ್ಯಾಂಪೂವಿನಿಂದ ಶುಚಿಗೊಳಿಸಿ. ಇದು ನಿಮ್ಮ ತಲೆ ಕೂದಲಿನ ಬುಡವನ್ನು ಗಟ್ಟಿಗೊಳಿಸುವುದಲ್ಲದೇ, ಕೂದಲು ಸೊಂಪಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ.

3)  ಮೊಸರು ಮತ್ತು ಬೇವು :

ಅತ್ಯುತ್ತಮ ಔಷಧಿಯ ಗುಣಗಳ ಆಗರವೇ ಬೇವು. ಬೇವು ಕಹಿಯಾದರೂ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅದು ಸಿಹಿಯಾದದ್ದು.ಶಿಲೀಂಧ್ರ ನಿವಾರಕ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಬೇವನ್ನು ತಂಪುಕಾರಿ ಮೊಸರಿನ ಜೊತೆ ಮಿಶ್ರಣ ಮಾಡಿ ತಲೆಕೂದಲಿಗೆ ಹಚ್ಚಿ ಎರಡು ತಾಸಿನ ನಂತರ ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ತಲೆಯನ್ನು ತೊಳೆದುಕೊಳ್ಳಬೇಕು.

ಹೀಗೆ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ತಲೆಹೊಟ್ಟು ನಿವಾರಣೆಯಗುವುದಲ್ಲದೇ, ಕೂದಲಿಗೆ ಹೊಳಪು ಮತ್ತು ಲವಲವಿಕೆಯನ್ನು ಒದಗಿಸುತ್ತದೆ.

4)  ಮೊಸರು ಮತ್ತು ಈರುಳ್ಳಿ ರಸ

ಒಂದು ಈರುಳ್ಳಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಂಡು, ನಂತರ  ಈರುಳ್ಳಿ ರಸವನ್ನು ಮೊಸರಿನ ಜೊತೆ ಬೆರಸಿ ತಲೆಗೆ ಲೇಪಿಸಿಕೊಂಡು ೧ ಗಂಟೆಯ ನಂತರ ತಲೆ ಕೂದಲನ್ನು ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಶುಚಿಗೊಳಿಸಿ.

ಇದು ನಿಮ್ಮ ತಲೆಬುರುಡೆಯ ಸೋಂಕನ್ನು ನಿವಾರಿಸುವಲ್ಲಿ ಅತ್ಯುತ್ತಮ ಮಾರ್ಗವಾಗುವುದಲ್ಲದೇ, ತಲೆಹೊಟ್ಟಿನ ನಿವಾರಣೆಗೂ ರಾಮಬಾಣವಾಗಲಿದೆ.

5)   ಮೊಸರು ಮತ್ತು ಮೆಂತ್ಯ ಬೀಜಗಳು

ಮೆಂತ್ಯಕಾಳು ಅಥವಾ ಮೆಂತ್ಯ ಸೊಪ್ಪು ಹಾಗೂ ಮೊಸರಿನಲ್ಲಿ ಹೆಚ್ಚಾಗಿ ನ್ಯೂಟ್ರಿನ್ ಅಂಶಗಳು ಹೇರಳವಾಗಿರುತ್ತದೆ. ಹಾಗಾಗಿ ಮೆಂತ್ಯಕಾಳುಗಳನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಮೊಸರಿನ ಜೊತೆ ಮಿಶ್ರಣ ಮಾಡಿ ಅರ್ಧಗಂಟೆಯವರೆಗೆ ನೆನೆಯಲು ಬಿಡಿ.

ನಂತರ ಕೂದಲಿಗೆ ಹಚ್ಚಿ 20ನಿಮಿಷಗಳ ತರುವಾಯ ತೊಳೆಯಬೇಕು. ಈ ರೀತಿ ವಾರಕ್ಕೊಮ್ಮೆ ಮಾಡಿಕೊಳ್ಳುತ್ತಿದ್ದರೆ ನಿಮ್ಮ ಕೂದಲು ಗಟ್ಟಿಯಾಗುವುದಲ್ಲದೇ ಕೂದಲು ಊದುರುವುದನ್ನು ತಡೆಗಟ್ಟಬಹುದು.

6)  ಮೊಸರು, ದಾಸವಾಳ, ಕರಿಬೇವು ಹಾಗೂ ಮೆಂತ್ಯ ಕಾಳು :

ಬಿಳಿ ಅಥವಾ ಕೆಂಪು  ದಾಸವಾಳ ಸೊಪ್ಪಿನ ಎಲೆಗಳು, ಕರಿಬೇವಿನ ಎಲೆಗಳು ಹಾಗೂ ರಾತ್ರಿ ನೆನೆಸಿಟ್ಟ ಮೆಂತ್ಯಕಾಳುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಒಂದು ಬಟ್ಟಲು ಮೊಸರಿನ ಜೊತೆ ಮಿಶ್ರಣ ಮಾಡಿ ಕೂದಲಿನ ಬುಡ ಹಾಗೂ ಕೂದಲಿಗೆ ಲೇಪಿಸಿ

ಸುಮಾರು 2 ಗಂಟೆಗಳ ತರುವಾಯ ಉತ್ತಮ ಶ್ಯಾಂಪೂವಿನಿಂದ ತೊಳೆಯಿರಿ. ಹೀಗೆ ತಿಂಗಳಿಗೆ ಎರಡು ಅಥವಾ ಮೂರು ಬಾರಿ ಬಿಡದೇ ಮಾಡಿಕೊಳ್ಳುತ್ತಿದ್ದರೇ, ಕ್ರಮೇಣ ನಿಮ್ಮ ಕೂದಲು ಕಪ್ಪು ಬಣ್ಣಕ್ಕೆ ತಿರುಗುತಲ್ಲದೇ ಹೊಳಪನ್ನು ಸಹ ಹೊಂದುತ್ತದೆ.

7)  ಮೊಸರು ಮತ್ತು ಬಾಳೆಹಣ್ಣು : ಒಂದು ಬಾಳೆಹಣ್ಣನ್ನು ಒಂದು ಬಟ್ಟಲು ಮೊಸರಿಗೆ ಹಾಕಿ ಚೆನ್ನಾಗಿ ನುಣುಚಿ 10 ನಿಮಿಷ ಬಿಟ್ಟು ತಲೆಗೆ ಹಚ್ಚಿಕೊಂಡು

15 ನಿಮಿಷಗಳ ತರುವಾಯ ಹದವಾದ ಬಿಸಿ ನೀರಿನಿಂದ ತಲೆಯನ್ನು ತೊಳೆಯುತ್ತಾ ಬಂದರೆ ಉದುರಿದ ಕೂದಲಿನ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ.

8)  ಮೊಸರು ಮತ್ತು ಆಲಿವ್ ಎಣ್ಣೆ :

ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ೧೦ ನಿಮಿಷಗಳ ಕಾಲ ಮಸಾಜ್ ಮಾಡಿ 30 ರಿಂದ 40 ನಿಮಿಷ ಬಿಟ್ಟು ಸ್ನಾನ ಮಾಡುತ್ತಾ ಬಂದರೆ ಒಣ ಕೂದಲಿನ ಸಮಸ್ಯೆ ಬಗೆಹರಿಯುವುದಲ್ಲದೇ, ಕೂದಲು ಮೃದುವಾಗಿ ಹೊಳೆಯಲು ಪ್ರಾರಂಭಿಸುತ್ತದೆ.

LEAVE A REPLY

Please enter your comment!
Please enter your name here