ತುಂಬೆ ಗಿಡ.ಕೆಲವು ಪ್ರದೇಶದಲ್ಲಿ ಶಿವನಿಗೆ ಪ್ರಿಯವಾದ ಹೂವು ಅಂತ ಪರಿಗಣಿಸಲ್ಪಡುವ ಇದು ರುದ್ರಪುಷ್ಪ ಅಂತಲೂ ಜನಜನಿತವಾಗಿದ್ದು ಒಂದು ಔಷಧೀಯ ಸಸ್ಯವೂ ಹೌದು.

ಪುರಾಣದ ಪ್ರಕಾರ ಶಿವನ ದೇಹದಲ್ಲಿ ವಿಷ ಸೇರಿದಾಗ ಅದರ ನಿವಾರಣೆಗೆ ತುಂಬೆ ಹೂವುಗಳನ್ನು ಬಳಸಿದ್ದರಿಂದಾಗಿ ಈಗಲೂ ಕೂಡ ಶಿವನಿಗೆ ತುಂಬೆ ಪುಷ್ಪ ಅರ್ಪಿಸುವ ಪರಿಪಾಠ ರೂಢಿಯಲ್ಲಿದೆಯಂತೆ.

ಇದನ್ನೂ ಓದಿರಿ…

ಎಕ್ಕದ ಹೂವಿನ ಮಹತ್ವವನ್ನು ಈ ಲೇಖನದಿಂದ ತಿಳಿಯಿರಿ..ಓದಲು ಇಲ್ಲಿ ಕ್ಲಿಕ್ ಮಾಡಿ..

ಸಂಸ್ಕೃತದಲ್ಲಿ ದ್ರೋಣ ಪುಷ್ಪ ಇಲ್ಲವೇ ಚಿತ್ರಕ್ಷುಪ ಎಂದು ಕರೆಯಲ್ಪಡುವ ಈ ತುಂಬೆ ಆಯುರ್ವೇದಿಯವಾಗಿ ಹಲವು ಕಾರಣಗಳಿಂದ ಬಳಕೆಯಲ್ಲಿದೆ. ತೆಲುಗಿನವರು ಇದನ್ನು ತುಮ್ಮಿಚಿಟ್ಟು ಎಂದು ಕರೆಯುತ್ತಾರೆ.

ಹೆಚ್ಚು ನೀರು ಬಯಸದೇ ಕಂಡಕಂಡಲ್ಲಿ ಬೆಳೆಯುವ ಇವು ನೋಡಲು ಸುಂದರವಾದ ಪುಟ್ಟ ಪುಟ್ಟ ಹೂವುಗಳಿಂದ ಕಂಗೊಳಿಸುವ ಗಿಡ.ತುಂಬೆ ಸಾಮಾನ್ಯವಾಗಿ ಬಿಳಿ ಬಣ್ಣವನ್ನು ಹೊರತುಪಡಿಸಿ ಕಾಮನಬಿಲ್ಲಿನ ಎಲ್ಲಾ ಬಣ್ಣಗಳಲ್ಲೂ ಹೂವು ಬಿಡುತ್ತೆ.

ಇದನ್ನೂ ಓದಿರಿ…

ಬಿಲ್ವ ಪತ್ರೆ ಉಪಯೋಗ ಓದಿದ್ರೆ ಆ ಶಿವನಿಗಲ್ಲ ನಿಮಗೂ ಇಷ್ಟ ಆಗುತ್ತೆ…ಇದರ ಮೇಲೆ ಕ್ಲಿಕ್ ಮಾಡಿ ಓದಿರಿ

ಕೆಲವು ಗಿಡಗಳಲ್ಲಿ ಹೂವುಗಳು ಎರಡೆರಡು ಬಣ್ಣಗಳಿಂದಲೂ ಇರುತ್ತೆ.ತೀರಾ ದೊಡ್ಡದಾಗಿ ಬೆಳೆಯದ ಈ ಗಿಡ ಬೆಂಗಳೂರಿನ ಲಾಲ್ ಬಾಗ್ ಹಾಗೂ ಇತರೆ ಪಾರ್ಕ್ ಗಳಲ್ಲೂ ಕಾಣಸಿಗುತ್ತೆ.ಬಿಳಿ ಬಣ್ಣದ ತುಂಬೆ ಅತ್ಯಂತ ಶ್ರೇಷ್ಠವೆನಿಸಿದ್ದು ಔಷಧೀಯವಾಗಿ ಹೆಚ್ಚು ಬಳಕೆಯಲ್ಲಿದೆ.

(ಸಂಗ್ರಹ)

LEAVE A REPLY

Please enter your comment!
Please enter your name here