ಚುರುಮುರಿ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ.ಕಡ್ಲೆಪುರಿ ಚುರುಮುರಿಯನ್ನು ನಮ್ಮ ಅಜ್ಜಿ ತುಂಬಾ ತುಂಬಾ ಚೆನ್ನಾಗಿ ಮಾಡುತ್ತಿದ್ದರು.ಚುರುಮುರಿ ಮಾಡಿದರೆ ಮನೆಯೆಲ್ಲಾ ಘಂ ಎನ್ನುವ ವಾಸನೆ ಬರುತ್ತಿತ್ತು.

ಅಷ್ಟು ರುಚಿಯಾಗಿ ಮಾಡುತ್ತಿದ್ದರು. ನಾವು ತಯಾರಿಸೋದು ಅದೇ ತರಹ ಇದ್ದರೂ ಸಹ ಅವರ ಕೈನಲ್ಲಿ ತಯಾರಿಸುತ್ತಿದ್ದ ರುಚಿಯೇ ಒಂಥರ ಚೆನ್ನ.

ಅಜ್ಜಿ ಕೈರುಚಿ, ಅಮ್ಮನ ಕೈ ರುಚಿ ಅಂತಾರಲ್ಲ ಆಗೇ.ಈಗಲೂ ಅದೇ ಚುರುಮುರಿ ನೆನಪು ಬರುತ್ತದೆ.ಅದೆಷ್ಟು ಹದವಾಗಿ ತಯಾರಿಸುತ್ತಿದ್ದರು ಆಗಿನ ಕಾಲದಲ್ಲಿ ತಯಾರಾದ ತಕ್ಷಣ ತಟ್ಟೆ ತುಂಬಾ ಹಾಕಿಕೊಂಡು ತಿನ್ನುವುದೇ ದೊಡ್ಡ ಕೆಲಸ.ಅದರ ಹಿಂದೆ ಎಷ್ಟು ಕೆಲಸ ಇರುತ್ತೆ ಅಂತ ಗೊತ್ತಾಗುತ್ತೆ

ಈಗ ಖಾರವಾಗಿದ್ದರಂತೂ ಇನ್ನು ಚೆಂದ.ಕಡ್ಲೆಪುರಿ ಚುರುಮುರಿಗೆ ಚಳಿ ಮತ್ತು ಮಳೆಗಾಲದಲ್ಲಿ ತುಂಬಾ ಡಿಮ್ಯಾಂಡ್.ಈಗಂತೂ ಹೇಗೇ ತಯಾರು ಮಾಡಿದರು ಅಜ್ಜಿ ಮಾಡುತ್ತಿದ್ದ ಚುರುಮುರಿ ಚೆನ್ನಾಗಿತ್ತೇನೋ ಎನಿಸುತ್ತೆ. ಓಕೆ ಈಗ ಇಲ್ಲಿ ನಾವು ಚುರುಮುರಿ ತಯಾರಿಸೋಣ.

ಇದನ್ನೂ ನೋಡಿರಿ..

ವಿವಿಧ ಬಗೆಯ ದೋಸೆಗಳನ್ನು ಮಾಡೋದು ಹೇಗೆ? ಈ ವೀಡಿಯೋ ನೋಡಿ…

ಚುರುಮುರಿ ಮಾಡುವ ಸುಲಭ ವಿಧಾನವನ್ನು ಈ ವೀಡಿಯೋದಲ್ಲಿ ನೋಡಿ..

LEAVE A REPLY

Please enter your comment!
Please enter your name here