ಚಕೋತ ಹಣ್ಣು ನೋಡಲು ಆಕರ್ಷಕ.ಆದರೆ ರುಚಿಯಲ್ಲಿ ಸಿಹಿ ಮತ್ತು ಹುಳಿ.ಬಹುತೇಕ ಚಕ್ಕೋತ ಹಣ್ಣುಗಳು ಹುಳಿಯಾಗಿರುತ್ತವೆ.ಚಕೋತ ಹಣ್ಣು ಕಿತ್ತಳೆ ಜಾತಿಗೆ ಸೇರಿದ್ದು. ಆಕಾರ ಮತ್ತು ತೂಕದಲ್ಲಿ ಅದಕ್ಕಿಂತ ಜಾಸ್ತಿ. ಹೆಚ್ಚಾಗಿ ಇದು ತುಸು ಕಹಿ ಮತ್ತು ಕಡಿಮೆ ಸಿಹಿ ಹೆಚ್ಚು ಹುಳಿಯಿಂದ ಕೂಡಿರುತ್ತದೆ

ಹುಳಿ ಸಿಹಿಯನ್ನು ಹೊಂದಿರುವ ಚಕೋತ ಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.ದಿನನಿತ್ಯ ಚಕೋತ ತಿನ್ನುವುದರಿಂದ ಮೂತ್ರನಾಳದ ಸೋಂಕನ್ನು ತಡೆಗಟ್ಟಬಹುದು. ಇದರಲ್ಲಿ ವಿಟಮಿನ್‌ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವಸಡಿನಲ್ಲಿ ರಕ್ತ ಬರೋದು, ಬಾಯಿಯ ದುರ್ವಾಸನೆಯಿಂದ ಕೂಡಿದ್ದರೆ ದೇಹದಲ್ಲಿ ವಿಟಮಿನ್‌ ಸಿ ಕೊರತೆ ಉಂಟಾಗಿದೆ ಎಂದು ಅರ್ಥ. ಇದರಿಂದ ದೂರ ಇರೋಕೆ ಪ್ರತಿನಿತ್ಯ ಚಕೋತ ತಿಂದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.ರಕ್ತದಲ್ಲಿ ಕೊಬ್ಬಿನಂಶ ಸೇರಿ ಹೃದಯಕ್ಕೆ ರಕ್ತ ಸಂಚಾರ ಕಡಿಮೆ ಆಗುತ್ತಿದ್ದರೆ ಚಕೋತದಲ್ಲಿರುವ ಪೆಕ್ಟಿನ್‌ ಎಂಬ ಅಂಶವು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಜ್ವರ, ನೆಗಡಿ, ಕೆಮ್ಮು, ಅಲರ್ಜಿ, ಅಸ್ತಮಾ ಮೊದಲಾದ ಕಾಯಿಲೆಗಳಿಗೆ ಬುರುವುದು ಸಾಮಾನ್ಯ. ಇವೆಲ್ಲವುಗಳಿಗೆ ಪರಿಹಾರವೆಂದರೆ ವಿಟಮಿನ್‌ ಸಿ.ಚಕೋತ ಹಣ್ಣು ಅಥವಾ ರಸದ ರೂಪದಲ್ಲಿ ದೇಹಕ್ಕೆ ಸೇರಿವುದರಿಂದ ವಿಟಮಿಸ್‌ ಸಿ ಸಿಗುತ್ತದೆ.

ದೇಹದ ತೂಕ ಇಳಿಸಿಕೊಳ್ಳಲು ನಾರಿನಂಶದ ಸೇವನೆ ಅಗತ್ಯ. ಚಕೋತ ತಿಂದ್ರೆ ಸಾಕಷ್ಟು ನಾರಿನಂಶ ದೇಹಕ್ಕೆ ಸಿಗುವುದರಿಂದ ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು.ನಿಯಮಿತವಾಗಿ ಚಕೋತ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

LEAVE A REPLY

Please enter your comment!
Please enter your name here