ಥು…!!! ಏನಪ್ಪಾ ಇದು ಲೇಖನ ಹೀಗಿದೆ ಅಂತ ಆಂದುಕೊಳ್ತಾ ಇದ್ದೀರಾ? ಹೌದು ನಿಜ ರೀ ಟಾಯ್ಲೆಟ್ ನಲ್ಲಿ ಮೊಬೈಲ್ ಉಪಯೋಗ ಮಾಡಬಾರದು.ಮಾಡಿದ್ರೆ ಏನಾಗುತ್ತೆ ಗೊತ್ತಾ? ಓದ್ಕೊಂಡು ಹೋಗಿ ಮುಂದಕ್ಕೆ…

ಈಗ ಎಲ್ಲವೂ ಮೊಬೈಲ್ ನಲ್ಲೇ..! ಕೆಲವರಿಗೆ ಕೆಟ್ಟ ಚಟವಿದೆ.ಅದೇನೆಂದರೆ ಟಾಯ್ಲೆಟ್ ಗೆ ಹೋಗುವಾಗ ಹೆಚ್ಚಿನವರು ಮೊಬೈಲ್ ನಲ್ಲಿ ಮಾತಾಡುತ್ತಾರೆ.ಆದರೆ ಇದು ಸರಿಯಲ್ಲ.

ಶೌಚಾಲಯದಲ್ಲಿ ಒಂಟಿಯಾಗಿರುವುದಕ್ಕೆ ಕಷ್ಟವಾಗುತ್ತದೆ.ಇದಕ್ಕಾಗಿ ಮೊಬೈಲ್ ಬಳಸುತ್ತೇವೆ ಅನ್ನಬಹುದು.ಆದರೆ ಇದ್ಯಾವುದು ಕಾರಣವೇ ಅಲ್ಲ.ಟಾಯ್ಲೆಟ್ ನಲ್ಲಿ ಕೂತು ಮೊಬೈಲ್ ಬಳಸುವುದರಿಂದ ಕ್ಯಾಂಪಿಲೊಬ್ಯಾಕ್ಟರ್,ಸ್ಟ್ಯಾಫಿಲೋಕೊಕಸ್,ಸ್ಟ್ರೆಪ್ಟೊಕೊಕಸ್ ಮತ್ತು ಸಾಲ್ಮೊನೆಲ್ಲಾ ಮೊದಲಾದ ಅಪಾಯಕಾರಿ ಬ್ಯಾಕ್ಟೀರಿಯಾಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ.

ಮೊಬೈಲ್ ನ ಕೆಲವೊಂದು ಭಾಗಗಳು ರಬ್ಬರ್ ನಿಂದ ತಯಾರಿಸಲಾಗಿರುತ್ತದೆ. ಇದು ಬ್ಯಾಕ್ಟೀರಿಯಾಗಳಿಗೆ ಬೆಚ್ಚಗಿನ ವಾತಾವರಣದಲ್ಲಿ ಸಂತಾನೋತ್ಪತ್ತಿಗೆ ಅವಕಾಶ ಮಾಡಿಕೊಡುತ್ತದೆ.ಇದಷ್ಟೇ ಅಲ್ಲ,ಹೆಪಟೈಟಿಸ್ ಎ ಮತ್ತು ಸಾಮಾನ್ಯ ಶೀತ ವೈರಸ್ ಗಳ ಹರಡುವಿಕೆಗೆ ಕಾರಣವಾಗುತ್ತದೆ.

ನೀವು ಶೌಚಾದ ನಂತರ ಸೋಪ್ ನೊಂದಿಗೆ ಕೈ ತೊಳೆಯಲು ಹೇಳಲಾಗುತ್ತದೆ.ಕಾರಣ ಇದುವೇ.ನಿಮ್ಮ ಟಾಯ್ಲೆಟ್ ನಲ್ಲಿರುವ ಫ್ಲಷ್ ಟ್ಯಾಪ್, ಟಾಯ್ಲೆಟ್ ಪೇಪರ್ ಹೀಗೆ ಕೆಲವೊಂದು ಸಲಕರಣೆಗಳಲ್ಲಿ ಸಹ ರೋಗಾಣುಗಳಿರಬಹುದು.ಬ್ಯಾಕ್ಟೀರಿಯಾಗಳ ಸುಲಭ ದಾಳಿಗೆ ಮೊಬೈಲ್ ಬಳಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.ಹೀಗಾಗಿ ಇನ್ನು ಮುಂದೆ ಟಾಯ್ಲೆಟ್ ನಲ್ಲಿ ಮೊಬೈಲ್ ಬಳಸಬೇಡಿ.

LEAVE A REPLY

Please enter your comment!
Please enter your name here