ಜೇನುತುಪ್ಪದ ಔಷದಿಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು? ತಿಳಿಯಿರಿ ಈ ಲೇಖನದಿಂದ..

0
530

ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಸವರುವುದರಿಂದ ಉರಿ ಶಾಂತವಾಗುತ್ತದೆ ಮತ್ತು ಗಾಯ ಶೀಘ್ರವೇ ಮಾಯಲು ಅನುಕೂಲವಾಗುತ್ತದೆ. ಆದರೆ ಸುಟ್ಟ ತಕ್ಷಣ ಆ ಜಾಗಕ್ಕೆ ಖಂಡಿತ ತಣ್ಣೀರನ್ನು ಮುಟ್ಟಿಸಬಾರದು. ಒಮ್ಮೆ ಕೊಬ್ಬರಿ ಎಣ್ಣೆ ಸವರಿದರೂ ಒಳ್ಳೆಯದೇ.ಹುಳುಕಡ್ಡಿ ,ಇಸುಬು ಮುಂತಾದ ಚರ್ಮರೋಗಗಳಿಗೆ ಜೇನುತುಪ್ಪ ಸವರುವುದರಿಂದ ಗುಣಮುಖವಾಗುತ್ತದೆ.

ಬಾಯಿಯ ಹುಣ್ಣು ನಿವಾರಿಸಲು ದಿನಕ್ಕೆ ನಾಲ್ಕು ಭಾರಿ ಜೇನುತುಪ್ಪವನ್ನು ಹಚ್ಚಬೇಕು.ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಭೋಗಶಕ್ತಿಯಲ್ಲಿ ವೃದ್ಧಿಯಾಗುತ್ತದೆ. ಸ್ವಪ್ನ ಸ್ಖಲನವಾಗುವ ಸಾಧ್ಯತೆ ಇರುವುದಿಲ್ಲ.ವಸಡುಗಳು ಊದಿಕೊಂಡು ಹಲ್ಲು ನೋವು ಉಂಟಾದರೆ ಜೇನುತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ದಿನಾ ನಾಲ್ಕಾರು ಭಾರಿ ಇಟ್ಟುಕೊಂಡರೆ ಹಲ್ಲು ನೋವು ಮತ್ತು ಒಸಡಿನ ಊತ ಕಡಿಮೆಯಾಗುತ್ತದೆ.

ಜೇನುತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಕೊಟ್ಟರೆ ರೋಗನಿರೋಧಕ ಶಕ್ತಿ ಬರುತ್ತದೆ.ದಢೂತಿ ಶರೀರದವರು ನಾಲ್ಕು ಟೀ ಚಮಚದಷ್ಟು ಜೇನುತುಪ್ಪವನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ಶಾರೀರಿಕ ತೂಕವು ಕಡಿಮೆಯಾಗಿ ನರಗಳು ಚೇತರಿಸಿಕೊಳ್ಳುತ್ತವೆ.

ಮೂರು ಟೀ ಚಮಚ ಜೇನುತುಪ್ಪವನ್ನು ರಾತ್ರಿ ಊಟವಾದ ನಂತರ ಮಲಗುವ ಮುಂಚೆ ಸೇವಿಸುತ್ತಾ ಬಂದರೆ ಬಹುಮೂತ್ರ ರೋಗ ನಿವಾರಣೆಯಾಗುತ್ತದೆ.ಮಧುಮೇಹ ರೋಗಿಗಳು ಮತ್ತು ಕ್ಷಯರೋಗಿಗಳು ಜೇನುತುಪ್ಪ ಸೇವಿಸುವುದರಿಂದ ಆರೋಗ್ಯದ ಸುಧಾರಣೆಯಾಗುತ್ತದೆ.

ಎಳೆಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ಹನಿ ಜೇನುತುಪ್ಪವನ್ನು ಬೆರಸಿ ಕುಡಿಸಬೇಕು. ದಿನಕ್ಕೆ ಎರಡು ಭಾರಿ ಕುಡಿಸಿದರೆ ಮೂರೇ ದಿನಗಳಲ್ಲಿ ಗಮನಾರ್ಹ ಬೆಳವಣಿಗೆಯಾಗಿ ಗುಣಮುಖವಾಗುವುದು.

ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ಎರಡು ಟೀ ಚಮಚ [ 10 ಮಿಲಿ ] ಜೇನುತುಪ್ಪ ಮತ್ತು ಕಾಲು ಲೋಟ ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಅದಕ್ಕೆ ಐದು ಹನಿ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯಬೇಕು. ಇದರಿಂದ ಕೊಲೆಸ್ಟರಾಲ್ ಮತ್ತು ದೇಹದ ತೂಕ ಕಡಿಮೆಯಾಗುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ಆಯಾಸ ಕಡಿಮೆಯಾಗುತ್ತದೆ.ದೈಹಿಕ ಶಕ್ತಿ ಹೆಚ್ಚುತ್ತದೆ. ಆದರೆ ಜೇನುತುಪ್ಪ ಬಹಳ ಉಷ್ಣ ವಸ್ತು. ಉಷ್ಣ ಪ್ರಕೃತಿಯವರು ಇದನ್ನು ಸೇವಿಸುತ್ತಿರುವಾಗ ಆದಷ್ಟು ಶರೀರಕ್ಕೆ ತಂಪು ಕೊಡುವ ಪದಾರ್ಥವನ್ನು ಸತತವಾಗಿ ಸೇವಿಸುತ್ತಿರಬೇಕು

LEAVE A REPLY

Please enter your comment!
Please enter your name here