ನಿಂಬೆಹಣ್ಣನ್ನು ಉಪಯೋಗಿಸಿ ಸಿಪ್ಪೆ ಬಿಸಾಡುತ್ತಿರ? ಅದರ ಮುನ್ನ ಓದಿ ಇದನ್ನು…

0
2816
lemon peel on wood background

ನಿಂಬೆ ಹಣ್ಣನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಉಪಯೋಗ ಮಾಡಿಯೇ ಮಾಡುತ್ತೇವೆ.ಅಡುಗೆಗೆ ಉಪಯೋಗಿಸಿದ ನಿಂಬೆಹಣ್ಣನ್ನು ಆಮೇಲೆ ಬಿಸಾಕುತ್ತಿರ? ಹಾಗಿದ್ದರೆ ಇದನ್ನು ಓದಿರಿ…

ಅಡುಗೆ ಮಾಡುವಾಗ ರಸ ಹಿಂಡಿದ ಮೇಲೆ ಉಳಿಯುವ ನಿಂಬೆ ಹಣ್ಣಿನ್ನು ಸುಮ್ಮನೇ ಕಸದ ಬುಟ್ಟಿಗೆ ಹಾಕಬೇಕಿಲ್ಲ. ರಸ ಹಿಂಡಿದರೂ ನಿಂಬೆ ಹಣ್ಣಿನ ಉಪಯೋಗ ಹಲವಾರು ಇದೆ.

ಕ್ಯಾನ್ಸರ್ ವಿರುದ್ಧ ಹೋರಾಟ

ಬೆಹಣ್ಣಿನ ಸಿಪ್ಪೆ ಪೈಬರ್ ಹಾಗೂ ಸಮೃದ್ಧವಾದ ವಿಟಮಿನ್ ಎ ಸತ್ವವನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ. ನಿಂಬೆ ಹಣ್ಣಿನ ಸಿಪ್ಪೆ ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಒಳ್ಳೆಯದು.

ಜಿಡ್ಡಿನ ಪಾತ್ರೆಗೆ
ಜಿಡ್ಡಿನ ಪಾತ್ರೆ ಎಷ್ಟು ಸಾಬೂನು ಹಾಕಿದರೂ ಅದು ಹೋಗಲ್ಲ. ಅದಕ್ಕೆ ರಸ ಹಿಂಡಿ ಬಾಕಿಯಾದ ನಿಂಬೆ ಹಣ್ಣಿನ ತುಂಡು ಬಳಸಿ ಜಿಡ್ಡು ಇರುವ ಪಾತ್ರೆಗೆ ಚೆನ್ನಾಗಿ ಉಜ್ಜಿ. ಇದರಿಂದ ಕೊಳೆಯೂ ಹೋಗುತ್ತದೆ.

ಶೂ ಪಾಲಿಶ್
ಆಫೀಸ್ ಗೆ ಹೋಗುವ ವೇಳೆಗೆ ಶೂ ಪಾಲಿಶ್ ಆಗಿಲ್ಲ. ಪಾಲಿಶ್ ಖಾಲಿಯಾಗಿದೆ ಎಂದಾದರೆ ಉಳಿದ ನಿಂಬೆ ಹಣ್ಣಿನ ತುಂಡು ಬಳಸಿ ಶೂ ಉಜ್ಜಿಕೊಂಡರೆ ಶೈನಿಂಗ್ ಬರುತ್ತದೆ.

ಬಟ್ಟೆಗಳ ಕೊಳೆ ತೆಗೆಯಲು
ಬಿಳಿ ಬಟ್ಟೆ ವಿಪರೀತ ಕೊಳೆಯಾಗಿದ್ದರೆ, ವಾಶಿಂಗ್ ಪೌಡರ್ ಜತೆಗೆ ನಿಂಬೆ ಹಣ್ಣಿನ ತುಂಡು ಹಾಕಿ ನೀರಿನಲ್ಲಿ ಬಟ್ಟೆ ನೆನೆಸಿಡಿ. ಇದರಿಂದ ಬಟ್ಟೆ ಬಿಳಿ ಬಣ್ಣಕ್ಕೆ ಮರಳುತ್ತದೆ.

ಕೈ ಎಣ್ಣೆಯಾಗಿದ್ದರೆ
ಎಣ್ಣೆ ಪದಾರ್ಥ ಸೇವಿಸಿದ್ದರೆ ಅಥವಾ ಅಡುಗೆ ಮಾಡಿದ ಮೇಲೆ ಕೈಗೆ ಎಣ್ಣೆ ಅಂಟಿಕೊಂಡಿದ್ದರೆ, ನಿಂಬೆ ಹಣ್ಣಿನ ತುಂಡಿನಿಂದ ಕೈ ಉಜ್ಜಿಕೊಂಡು ತೊಳೆದರೆ ಜಿಡ್ಡು ಮಾಯವಾಗುತ್ತದೆ.

ನಿಂಬೆಯ ಸಿಪ್ಪೆಯ್ಲಿ ಪೆಕ್ಟಿನ್‌ ಇರುತ್ತದೆ ಇದರಿಂದ ತೂಕ ಕಡಿಮೆಯಾಗುತ್ತದೆ.ವಿಟಮಿನ್‌ ಸಿ ಅಂಶ ಹೆಚ್ಚಿರುತ್ತದೆ. ಇದರಿಂದ ನಿಶ್ಯಕ್ತಿ ದೂರವಾಗುತ್ತದೆ.ಆ್ಯಂಟಿ ಬ್ಯಾಕ್ಟ್ರೀರಿಯಾ ಅಂಶವಿದೆ ಇದು ಚರ್ಮದ ಸಮಸ್ಯೆ,

ಮೊಡವೆ ಸಮಸ್ಯೆಯನ್ನು ದೂರಮಾಡುತ್ತದೆ.ನಿಂಬೆ ರಸಕ್ಕಿಂತ ಹೆಚ್ಚು ಪೊಟ್ಯಾಶಿಯಮ್‌ ಇರುತ್ತದೆ.ಇದು ಹೃದಯ ಸಮಸ್ಯೆಯಿಂದ ಪಾರು ಮಾಡುತ್ತದೆ.ಕ್ಯಾಲ್ಸಿಯಮ್ ಕೂಡಾ ಹೆಚ್ಚು ಇರುತ್ತದೆ.ಇದರಿಂದ ಮೂಳೆಗಳು ಬಲಶಾಲಿಯಾಗುತ್ತದೆ.

LEAVE A REPLY

Please enter your comment!
Please enter your name here