ತಾಜಾ ಕೊತ್ತಂಬರಿ ಸೊಪ್ಪನ್ನು ಹಲವಾರು ಬಗೆಯ ಅಡುಗೆಯ ತಯಾರಿಯಲ್ಲಿ  ಬಳಸುತ್ತೇವೆ.ಪ್ರತಿಯೊಬ್ಬರ ಮನೆಯ ರೆಫ್ರಿಜಿರೇಟರ್ ನಲ್ಲಿ ಕೊತ್ತಂಬರಿ ಸೊಪ್ಪು ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಅಲಂಕರಿಸಿರುತ್ತದೆ.

ಹಲವಾರು ಆಹಾರ ಪದಾರ್ಥಗಳಿಗೆ ರುಚಿಯನ್ನು ತುಂಬುವ ಕೊತ್ತಂಬರಿ ಸೊಪ್ಪು ಒಂದು ಪರಿಣಾಮಕಾರಿ ಗಿಡಮೂಲಿಕೆಯಾಗಿದ್ದು,ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.

ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಸ್ವಾದ ಮತ್ತು ಕಂಪು ಹೆಚ್ಚಿಸಲು ಕೊನೆಯದಾಗಿ ಬಳಸಲಾಗುತ್ತದೆ.ಸಾಲಾಡ್,ಚಟ್ನಿ ಮೊದಲಾದವುಗಳಲ್ಲಿ ಕೊತ್ತಂಬರಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ಪ್ರಯೋಜನ ಕೇವಲ ಅಡುಗೆಯಲ್ಲಿ ಮಾತ್ರವಲ್ಲ,ದೇಹದ ಆರೈಕೆಗೂ ವ್ಯಾಪಿಸಿದೆ.

ಎಷ್ಟೋ ತೊಂದರೆಗಳ ಚಿಕಿತ್ಸೆಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿದ್ದುದು ಕೊತ್ತಂಬರಿಯಿಂದ ಅಲ್ಪವೆಚ್ಚದಲ್ಲಿ ಗುಣವಾಗಿದೆ.

ಕೊತ್ತಂಬರಿಯ ಪೋಷಕಾಂಶಗಳ ಪಟ್ಟಿಯನ್ನು ನೋಡಿದರೆ ಇಷ್ಟೊಂದು ಗುಣಗಳು ಈ ಪುಟ್ಟ ಸೊಪ್ಪಿನಲ್ಲಿದೆಯೇ ಎಂಬ ಅನುಮಾನ ಮೂಡುವುದು ಸಹಜ.ಇದುವರೆಗೆ ಸಾಲಾಡ್ ಅಥವಾ ಸಾರಿನಲ್ಲಿದ್ದ ಕೊತ್ತಂಬರಿ ಸೊಪ್ಪನ್ನು ಬದಿಗೆಸೆಯುತ್ತಿದ್ದವರು ಈ ವಿವರಗಳನ್ನು ನೋಡಿದ ಬಳಿಕ ಈ ಅಭ್ಯಾಸವನ್ನು ಕೈಬಿಡುವುದು ಒಳಿತು.

ಇದರಲ್ಲಿ ಹನ್ನೊಂದು ವಿಧದ ಉಪಯುಕ್ತ ತೈಲಗಳು,ವಿಟಮಿನ್ ಸಿ ಎಂದು ಕರೆಯಲಾಗುವ ಆಸ್ಕಾರ್ಬಿಕ್ ಆಮ್ಲಸ ಸಹಿತ ಆರು ತರಹದ ಆಮ್ಲಗಳು,ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ಇದರಲ್ಲಿ ಅಡಕವಾಗಿವೆ

ಇದರಲ್ಲಿರುವ ವಿವಿಧ ಪೋಷಕಾಂಶಗಳು,ವಿಶೇಷವಾಗಿ ಪೊಟ್ಯಾಶಿಯಂ ಹಲವು ರೀತಿಯಲ್ಲಿ ದೇಹಕ್ಕೆ ಅನುಕೂಲಕರವಾಗಿದೆ.ಉಳುಕು,ಸುಟ್ಟಗಾಯ ಮೊದಲಾದವುಗಳಿಗೆ ದೇಹದ ಹೊರಗಿನಿಂದ ಆರೈಕೆ ನೀಡಿದರೆ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳಿಸುವ ಮತ್ತು ಇನ್ನೂ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

ಕೊತ್ತಂಬರಿ ಸೊಪ್ಪಿನ ರಸವನ್ನು ಹಣೆಗೆ ಲೇಪ ಹಾಕುವುದರಿಂದ ತಲೆನೋವು ನಿವಾರಣೆಯಾಗುವುದು.ಬರೀ ಕೊತ್ತಂಬರಿಸೊಪ್ಪನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿಯಿಂದ ದುರ್ಗಂಧ ಬರುವುದಿಲ್ಲ.ಜತೆಗೆ ದಂತ ಕ್ಷಯವೂ ನಿವಾರಣೆಯಾಗುತ್ತದೆ.

ತಾಜಾ ಕೊತ್ತಂಬರಿಸೊಪ್ಪಿನಲ್ಲಿ ಒಲಿಕ್ ಆಮ್ಲ,ಲಿನೊಲಿಕ್ ಆಮ್ಲ, ಸ್ಟಿಯರಿಕ್ ಆಮ್ಲ, ಪಲ್ಮಿಟಿಕ್ ಆಮ್ಲ ಮತ್ತು ಆಸ್ಕೊರ್ಬಿಕ್ ಆಮ್ಲ (ವಿಟಮಿನ್ ಸಿ)ಗಳು ಸಮೃದ್ಧವಾಗಿರುತ್ತವೆ. ರಕ್ತದಲ್ಲಿರುವ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿಡಲು ಪ್ರಯೋಜನಕಾರಿಯಾಗಿರುತ್ತವೆ.

ಇದರ ಜೊತೆಗೆ ಈ ಅಂಶಗಳು ಹೃದಯದಲ್ಲಿರುವ ಅಭಿದಮನಿಗಳು ಮತ್ತು ಅಪದಮನಿಗಳ ನಾಳದಲ್ಲಿ ಅಸ್ತ ವ್ಯಸ್ತವಾಗಿ ಅಡಗಿರುವ ಕೊಲೆಸ್ಟಾಲನ್ನು ಕಡಿಮೆ ಮಾಡಿ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತವೆ.

ಅಧಿಕ ರಕ್ತದೊತ್ತಡ ಕಡಿಮೆಗೊಳಿಸಲು

ಸಾಮಾನ್ಯವಾಗಿ ವಯಸ್ಸಿನೊಂದಿಗೆ ರಕ್ತದೊತ್ತಡವೂ ಏರುತ್ತಾ ಹೋಗುತ್ತದೆ. ಇದಕ್ಕಾಗಿ ಊಟದೊಂದಿಗೆ ಒಂದು ಚಮಚ ಕೊತ್ತಂಬರಿ ಪುಡಿಯನ್ನು ಸೇರಿಸಿ ಸೇವಿಸುವ ಮೂಲಕ ಮೂರು ದಿನಗಳಲ್ಲಿಯೇ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ.

ರಕ್ತಹೀನತೆಯನ್ನು ಹೋಗಲಾಡಿಸಲು

ಸಾಮಾನ್ಯವಾಗಿ ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ರಕ್ತಹೀನತೆ ಉಂಟಾಗುತ್ತದೆ. ಇದರಿಂದಾಗಿ ಉಸಿರು ಕಟ್ಟುವ,ಹೃದಯಸ್ಥಂಬನ,ಅತಿಯಾದ ಸುಸ್ತು ಮತ್ತು ತಲೆತಿರುಗುವುದು ಕಣ್ಣು ಮಂಜಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಕೊತ್ತಂಬರಿಯಲ್ಲಿರುವ ಉತ್ತಮ ಪ್ರಮಾಣದ ಕಬ್ಬಿಣದ ಅಂಶ ರಕ್ತದಲ್ಲಿ ಶೀಘ್ರವಾಗಿ ಬೆರೆತು ಈ ಕೊರತೆಯನ್ನು ತುಂಬಿಸುತ್ತದೆ. ಜೊತೆಯಲ್ಲಿ ಇತರ ಅಂಗಗಳಿಗೂ ಪೋಷಣೆಯನ್ನು ನೀಡಿ ಆರೋಗ್ಯವನ್ನು ವೃದ್ಧಿಸುತ್ತದೆ.

ಮೂಳೆಗಳ ದೃಢತೆಯನ್ನು ಹೆಚ್ಚಿಸಲು

ಇದರಲ್ಲಿರುವ ವಿವಿಧ ಖನಿಜಗಳಲ್ಲಿ ಕ್ಯಾಲ್ಸಿಯಂ ಸಹಾ ಒಂದು. ಕ್ಯಾಲ್ಸಿಯಂ ಮೂಳೆಗಳಿಗೆ ಅತ್ಯಂತ ಅಗತ್ಯವಾಗಿದೆ. ಇದರೊಂದಿಗಿರುವ ಇತರ ಖನಿಜಗಳು ಸವೆದ ಮೂಳೆಗಳು ಪುನಃಶ್ಚೇತನ ಪಡೆಯಲು ಮತ್ತು ಹೆಚ್ಚು ದೃಢಗೊಳ್ಳಲು ಸಹಕಾರಿಯಾಗಿವೆ.ವಯಸ್ಸಾದಂತೆ ಮೂಳೆಗಳು ಟೊಳ್ಳಾಗುವ ಸಾಧ್ಯತೆಯನ್ನೂ ಕೊತ್ತಂಬರಿಯ ಪೋಷಕಾಂಶಗಳು ಕಡಿಮೆಗೊಳಿಸುತ್ತದೆ.

ಋತುಚಕ್ರದ ಏರುಪೇರು ಸರಿಗೊಳಿಸಲು

ಮಹಿಳೆಯರ ಮಾಸಿಕ ಚಕ್ರದ ದಿನಗಳು ಏರುಪೇರಾಗಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾದುದು ಹಾರ್ಮೋನುಗಳ ಸ್ರವಿಕೆ. ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಮಹಿಳೆಯರ ಎಂಡೋಕ್ರೈನ್ ಎಂಬ ಗ್ರಂಥಿಯಿಂದ ಸ್ರವಿಸುವ ಹಾರ್ಮೋನುಗಳನ್ನು ಸೂಕ್ತ ಪ್ರಮಾಣದಲ್ಲಿ ಸ್ರವಿಸುವಂತೆ ಮಾಡುತ್ತವೆ. ಇದರಿಂದಾಗಿ ಋತುಚಕ್ರ ಕ್ರಮಬದ್ದವಾಗಿಯೂ ಆಗಿ ನೋವನ್ನು ಕಡಿಮೆಗೊಳಿಸುತ್ತದೆ.

ಕಣ್ಣಿನ ಆರೋಗ್ಯಕ್ಕಾಗಿ

ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಆದರೆ ಕಣ್ಣಿಗೆ ಕೊತ್ತಂಬರಿ ಇನ್ನೂ ಒಳ್ಳೆಯದಾಗಿದೆ.ಏಕೆಂದರೆ ಇದರಲ್ಲಿರುವ ವಿಟಮಿನ್ ಎ, ಸಿ ಮತ್ತು ಖನಿಜಗಳಾದ ಗಂಧಕ,ಹಲವು ಆರೋಗ್ಯಕರ ಎಣ್ಣೆಗಳು (essential oils) ಉತ್ತಮ ದೃಷ್ಟಿಗೆ ಪೂರಕವಾಗಿವೆ.

ಇದರಿಂದ ಕಣ್ಣುಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗಿ ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ವಿಶೇಷವಾಗಿ ಕೊತ್ತಂಬರಿ ಸೊಪ್ಪಿನಲ್ಲಿರುವ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶ ಕಣ್ಣಿನ ಇನ್ನೂ ಹಲವು ಕಾಯಿಲೆಗಳನ್ನು ತಡೆಯಲು ಸಮರ್ಥವಾಗಿದೆ.ಕೊತ್ತಂಬರಿಯ ನಿರಂತರ ಸೇವನೆಯಿಂದ ಹಿಂದೆ ಕಳೆದುಕೊಂಡಿದ್ದ ದೃಷ್ಟಿಯನ್ನೂ ಮರಳಿ ಪಡೆಯಬಹುದಾಗಿದೆ

LEAVE A REPLY

Please enter your comment!
Please enter your name here