ಒಂದು ವೀಳ್ಯದೆಲೆಗೆ ಸ್ವಲ್ಪ ತುಳಸಿ ಎಲೆ ಸ್ವಲ್ಪ ಉಪ್ಪು ಹಾಕಿ ಅದಕ್ಕೆ ಒಂದೆರಡು ಲವಂಗ ಹಾಕಿಕೊಂಡು ಮಡಚಿ ನೋವಾದ ಹಲ್ಲಿನ ಮೇಲೆ ಇಟ್ಟುಕೊಂಡು ಆ ಒಂದೇ ಹಲ್ಲಿನಲ್ಲಿ ಜಗಿದು ರಸ ಉಗಿದರೆ ಹಲ್ಲು ನೋವು ಕಡಿಮೆ ಆಗುತ್ತದೆ.

ದಿನದಲ್ಲಿ 3-4 ಸಲ ಟೊಮಾಟೊ ಹಣ್ಣಿನ ರಸ ಸೇವಿಸುವುದರಿಂದ ಹಲ್ಲು, ಒಸಡುಗಳಿಂದ ರಕ್ತ ಸುರಿಯುವುದು ನಿಲ್ಲುತ್ತದೆ.

ನಿಂಬೆರಸವನ್ನು ವಸಡಿಗೆ ಲೇಪಿಸುವುದರಿಂದ ರಕ್ತ ಬರುವುದು ನಿಲ್ಲುತ್ತದೆ. ನಿಂಬೆಹಣ್ಣಿನ ಸಿಪ್ಪೆಯನ್ನು ಒಣಗಿಸಿ ಚೂರ್ಣವಾಗಿಸಿಟ್ಟುಕೊಂಡು ಪ್ರತಿದಿನ ಈ ಚೂರ್ಣದಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲುಗಳು ಹೊಳೆಯುವುದಲ್ಲದೇ ಉಸಿರಿನ ದುರ್ಗಂಧ ನಿವಾರಣೆಯಾಗುವುದು.

ಹಲ್ಲು ನೋವಿದ್ದಾಗ ಸೀಬೆಗಿಡದ ಚಿಗುರುಗಳ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ನೋವು ಕೂಡಲೇ ಕಡಿಮೆ ಆಗುವುದು.

ಹಲ್ಲಿನ ಒಸಡುಗಳಿಂದ ರಕ್ತ ಬರುತ್ತಿದ್ದರೆ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಚೂರ್ಣಿಸಿ ಅದರಿಂದ ಹಲ್ಲನ್ನು, ಒಸಡುಗಳನ್ನು ತಿಕ್ಕುವುದರಿಂದ ಗುಣವಾಗುತ್ತದೆ.

ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಚೂರ್ಣ ಮಾಡಿಟ್ಟುಕೊಂಡು ದಿನ ½ ಚಮಚ ಸೇವಿಸುವುದರಿಂದ ಹಾಗೂ ಸಿಪ್ಪೆಯನ್ನು ನೀರಿನಲ್ಲಿ ಬೇಯಿಸಿ ಮುಕ್ಕಳಿಸುವುದರಿಂದ ಬಾಯಿಂದ ಬರುವ ದುರ್ಗಂಧ , ಬಾಯಲ್ಲಿ ನೀರು ಬರುವುದು ಮುಂತಾದ ತೊಂದರೆಗಳು ದೂರವಾಗುತ್ತವೆ.

ಮಾವಿನ ಎಲೆಯಿಂದ ದಿನವೂ ಹಲ್ಲು ಉಜ್ಜುವುದರಿಂದ ದಂತಕ್ಷಯ ದೂರವಾಗಿಸಿ ಒಸಡು ಬಲು ಗಟ್ಟಿಯಾಗುತ್ತವೆ.ಇಡೀ ಸೇಬು ಹಣ್ಣನ್ನು ಕಚ್ಚಿ ಜಗಿದು ತಿಂದರೆ ಹಲ್ಲುಗಳು ಹಾಗೂ ವಸಡು ಗಟ್ಟಿಯಾಗುತ್ತವೆ.ಝಂಡು ಬಾಮ್ ಹತ್ತಿಗೆ ಹಾಕಿ ಹಲ್ಲಿನ ಮೇಲೆ ಇಟ್ಟರೆ ನೋವು ಗುಣವಾಗುವುದು.

 

ನೋವಿರುವ ಜಾಗಕ್ಕೆ ಲವಂಗದ ಎಣ್ಣೆಯಲ್ಲಿ ಅದ್ದಿ ಸ್ವಲ್ಪ ಸಮಯದವರೆಗೆ ಇಟ್ಟರೆ ನೋವೆಲ್ಲಾ ಮಾಯ.
ಸ್ವಲ್ಪ ಇಂಗು ಜೊತೆ ನಿಂಬೆರಸ ಸೇರಿಸಿ ಪೇಸ್ಟ್ ಮಾಡಿ ಅದನ್ನು ನೋವು ಇರುವ ಹಲ್ಲಿನ ಮೇಲೆ ಇಟ್ಟರೆ ಹಲ್ಲು ನೋವು ಜೊತೆಗೆ ಹಲ್ಲಿನಲ್ಲಿರುವ ನಂಜು ಕಡಿಮೆಯಾಗುತ್ತದೆ.
ಒಂದು ಹರಳು ಕಲ್ಲು ಉಪ್ಪು ಮತ್ತು ಅಷ್ಟೇ ಪ್ರಮಾಣದ ಕರ್ಪೂರ ಒಟ್ಟಿಗೆ ನೋವಿರುವ ಹಲ್ಲಿನ ಮೇಲಿಟ್ಟು ಅಗಿಯಿರಿ. ಅದರಿಂದ ಇಳಿದ ನೀರನ್ನು ನೋವನ್ನು ಉಪಶಮನ ಮಾಡುತ್ತದೆ.

ನೋವಿರುವ ಜಾಗಕ್ಕೆ ಲವಂಗದ ಎಣ್ಣೆಯಲ್ಲಿ ಅದ್ದಿದ ಹತ್ತಿಯನ್ನು ಸ್ವಲ್ಪ ಸಮಯದವರೆಗೂ ಇಟ್ಟರೆ ನೋವೆಲ್ಲಾ ಮಾಯ.
ಪರಂಗಿ ಕಾಯಿಯ ಬಿಳಿ ಹಾಲನ್ನು ಹಲ್ಲಿನ ಬುಡಕ್ಕೆ ಹಾಕಿದರೆ ನೋವು ಕಡಿಮೆಯಾಗುತ್ತದೆ. ಅಡಿಗೆ ಸೋಡ ಎಳ್ಳಿನ ಎಣ್ಣೆಯನ್ನು ಮಿಶ್ರಣಮಾಡಿ ಹತ್ತಿಯಲ್ಲಿ ನೋವಿರುವ ಹಲ್ಲಿಗೆ ಇಟ್ಟರೆ ನೋವು ಮಾಯವಾಗುತ್ತದೆ. ನೋವು ಹಾಗೆ ಇದ್ದರೆ 4 ದಿನದವರೆಗೂ ಪುನರಾವರ್ತಿಸುವುದು ಅಗತ್ಯ. ಆಗ ನೋವು ಮಾಯವಾಗುತ್ತದೆ.

ಬೆಳ್ಳುಳ್ಳಿಯನ್ನು ಉಪ್ಪಿನ ಜೊತೆ ಜಜ್ಜಿ ಮಿಶ್ರಣಮಾಡಿ ನೋವಿರ ಹಲ್ಲಿನ ಮೇಲಿಟ್ಟರೆ ನೋವು ಕಡಿಮೆಯಾಗುತ್ತದೆ.
ಎಳ್ಳಿನ ಎಣ್ಣೆಯಲ್ಲಿ 5 ನಿಮಿಷ ಬಾಯಿ ಮುಕ್ಕಳಿಸುವುದರಿಂದ ಯಾವುದೇ ರೀತಿ ಹಲ್ಲಿನ ತೊಂದರೆ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ.

ಲವಂಗವನ್ನು ನೋವಿರುವ ಹಲ್ಲಿನ ಭಾಗಕ್ಕೆ ಇಡುವುದರಿಂದ ಜಿನುಗುವ ಲವಂಗದ ರಸದಿಂದ ನೋವು ಉಪಶಮನವಾಗುತ್ತದೆ ಹಾಗೂ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ಹಾಗೂ ಒಸಡಿನ ಸ್ವಚ್ಛತೆಯನ್ನು ಕಾಪಾಡಬಹುದು.

ಸೀಬೆ ಎಲೆ ಹಾಗೂ ದಾಳಿಂಬೆ ಎಲೆಗಳನ್ನು ಒಂದು ಬಟ್ಟಲು ನೀರಿನಲ್ಲಿ ಚೆನ್ನಾಗಿ ಕುದಿಸಿ. 2 ರಿಂದ 3 ದಿನ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ನೋವು ಕಡಿಮೆಯಾಗಿ ಹಲ್ಲಿನ ಬೇರುಗಳು ಗಟ್ಟಿಯಾಗುತ್ತವೆ.
ನೀಲಗಿರಿ ತೈಲ ದಂತಕ್ಷಯ ಹಾಗೂ ನೋವಿನ ನಿವಾರಣೆಗೆ ಉತ್ತಮ ಮನೆಮದ್ದು.

LEAVE A REPLY

Please enter your comment!
Please enter your name here