“ಗೊಜ್ಜವಲಕ್ಕಿ” ಇದು ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದಾಗಿದೆ. ಇದನ್ನು ಹುಳಿ ಅವಲಕ್ಕಿ ಎಂತಲೂ ಕರೆಯುತ್ತಾರೆ.

ಸಾಮಾನ್ಯವಾಗಿ ಶ್ರೀಕೃಷ್ಣ ಅವಲಕ್ಕಿ ಪ್ರೀಯನೆಂದು ಒಂದು ನಂಬಿಕೆ ಅದಕ್ಕಾಗಿ ಈ ಅಡುಗೆಯನ್ನು ಸಾಮಾನ್ಯವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ನೈವೇದ್ಯವಾಗಿ ತಯಾರಿಸುವ ವಾಡಿಕೆ ಕೂಡ ಉಂಟು.

ಕೃಷ್ಣ-ಸುಧಾಮರ ನಡುವಿನ ಸ್ನೇಹದ ದ್ಯೋತಕ -ಅವಲಕ್ಕಿ. ಅವಲಕ್ಕಿಯಿಂದ ನಾನಾ ತರಹದ ತಿಂಡಿಗಳನ್ನು ಮಾಡಬಹುದಾದರೂ ಈ ಗೊಜ್ಜವಲಕ್ಕಿಯ ರುಚಿಯೇ ಬಹಳ ವಿಶೇಷ.

ಗೋಕುಲಾಷ್ಟಮಿಯಂದು ಉಪವಾಸ ಇದ್ದು ಕೇವಲ ಶ್ರೀಕೃಷ್ಣನಿಗೆ ಅರ್ಪಿಸಿದ ನೈವೇದ್ಯವನ್ನು ಸ್ವೀಕರಿಸುವವರಿಗೆ ಇದು ಸೂಕ್ತ. ಬೇರೆ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ತಕ್ಕುದಾದ ತಿನಿಸು

LEAVE A REPLY

Please enter your comment!
Please enter your name here