ಪ್ರತಿ ಮನೆಯ ಎದುರು ಒಂದು ತುಳಸಿ ಕಟ್ಟೆ,ತುಳಸಿ ಕಟ್ಟೆಯ ಮೇಲೂಂದು ತುಳಸಿ.ಆದರೆ ಈ ತುಳಸಿ ಗಿಡ ಹೆಚ್ಚು-ಕಡಿಮೆ ನಮ್ಮ ಎಲ್ಲಾ ಮಾರಣಾಂತಿಕ ಕಾಯಿಲೆಗಳಿಗೂ ರಾಮಬಾಣ ಎಂದು ನಿಮಗೆ ಗೊತ್ತೆ?

ಪ್ರತಿದಿನದ ಪ್ರಾರಂಭವನ್ನು ಒಂದು ತುಳಸಿ ಎಲೆಯ ಮುಖಾಂತರ ಪ್ರಾರಂಭಿಸಿ ಎನ್ನುವುದು ಹೆಚ್ಚಿನವರ ಮಾತು.ಆದರೆ ನಾವು-ನೀವು ಇದನ್ನು ಕಡೆಗಣಿಸುವುದೆ ಹೆಚ್ಚು.ಆದರೆ ತುಳಸಿಯ ವೈಜ್ಞಾನಿಕ ಸತ್ಯವನ್ನು ನಾವು ನಿಮ್ಮ ಮುಂದೆ ಬಿಚ್ಚಿಡುತ್ತೇವೆ ಕೇಳಿ.

ಪ್ರತಿದಿನ ತುಳಸಿ ಎಲೆಗಳನ್ನು ಜಗಿಯುವುದರಿಂದ ಹಾಗೂ ತುಳಸಿ ಚಹಾ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಆತಂಕ ನಿವಾರಣೆಯಲ್ಲು ಸಹಾಯ ಮಾಡುತ್ತದೆ.ಇದು ರಿಂಗ್ವಾರ್ಮ್ಸ ರೀತಿಯ ಚರ್ಮದ ತೊಂದರೆ ಹಾಗೂ ತುರಿಕೆ ಮತ್ತು ಸಮಸ್ಯೆಗಳು ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ.

ತುಳಸಿ ಎಲೆ ಆಹಾರವನ್ನು ಉತ್ತಮವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.ತುಳಸಿ ಎಲೆಯು ಹಲ್ಲಿನ ಎಲ್ಲಾ ತರಹದ ಬಾದೆಗೂ ರಾಮಬಾಣವಾಗಿದೆ,ಹಲ್ಲಿನ ವಸಡುಗಳನ್ನು ಆರೋಗ್ಯಕರವಾಗಿಡುತ್ತದೆ.ತುಳಸಿಯ ತಾಜಾ ರಸವನ್ನು ಕಿವಿಗೆ ಹಾಕುವುದರಿಂದ ಕಿವಿನೋವಿನ ಸಮಸ್ಯೆಗೆ ಪರಿಹಾರವಾಗಿದೆ.

ತುಳಸಿ ಮಿಶ್ರಣವನ್ನು ಎಲೆಗಳು ಮತ್ತು ಜೇನು ನೋಯುತ್ತಿರುವ ಗಂಟಲು ಕಾರಣವಾಗುತ್ತದೆ.ತುಳಸಿ ಎಲೆಯು ಕೆಮ್ಮಿಗೆ ಮನೆ ಔಷದವಾಗಿದೆ.ತುಳಸಿ ಎಲೆ ಹಾಗೂ ಜೇನಿನ ಮಿಶ್ರಣದ ರಸ ಕುಡಿದರೆ ಕಿಡ್ನಿ ಕಲ್ಲಿನ ಸಮಸ್ಯೆಗೆ ರಾಮಬಾಣವಾಗಿದೆ.ಕಿಡ್ನಿಯಲ್ಲಿ ಕಲ್ಲಿದ್ದರೆ ಅದು ಮೂತ್ರದ ಮೂಲಕ ಹೋಗಲು ಈ ರಸ ಸಹಕಾರಿಯಾಗಿದೆ.

ತಲೆನೋವಿಗೆ ತುಳಸಿ ಎಲೆ ಹಾಗೂ ಗಂಧದ ಪೇಸ್ಟ್ ಮಾಡಿಕೊಂಡು ಹಣೆಗೆ ಹಚ್ಚಿಕೊಂಡರೆ ತಲೆ ನೋವು ಉಪಶಮನವಾಗುವುದು.ರಾತ್ರಿ ಕುರುಡು ಹಾಗೂ ಮಂದಕಣ್ಣಿನ ಸಮಸ್ಯೆ ಇದ್ದರೆ ಒಂದೆರಡು ಡ್ರಾಪ್ಸ್ ತುಳಸಿ ರಸವನ್ನು ಕಣ್ಣಿಗೆ ಹಾಕಿಕೊಳ್ಳಬೇಕು.

LEAVE A REPLY

Please enter your comment!
Please enter your name here