ಸಾಮಾನ್ಯವಾಗಿ ನಾವು ಬಾಳೆ ಹಣ್ಣು ಖರೀದಿಸುವಾಗ ಹಳದಿ ಸಿಪ್ಪೆಯ ಬಾಳೆ ಹಣ್ಣು ಖರೀದಿ ಮಾಡುತ್ತೇವೆ.ಆದರೆ ಕೆಂಪು ಸಿಪ್ಪೆಯ ಬಾಳೆ ಹಣ್ಣು ತಿಂದು ನೋಡಿ. ನಿಮ್ಮ ಆರೋಗ್ಯಕ್ಕೆ ಅದು ಕೊಡುವ ಬೂಸ್ಟ್ ಬೇರೆಯೇ.

ಸ್ಥೂಲ ಕಾಯದವರು ದೇಹದ ತೂಕ ಇಳಿಸಬೇಕೆಂದಿದ್ದರೆ ಕೆಂಪು ಬಾಳೆ ಹಣ್ಣು ಸಾಕಷ್ಟು ಸೇವಿಸಿ.ಇದರಲ್ಲಿರುವ ಕಾರ್ಬೋಹೈಡ್ರೇಟ್ ಅಂಶ ನಮ್ಮ ನಾಲಿಗೆ ಚಪಲಕ್ಕೂ ಕಡಿವಾಣ ಹಾಕುತ್ತದೆ.

ಇದನ್ನೂ ಓದಿರಿ…

ಬಾಳೆಎಲೆಯ ಮಹತ್ವವನ್ನು ಈ ಲೇಖನದ ಮೂಲಕ ತಿಳಿಯಿರಿ…

ಮೂತ್ರಪಿಂಡದ ಕಲ್ಲು ಸಮಸ್ಯೆ ಬಾರದಂತೆ ತಡೆಯಲು ಪೊಟೇಷಿಯಂ ಅಂಶವಿರುವ ಆಹಾರ ಸೇವನೆ ಅಗತ್ಯ.ಇದರಲ್ಲಿ ಪೊಟೇಷಿಯಂ ಜತೆಗೆ ಸಾಕಷ್ಟು ಕ್ಯಾಲ್ಶಿಯಂ ಅಂಶವಿದ್ದು, ಎಲುಬುಗಳ ಬೆಳವಣಿಗೆಗೂ ಸಹಕಾರಿ.

ಪೊಟೇಷಿಯಂ ಅಂಶ ಧೂಮಪಾನಿಗಳ ಮನಸ್ಸು ಹೆಚ್ಚು ಆ ಕಡೆಗೆ ಸೆಳೆಯದಂತೆ ತಡೆಯುತ್ತದೆ.ಮಾನಸಿಕವಾಗಿ ಶಕ್ತಿ ನೀಡುವುದರಿಂದ ಧೂಮಪಾನ ಮಾಡಬೇಕೆಂದು ನಿಮಗನಿಸದು.

ಇದನ್ನು ಓದಿರಿ…

ಬಾಳೆಹಣ್ಣಿನ ವಿಶೇಷ ಪ್ರಯೋಜನಗಳು ಏನೆಂದು ಗೊತ್ತಾದರೆ ನೀವು ದಿನಾ ಉಪಯೋಗಿಸುತ್ತೀರಾ…ತಿಳಿಯಲು ಇದನ್ನು ಓದಿರಿ…

ಕೆಂಪು ಬಾಳೆಹಣ್ಣು ಸೇವನೆ ಅಥವಾ ಚರ್ಮಕ್ಕೆ ಬಾಳೆ ಹಣ್ಣು ಲೇಪಿಸಿಕೊಳ್ಳುವುದು ಉತ್ತಮ. ಸ್ವಲ್ಪ ಓಟ್ಸ್ ಪುಡಿ ಮತ್ತು ಜೇನು ತುಪ್ಪದ ಜತೆಗೆ ಕೆಂಪು ಬಾಳೆ ಹಣ್ಣನ್ನು ಕಿವುಚಿಕೊಂಡು ಫೇಸ್ ಪ್ಯಾಕ್ ತಯಾರಿಸಬಹುದು.

ಈ ಬಾಳೆಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುವುದರಿಂದ ರಕ್ತದ ಗುಣಮಟ್ಟ ಮತ್ತು ಹಿಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವುದು.

1 COMMENT

LEAVE A REPLY

Please enter your comment!
Please enter your name here