ನಿದ್ದೆ ಎಂದ ಕೂಡಲೆ ನೆನಪಾಗುವ ಮೊದಲ ಶಬ್ದ ಕನಸು. ಆದರೆ ಇದಾದ ನಂತರ ಯಾವ ಶಬ್ದ ನೆನಪಾಗುತ್ತದೆ ಎಂದರೆ ಬಹುಶಃ ಅದು ಗೊರಕೆ.ಜಗತ್ತಿನ ಅದೆಷ್ಟೊ ಮಂದಿಗೆ ಗೊರಕೆ ಒಂದು ತಮಾಷೆಯ ಅಥವಾ ನಗುವಿನ ವಿಷಯವಲ್ಲ.ಗೊರಕೆ ಹೊಡೆಯುವ ಜನರನ್ನು ಪ್ರೀತಿಸುವವರ ಪಾಲಿಗೂ ಇದು ನಿರ್ಲಕ್ಸ್ಯ ಮಾಡುವ ವಿಷಯವಲ್ಲ.ಇದು ಬಹಳ ಕಡೆ ನಿಮ್ಮನು ಮುಜುಗರಕ್ಕೆ ತರುವುದೇ ಇದಕ್ಕೆ ಕಾರಣ.ವಯಸ್ಸಿನೊಂದಿಗೆ ಗೊರಕೆಯ ಪ್ರಮಾಣವೂ ಹೆಚ್ಚಾಗುತ್ತದೆ.

ಹಾಗಾದರೆ ಗೊರಕೆಗೆ ಕಾರಣಗಳೇನು?ಇದಕ್ಕೆ ದೈಹಿಕ ಕಾರಣಗಳಿರಬಹುದು.ಮೂಗು, ಗಂಟಲಿನಲ್ಲಿರುವ ತಡೆಗಳು,ಗಂಟಲು ನೋವು,ದೇಹದಲ್ಲಿ ಹೆಚ್ಚಾಗಿರುವ ಕೊಬ್ಬು, ಸರಿಯಾಗಿರದ ಮಲಗುವ ಭಂಗಿಗಳು ಕಾರಣವಾಗಿರಬಹುದು.ವೈಜ್ಞಾನಿಕವಾಗಿ ಹೇಳುವುದಾದರೆ ಮೃದು ಅಂಗುಳವು ಗಾಳಿಯಲ್ಲಿ ಬೀಸಲು ಆರಂಭವಾದಾಗ ಗೊರಕೆ ಆರಂಭವಾಗುತ್ತದೆ.

ನೀವು ಗೊರಕೆ ಹೊಡೆಯಲು ಕಾರಣ ಏನಿರಬಹುದು?

ಗೊರಕೆಯಿಂದಾಗಿ ಕೆಲವೊಮ್ಮೆ ನಿಮಗೆ ಬಹಳವೇ ಬೇಸರ ಬರಬಹುದು.ಗೊರಕೆಯ ಕಾರಣದಿಂದಾಗಿ ಸಂಗಾತಿಗಳು ಬೇರೆಯಾದ ಅದೆಷ್ಟೋ ಉದಾಹರಣೆಗಳೂ ಇವೆ.ಆದರೆ ಹೀಗಾಗುವ ಮುನ್ನ ಅದನ್ನು ತಡೆಯುವ ಯಾವುದಾದರೂ ಮಾರ್ಗಗಳಿವೆಯೇ? ಖಂಡಿತ ಇವೆ.ನಿಮ್ಮ ಜೀವನ ಶೈಲಿಯಲ್ಲಿನ ಸಣ್ಣ ಪುಟ್ಟ ಬದಲಾವಣೆಗಳು,ನಿಮ್ಮ ಆಹಾರ ಕ್ರಮದಲ್ಲಿನ ಬದಲಾವಣೆಗಳು ನಿಮ್ಮ ಗೊರಕೆಯ ಸಮಸ್ಯೆಯಿಂದ ಮುಕ್ತಿ ನೀಡಬಲ್ಲುದು.

ಅದರಲ್ಲೂ ಆಹಾರ ಕ್ರಮ ಬಹಳ ಪ್ರಮುಖ ಪಾತ್ರವನ್ನು ಪಡೆದಿದೆ.ಆಹಾರ ಕ್ರಮದಲ್ಲಿನ ಬದಲಾವಣೆಗಳೇ ಗೊರಕೆಯ ಸಮಸ್ಯೆಯನ್ನು ಬಹಳ ಮಟ್ಟಿಗೆ ತಡೆಯಬಹುದು ಎಂದು ಸಂಶೋಧನೆಗಳು ದೃಢಪಡಿಸಿವೆ. ಆಹಾರ ಮತ್ತು ಗೊರಕೆಯ ಸಂಬಂಧದ ಕುರಿತಾದ ಕೆಲವು ಸತ್ಯಗಳು ಇಲ್ಲಿವೆ.ಇದನ್ನು ಅರಿತರೆ ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬ ಬಗ್ಗೆ ನಿಮಗೆ ಕಲ್ಪನೆ ಮೂಡುತ್ತದೆ.

ರಾತ್ರಿಯ ಆಹಾರ ಮಿತವಾಗಿರಲಿ

ಹೆಚ್ಚು ಆಹಾರ ಸೇವಿಸಿ ಮಲಗುವ ಅಭ್ಯಾಸ ಒಳ್ಳೆಯದಲ್ಲ. ಆಹಾರ ಸೇವಿಸಿದ ಬಳಿಕ ಸ್ವಲ್ಪ ಹೊತ್ತು ಬೇರೆನಾದರೂ ಚಟುವಟಿಕೆಯಲ್ಲಿ ಸಮಯ ಕಳೆದು ನಂತರ ಮಲಗುವ ಅಭ್ಯಾಸ ಒಳ್ಳೆಯದು. ಊಟವಾದ ಬಳಿಕ ಒಂದು ಸುತ್ತು ತಿರುಗಾಡಿಕೊಂಡು ಬಂದರೆ ಆಹಾರ ಪಚನವಾಗುತ್ತದೆ. ರಾತ್ರಿಯ ಸಮಯದಲ್ಲಿ ಬಹಳ ಹೆಚ್ಚು ಆಹಾರ ಸೇವಿಸುವ ಅಭ್ಯಾಸವನ್ನು ಬಿಟ್ಟರೆ ಒಳ್ಳೆಯದು.

ಜೇನುತುಪ್ಪ

ಗೊರಕೆಯನ್ನು ತಡೆಯಲು ಜೇನುತುಪ್ಪ ಒಂದು ಪ್ರಭಾವಿ ಆಹಾರವಾಗಿದೆ.ಜೇನುತುಪ್ಪದಲ್ಲಿ ಉರಿಯೂತ ನಿಯಂತ್ರಕ ಹಾಗೂ ಸೂಕ್ಷ್ಮ ಜೀವಿ ನಿಯಂತ್ರಕ ಅಂಶಗಳಿವೆ.ಇವು ನಮ್ಮ ದೇಹದಲ್ಲಿ ಆಮ್ಲಜನಕ ಸಾಗಾಣಿಕೆಯಲ್ಲಿರುವ ಯಾವುದೇ ತರಹದ ತಡೆಗನ್ನು ಬಿಡುಗಡೆ ಮಾಡುತ್ತದೆ.

ಸಾಕಷ್ಟು ನಿದ್ದೆ ಮಾಡಿ

ಎಷ್ಟು ಹೊತ್ತು ನಿದ್ದೆ ಮಾಡಬೇಕು ಅನ್ನುವುದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ.ಎಳೇ ಮಗು ದಿನಕ್ಕೆ 16ರಿಂದ 18 ಗಂಟೆ ನಿದ್ದೆ ಮಾಡಿದರೆ,1ರಿಂದ 3 ವರ್ಷದ ಮಗು 14 ಗಂಟೆ ನಿದ್ದೆ ಮಾಡುತ್ತದೆ.3ರಿಂದ 5 ವರ್ಷದ ಮಗು 11 ಅಥವಾ 12 ಗಂಟೆ ನಿದ್ದೆ ಮಾಡಬೇಕು.6ರಿಂದ 12 ವರ್ಷದ ಮಕ್ಕಳು 10 ಗಂಟೆ,ಹದಿವಯಸ್ಕರು 9 ರಿಂದ 10 ಗಂಟೆ ಹಾಗೂ ವಯಸ್ಕರು 7 ರಿಂದ 8 ಗಂಟೆ ನಿದ್ದೆ ಮಾಡಬೇಕು.

ನಿದ್ದೆಯನ್ನು ಕಡೆಗಣಿಸಬಾರದು.ಎಲ್ಲರೂ ಸಾಕಷ್ಟು ನಿದ್ದೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.ನಿದ್ದೆಯಿಂದ ಏನು ಪ್ರಯೋಜನ?

ಮಕ್ಕಳಲ್ಲಿ ಮತ್ತು ಹದಿಪ್ರಾಯದವರಲ್ಲಿ ಬೆಳವಣಿಗೆಯಾಗುತ್ತದೆ.

ಹೊಸ ವಿಷಯಗಳನ್ನು ಕಲಿಯಲು ಮತ್ತು ಅವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.ದೇಹದ ಬೆಳವಣಿಗೆ ಮತ್ತು ತೂಕವನ್ನು ಸಮತೋಲನದಲ್ಲಿಡುವ ಹಾರ್ಮೋನುಗಳ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.ಹೃದಯ ಮತ್ತು ರಕ್ತ ನಾಳಗಳು ಸರಿಯಾಗಿ ಕೆಲಸ ಮಾಡುತ್ತವೆ.ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಸಾಕಷ್ಟು ನಿದ್ದೆ ಮಾಡದಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ,ಖಿನ್ನತೆ,ಹೃದ್ರೋಗ,ಸಕ್ಕರೆ ಕಾಯಿಲೆ,ಮತ್ತು ಭೀಕರ ಅಪಘಾತ ನಡೆಯುವ ಸಾಧ್ಯತೆಯಿದೆ.ಈ ಎಲ್ಲ ಅಪಾಯಗಳಿಂದ ದೂರವಿರಲು ಸಾಕಷ್ಟು ನಿದ್ದೆ ಮಾಡಲೇಬೇಕು.

ಆದರೆ ನಿಮಗೆ ನಿದ್ದೆ ಮಾಡಲಿಕ್ಕೇ ಆಗದಿದ್ದರೆ ಏನು ಮಾಡಬೇಕು, ಏನು ಮಾಡಬಾರದು?

ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದು,ಏಳುವುದು ಮಾಡಬಾರದು.ನಿಮ್ಮ ಮಲಗುವ ಕೋಣೆಯಲ್ಲಿ ಕತ್ತಲಿರುವಂತೆ,ಶಬ್ದವಿಲ್ಲದೆ ಶಾಂತಿಯಿರುವಂತೆ ಮತ್ತು ತೀರಾ ಸೆಕೆಯೂ ತೀರಾ ಚಳಿಯೂ ಇಲ್ಲದಂತೆ ನೋಡಿಕೊಳ್ಳಿ.

ಮಲಗಿರುವಾಗ ಮೊಬೈಲ್‌ ಉಪಯೋಗಿಸಬೇಡಿ ಅಥವಾ ಟಿ.ವಿ. ನೋಡಬೇಡಿ.ನಿಮ್ಮ ಹಾಸಿಗೆಯನ್ನು ನಿಮಗೆ ಹೇಗೆ ಬೇಕೋ ಹಾಗೆ ಸಿದ್ಧಪಡಿಸಿಕೊಳ್ಳಿ.ಮಲಗುವ ಸಮಯದಲ್ಲಿ ಕಾಫಿ, ಟೀ, ಮದ್ಯ ಸೇವನೆ ಅಥವಾ ಅತಿಯಾದ ಆಹಾರ ಸೇವನೆ ಬೇಡ.ಈ ಸಲಹೆಗಳನ್ನು ಅನ್ವಯಿಸಿದ ಮೇಲೂ ನಿಮಗೆ ಇನ್ನೂ ನಿದ್ದೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ

LEAVE A REPLY

Please enter your comment!
Please enter your name here